Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?
ಪ್ರಮುಖಮನರಂಜನೆ

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

Share
2 Min Read
SHARE

newsics.com/ನ್ಯೂಸಿಕ್ಸ್

‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ಸಮಂತಾ ಈ ವಾರ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸ್ವತಃ ಸಿನಿಮಾ ನಿರ್ಮಿಸಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಸ್ಯಾಮ್ ಜೋಡಿಯಾಗಿ ಕನ್ನಡ ನಟ ದಿಗಂತ್ ನಟಿಸಿದ್ದಾರೆ. ಇದೆಲ್ಲದರ ನಡುವೆ ನಟಿ ಸಮಂತಾ ಗರ್ಭಿಣಿ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.

ಸಾಕಷ್ಟು ಜನ ಅಭಿಮಾನಿಗಳು ಈಗಾಗಲೇ ಸಮಂತಾಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ನಟ ನಾಗಚೈತನ್ಯಾ ಜೊತೆ ಮದುವೆಯಾಗಿದ್ದ ಸಮಂತಾ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ಬಳಿಕ ಇಬ್ಬರೂ ಬೇರೆ ವ್ಯಕ್ತಿಗಳ ಜೊತೆ ಮದುವೆ ಆಗಿದ್ದರು. 6 ತಿಂಗಳ ಹಿಂದೆ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮದುವೆ ನಡೆದಿತ್ತು. ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಸ್ವತಃ ಪತಿ ರಾಜ್ ಕಥೆ, ಚಿತ್ರಕಥೆ ಬರೆದಿದ್ದಾರೆ.

‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಸಮಂತಾ ಪ್ರಚಾರ ಮಾಡಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ಒಂದೇ ದಿನ 40 ಸಂದರ್ಶನಗಳಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಆದರೆ ಸಿನಿಮಾ ಪ್ರಚಾರದ ವೇಳೆ ಸಮಂತಾ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಆಕೆ ಗರ್ಭಿಣಿ ಆಗಿದ್ದಾರಾ ಎನ್ನುವ ಅನುಮಾನ ಮೂಡಿದೆ. ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

ತೆಲುಗು ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಸನ್ನಿವೇಶಗಳಲ್ಲಿ ಸ್ಯಾಮ್ ಅಬ್ಬರಿಸಿದ್ದಾರೆ. 2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಪ್ರೀತಿಸಿ ಮದುವೆ ಆಗಿದ್ದರು. ‘ಏ ಮಾಯ ಚೆಸಾವೆ’ ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗ ಶುರುವಾಗಿದ್ದ ಪರಿಚಯ ಬಳಿಕ ಪ್ರೀತಿಯಾಗಿ ಬದಲಾಗಿತ್ತು. 7 ವರ್ಷಗಳ ಬಳಿಕ ಇಬ್ಬರೂ ಹಸೆಮಣೆ ಏರಿದ್ದರು.

ಮದುವೆಯಾಗಿ 4 ವರ್ಷಗಳ ಬಳಿಕ ಚೈಸ್ಯಾಮ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಲು ನಿರ್ಧರಿಸಿ ಡಿವೋರ್ಸ್ ಘೋಷಿಸಿದ್ದರು. ಡಿವೋರ್ಸ್ ಆಗಿ 3 ವರ್ಷಗಳ ಬಳಿಕ ತಮಿಳು ನಟಿ ಶೋಭಿತಾ ಅವರನ್ನು ನಾಗಚೈತನ್ಯಾ ಪ್ರೀತಿಸಿ ಮದುವೆ ಆಗಿದ್ದರು. ಮತ್ತೊಂದು ಕಡೆ ‘ಫ್ಯಾಮಿಲಿಮ್ಯಾನ್’-2 ವೆಬ್ ಸೀರಿಸ್ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮತ್ತೆ ಪ್ರೀತಿಲಿ ಬಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಶಾ ಫೌಂಡೇಷನ್‌ನಲ್ಲಿ ರಾಜ್-ಸ್ಯಾಮ್ ಮದುವೆ ಸರಳವಾಗಿ ನಡೆದಿತ್ತು.

ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ನಾಗಚೈತನ್ಯಾ ಹಾಗೂ ಸಮಂತಾ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅದೇ ಕಾರಣಕ್ಕೆ ಜೋಡಿ ದೂರಗಲು ನಿರ್ಧರಿಸಿದ್ದರು ಎನ್ನುವ ವದಂತಿ ಹರಿದಾಡಿತ್ತು. ಆದರೆ ಈ ವಿಚಾರ ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ. ಇದೀಗ ಸಮಂತಾ ಗರ್ಭಿಣಿ ಆಗಿದ್ದಾರೆ ಎನ್ನುವ ವದಂತಿ ಭಾರೀ ವೈರಲ್ ಆಗ್ತಿದೆ.

ಡಿವೋರ್ಸ್ ಬೆನ್ನಲ್ಲೇ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುವಂತಾಯಿತು. ಅದರಿಂದ ಚೇತರಿಸಿಕೊಳ್ಳಲು ಬಹಳ ಶ್ರಮಿಸಿದ್ದರು. ಈ ವೇಳೆ ರಾಜ್ ನಿಡುಮೊರು ಆಕೆಗೆ ಬೆಂಬಲವಾಗಿ ನಿಂತಿದ್ದರು. ಬಳಿಕ ಸಮಂತಾ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಅದರ ಜವಾಬ್ದಾರಿಯನ್ನು ರಾಜ್ ವಹಿಸಿಕೊಂಡಿದ್ದಾರೆ. ‘ಶುಭಂ’ ಎಂಬ ಚಿತ್ರವನ್ನು ಈ ಹಿಂದೆ ತಮ್ಮ ಸಂಸ್ಥೆಯಲ್ಲಿ ಸ್ಯಾಮ್ ನಿರ್ಮಿಸಿದ್ದರು.

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

TAGGED:Is actress Samantha pregnant? Is there a reason for the secret?
Share This Article
Facebook Twitter Copy Link Print
Previous Article ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!
Next Article Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

Popular Posts

ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

2 Min Read

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

2 Min Read

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

3 Min Read

You Might Also Like

ಕರ್ನಾಟಕಪ್ರಮುಖ

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read
ಕರ್ನಾಟಕಪ್ರಮುಖ

Free Bus ವೋಟರ್ ಐಡಿ ಇರುವ ಮಹಿಳೆಯರಿಗೆ ಮಾತ್ರ ಇನ್ನು ಉಚಿತ ಬಸ್ ಪ್ರಯಾಣ ಅವಕಾಶ

2 Min Read
ಕರ್ನಾಟಕಪ್ರಮುಖಮನರಂಜನೆ

BBK 13 ಬಿಗ್ ಬಾಸ್ ಕನ್ನಡ 13; ವೀಕ್ಷಕರ ಬಯಕೆಯ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

2 Min Read
ಪ್ರಮುಖಮನರಂಜನೆ

ಕೊಡಗಿನಲ್ಲಿರುವ ರಶ್ಮಿಕಾ ಕನಸಿನ ಮನೆ ಒಳಗೆ ಹೇಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?