newsics.com / ನ್ಯೂಸಿಕ್ಸ್
ನವದೆಹಲಿ: ಕೆಲ ತಿಂಗಳಲ್ಲಿ ಅಡುಗೆ ಎಣ್ಣೆಗಳ (cooking oils) ಬೆಲೆ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾರುಕಟ್ಟೆ ತಜ್ಞರು ಸುಳಿವು ನೀಡಿದ್ದಾರೆ.
ಸುಮಾರು 4 ತಿಂಗಳುಗಳಿಂದ ನಡೆಯುತ್ತಿದ್ದ ಅಮೆರಿಕ (America) ಇರಾನ್ (Iran) ಹಾಗೂ ಇಸ್ರೇಲ್ (Israel war) ನಡುವಿನ ಯುದ್ಧ ಕೊನೆಗೂ ಅಂತ್ಯವಾಗಿದೆ. ಇದರಿಂದಾಗಿ ಇಡೀ ಜಗತ್ತು ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಇದರ ಬೆನ್ನಲ್ಲೇ ಖಾದ್ಯ ತೈಲ ದರ ಇಳಿಕೆಯಾಗಲಿದೆ ಎಂದು ವರದಿಗಳು ಹೇಳಿವೆ. ಶೇ.20ರಷ್ಟು ದರ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ತಿಂಗಳುಗಳಲ್ಲಿ ಕ್ರಮೇಣ ಆಗಬಹುದು. ಪ್ರಸ್ತುತ ಶಾಂತಿ ಒಪ್ಪಂದದಿಂದಾಗಿ ಕ್ರೂಡ್ ಆಯಿಲ್ ಬೆಲೆಗಳು ಇಳಿದಿವೆ.
ಇರಾನ್ ಹಿಡಿತದಲ್ಲಿ ಇರುವ ಹಾರ್ಮುಜ್ ಜಲಸಂಧಿ ಓಪನ್ ಆಗುತ್ತಿದೆ. ಜಗತ್ತಿನ 20% ತೈಲ ಸರಬರಾಜು ಇಲ್ಲಿಂದ ಹಾದುಹೋಗುತ್ತದೆ. ಯುದ್ಧದಲ್ಲಿ ಇದು ಮುಚ್ಚಲ್ಪಟ್ಟಿದ್ದರಿಂದ ಕ್ರೂಡ್ ಆಯಿಲ್ ಬೆಲೆಗಳು ಏರಿದ್ದವು. ಒಂದು ಬ್ಯಾರೆಲ್‌ಗೆ 70 ಡಾಲರ್‌ನಿಂದ 120 ಡಾಲರ್‌ಗೆ ಏರಿಕೆಯಾಗಿತ್ತು. ಇದೀಗ ಹಾರ್ಮುಜ್ ಜಲಸಂಧಿ ಓಪನ್ ಆಗಿದೆ. ಇದು ಸರಕು ಸಾಗಣೆ ವೆಚ್ಚಗಳು, ಸಾಗಾಣಿಕೆ ವಿಳಂಬಗಳು ಮತ್ತು ಶಕ್ತಿಯ ವೆಚ್ಚಗಳು ಹೆಚ್ಚಿಸಿ ತೈಲ ಮಾರುಕಟ್ಟೆಗೆ ಅನುಕೂಲ ಮಾಡಿಕೊಡುತ್ತದೆ.
ಕಚ್ಚಾ ಎಣ್ಣೆ ಬೆಲೆ ಏರಿಕೆಯಿಂದ ಅಡುಗೆ ಎಣ್ಣೆಮೇಲೂ ಪರಿಣಾಮ ಬೀರುತ್ತದೆ. ಕಚ್ಚಾ ತೈಲಗಳ ಬೆಲೆ ಏರಿಕೆ ಆದರೆ ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇತ್ತ ರಾಸಾಯನಿಕ ಗೊಬ್ಬರಗಳ (fertilizer) ಬೆಲೆ ಏರುತ್ತದೆ. ಜೊತೆಗೆ ಪಾಮ್ ಎಣ್ಣೆ, ಸೋಯಾ ಎಣ್ಣೆ ಮುಂತಾದವುಗಳ ಬೆಲೆಯೂ ಏರುತ್ತದೆ. ಭಾರತ ಶೇಕಡಾ 60ಕ್ಕಿಂತ ಹೆಚ್ಚು ಅಡುಗೆ ಎಣ್ಣೆಯನ್ನು ಹೊರದೇಶದಿಂದ ತರುತ್ತದೆ. ಆದ್ದರಿಂದ ನಮ್ಮಲ್ಲಿ ಅಡುಗೆ ಎಣ್ಣೆ ಬೆಲೆ ಶೇಕಡಾ 10ರಿಂದ ಶೇಕಡಾ 20ರಷ್ಟು ಏರಿಕೆಯಾಗಿತ್ತು.
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮುಖ್ಯಶಿಕ್ಷಕ ಪ್ರಕರಣ: 5 ಶಿಕ್ಷಕರು ಸೇರಿದಂತೆ 10 ಮಂದಿಯ ವಿರುದ್ಧ ಎಫ್ಐಆರ್
ದರ್ಶನ್_ಕೇಸ್‌ಗೆ_ಹೊಸ_ತಿರುವು: ಹೈಕೋರ್ಟ್‌ನಲ್ಲಿ ವಕಾಲತ್ತಿನಿಂದ ಹಿಂದೆ ಸರಿಯಲು ಮುಂದಾದ ದರ್ಶನ್ ಪರ ವಕೀಲ
Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ
Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!