newsics.com / ನ್ಯೂಸಿಕ್ಸ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಬೋಟ್‌ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ತಾಯಿಯ ಕೈಯಲ್ಲಿದ್ದ ಐಫೋನ್, ಮಗುವಿನ ಕೈಗೆ ಸಿಕ್ಕಿದ್ದೇ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ.
ಬೋಟ್‌ನಲ್ಲಿ ನಿಂತಿದ್ದ ಮಗು ಆಟವಾಡುತ್ತಾ ಏಕಾಏಕಿ ಐಫೋನ್ ಅನ್ನು ಕೆರೆಯ ನೀರಿಗೆ ಎಸೆದಿದೆ. ಫೋನ್ ನೀರಿಗೆ ಬೀಳುವುದನ್ನು ಕಂಡ ತಾಯಿ ತಡೆಯಲು ಪ್ರಯತ್ನಿಸಿದರೂ ಅಷ್ಟರಲ್ಲೇ ದುಬಾರಿ ಮೊಬೈಲ್ ನೀರುಪಾಲಾಗಿತ್ತು.
ಕಣ್ಣೆದುರೇ ಫೋನ್ ಕಳೆದುಕೊಂಡ ತಾಯಿ ಶಾಕ್‌ಗೆ ಒಳಗಾಗಿದ್ದು, ಮುಖ ಮುಚ್ಚಿಕೊಂಡು ಕುಳಿತ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು “ಮಕ್ಕಳ ಕೈಗೆ ದುಬಾರಿ ವಸ್ತುಗಳನ್ನು ಕೊಡಬಾರದು ಎನ್ನುವುದಕ್ಕೆ ಇದೇ ಉದಾಹರಣೆ” ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು “ಐಫೋನ್ ವಾಟರ್‌ಪ್ರೂಫ್ ಇರಬಹುದು, ಆದರೆ ಕೆರೆಯ ತಳದಿಂದ ಅದನ್ನು ಮರಳಿ ತರುವುದು ಅಸಾಧ್ಯ” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
Kid throws his mom’s iPhone into the lake during a boat ride 😂 pic.twitter.com/Bg22E4J2Vs
— Tehxi (@yajnshri) June 18, 2026
Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!