newsics.com
ಬೆಂಗಳೂರು: ನಾಳೆ (ಮಂಗಳವಾರ ಆ.5) ರಾಜ್ಯಾದ್ಯಂತ ಯಾವ ಬಸ್‌ಗಳೂ ಸಂಚರಿಸಲ್ಲ ಎಂದು ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ಹೇಳಿದ್ದಾರೆ.
ನಾಳೆ ಒಂದು ದಿನದ ಮಟ್ಟಿಗೆ ಮುಷ್ಕರ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ, ಹೈಕೋರ್ಟ್ ಆದೇಶ ಪ್ರತಿ ಕೈಸೇರದ ಹಿನ್ನೆಲೆಯಲ್ಲಿ ನಾಳೆ(ಆ.5)ಮುಷ್ಕರ ನಡೆಯಲಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಬಸ್‌ಗಳು ಸಂಚಾರ ನಿಲ್ಲಿಸಲಿವೆ ಎಂದು ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ಅರಿಯರ್ಸ್ ಸೇರಿದಂತೆ 12 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆನೀಡಿದ್ದು, ನಾಳೆ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲಿವೆ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.