25 ಬೆರಳುಗಳ ಅಪರೂಪದ ಮಗು ಜನನ!

newsics.com 25 ಬೆರಳುಗಳು ಇರುವ ಅಪರೂಪದ ಮಗು ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಜನಿಸಿದೆ. ಗಂಡು ಮಗುವೊಂದು 12 ಕಾಲ್ಬೆರಳುಗಳು, 13 ಕೈ ಬೆರಳು, ಒಟ್ಟು 25 ಬೆರಳನ್ನು ಹೊಂದಿದೆ. ಮಗುವಿನ ಬಲಗೈಗೆ 6 ಬೆರಳು, ಎಡಗೈಗೆ 7 ಬೆರಳು, ಎರಡು ಕಾಲಿನಲ್ಲಿ 6 ಬೆರಳುಗಳಿವೆ. ಇನ್ನು ಮಗು ಕಂಡು ವೈದ್ಯರು ಆಶ್ಚರ್ಯಗೊಂಡಿದ್ದಾರೆ. ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.