Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದೇಶಪ್ರಮುಖ

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

Share
2 Min Read
SHARE

newsics.com

ಬೆಂಗಳೂರು: ರಾಜ್ಯ ಸರ್ಕಾರವು ಗುರುವಾರ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.

ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು, ನಿಗಮ-ಮಂಡಳಿಗಳ ಮುಖ್ಯಸ್ಥರು ಹಾಗೂ ಹಲವು ಹಿರಿಯ ಅಧಿಕಾರಿಗಳಿಗೆ ಹೊಸ ಹುದ್ದೆಗಳು ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಮುಖ ಬದಲಾವಣೆ ನಡೆದಿದೆ. ಸಮೀರ್ ಶುಕ್ಲಾ ಅವರನ್ನು ನವದೆಹಲಿಯ ಕರ್ನಾಟಕ ಭವನದ ವಾಸಿ ಕಮಿಷನರ್ ಆಗಿ ನಿಯೋಜಿಸಲಾಗಿದ್ದು, ಅವರ ಸ್ಥಾನಕ್ಕೆ ಆರ್. ದೀಪ್ ಅವರನ್ನು ತರಲಾಗಿದೆ. ಅವರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಹುದ್ದೆಯ ಜೊತೆಗೆ ಪಂಚಾಯತ್ ರಾಜ್ ವಿಭಾಗದ ಹೆಚ್ಚುವರಿ ಜವಾಬ್ದಾರಿಯೂ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ತುಳಸಿ ಮದ್ದಿನೇನಿ ಅವರನ್ನು ಉನ್ನತ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಇದೇ ವೇಳೆ, ಡಾ. ಪ್ರಸಾದ್ ಎನ್.ವಿ. ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ನವದೆಹಲಿಯ ಕರ್ನಾಟಕ ಭವನದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಇಮ್ಕೊಂಗ್ಲಾ ಜಮೀರ್ ಎಂ. ಅವರನ್ನು ಕಾರ್ಯದರ್ಶಿ (ಸಮನ್ವಯ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಸಾರಿಗೆ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಕುಮಾರ್ ಕೆ.ಬಿ. ಅವರನ್ನು ಕೆಎಸ್‌ಆರ್‌ಟಿಸಿ ಎಂಡಿಯಾಗಿ ನೇಮಕ ಮಾಡಲಾಗಿದೆ. ರಘುನಂದನ್ ಮೂರ್ತಿ ಅವರಿಗೆ ಬಿಎಂಟಿಸಿ ಎಂಡಿ ಜವಾಬ್ದಾರಿ ನೀಡಲಾಗಿದ್ದು, ಖಜಾನೆ ಇಲಾಖೆಯ ಜವಾಬ್ದಾರಿಯೂ ಮುಂದುವರಿಯಲಿದೆ.
ಡಾ. ಸತೀಶ್ ಬಿ.ಸಿ. ಅವರನ್ನು ಕೃಷಿ ಇಲಾಖೆಯ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಎಂಎಸ್‌ಎಂಇ ನಿರ್ದೇಶಕರ ಜವಾಬ್ದಾರಿ ವಹಿಸಲಾಗಿದೆ. ಅಕ್ರಮ್ ಪಾಷಾ ಅವರನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಿಷನ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ನಿತೀಶ್ ಕೆ. ಅವರಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಹುದ್ದೆ ನೀಡುವುದರ ಜೊತೆಗೆ ಬೃಹತ್ ಬೆಂಗಳೂರು ಪ್ರಾಧಿಕಾರದ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ವಿಶೇಷ ಕಮಿಷನರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ. ಗಜಾನನ ಬಾಲೆ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.
ಇದೇ ವೇಳೆ, ಹೆಚ್ಚುವರಿ ಪ್ರಭಾರಗಳನ್ನೂ ಸರ್ಕಾರ ಹಂಚಿಕೆ ಮಾಡಿದೆ. ಬಿಡಿಎ ಕಮಿಷನರ್ ಮೇಜರ್ ಮಣಿವಣ್ಣನ್ ಪಿ. ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಕಮಿಷನರ್ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ವಿ. ಅವರಿಗೆ ಪ್ರವಾಸೋದ್ಯಮ ಇಲಾಖೆಯ ಕಮಿಷನರ್ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಎಲ್ಲಾ ವರ್ಗಾವಣೆಗಳು ಜಾರಿಗೆ ಬರಲಿವೆ.

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

“ಭಕ್ತಿ ಹೆಸರಿನಲ್ಲಿ ಭಯಾನಕ ಶೋಷಣೆ!”: ಮಹಿಳೆ ಮೇಲೆ ವರ್ಷಗಳ ಲೈಂಗಿಕ ಶೋಷಣೆ; ಮೂತ್ರ ಕುಡಿಯುವಂತೆ ಬಲವಂತ, ಸ್ವಘೋಷಿತ ‘ದೇವಮಾನವ’ ಸೇರಿ 8 ಮಂದಿ ಬಂಧನ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

TAGGED:Major surgery to the administrative machinery: Transfer of 14 IAS officers
Share This Article
Facebook Twitter Copy Link Print
Previous Article Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?
Next Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

Popular Posts

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

5 Min Read

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read
ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?