newsics.com
ಬೆಂಗಳೂರು: ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 10ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಪೋಸ್ಟ್ ಮಾಡಿದ್ದು “ಆಗಸ್ಟ್ 10ಕ್ಕೆ ಹಳದಿ ಮಾರ್ಗ ಅಧೀಕೃತವಾಗಿ ಆರಂಭ ಆಗಲಿದೆ. ಕೇಂದ್ರದಿಂದ ಹಳದಿ ಮಾರ್ಗ ಆರಂಭದ ಬಗ್ಗೆ ಘೋಷಣೆ ಮಾಡಲಾಗಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಯೆಲ್ಲೋ ಲೈನ್ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಮೆಟ್ರೋ 3ನೇ ಹಂತದ ಕಾಮಗಾರಿ ಆರಂಭಕ್ಕೂ ಅಡಿಪಾಯ ಹಾಕಲಿದ್ದಾರೆ. ಯೆಲ್ಲೋ ಲೈನ್ ಪ್ರಿಯರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಹಳದಿ ಮಾರ್ಗದ ವಿಶೇಷತೆ ಏನು..?
ಒಟ್ಟು 19.5 ಕಿ.ಮೀ ಉದ್ದದಲ್ಲಿ ಸಿದ್ಧವಾಗಿರುವ ಹಳದಿ ಮಾರ್ಗ
ಪ್ರತಿದಿನ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಚಾರ
ಪ್ರತಿದಿನ 25 ಸಾವಿರ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ
ಪ್ರತಿನಿತ್ಯ 20 ನಿಮಿಷ ಅಂತರದಲ್ಲಿ ಸಂಚರಿಸಲಿರುವ ಟ್ರೈನ್‌ಗಳು
ಪ್ರಜ್ವಲ್ ಗೆ ಕೈದಿ ನಂಬರ್ ಕೊಟ್ಟ ಜೈಲು ಅಧಿಕಾರಿಗಳು ; ಇನ್ಮುಂದೆ ಹೀಗೆ ಬದುಕಬೇಕು!