Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ
ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

Share
2 Min Read
SHARE

newsics.com / ನ್ಯೂಸಿಕ್ಸ್

ಭಾರತೀಯ ಮೂಲದ ಯುವ ಆಲ್‌ರೌಂಡರ್ ಇರಾ ಏರಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಅಂಡರ್-19 ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇರಾ, ತಮ್ಮ ಆಟ ಮತ್ತು ಸೌಂದರ್ಯದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕ್ರಶ್ ಆಗಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನಲ್ಲಿ ಮತ್ತೊಂದು ಹೊಸ ಸ್ಟಾರ್‌ ಉದಯವಾಗ್ತಿದೆ. ಭಾರತೀಯ ಮೂಲದ ಯುವ ಆಲ್‌ರೌಂಡರ್ ಇರಾ ಏರಿ, ತನ್ನ ಅದ್ಭುತ ಆಟದ ಜೊತೆಗೆ ಮನಮೋಹಕ ಸೌಂದರ್ಯದಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಕೇವಲ 17 ನೇ ವಯಸ್ಸಿನಲ್ಲಿಯೇ ಆಸ್ಟ್ರೇಲಿಯಾ ಅಂಡರ್-19 ಮಹಿಳಾ ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಇರಾ, ಭವಿಷ್ಯದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.

2009 ರ ಫೆಬ್ರವರಿ 25 ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಹೈಡೆಲ್ಬರ್ಗ್‌ನಲ್ಲಿ ಜನಿಸಿದ ಇರಾ ಏರಿ, ಅಲ್ಲಿಯೇ ನೆಲೆಸಿರುವ ಭಾರತೀಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಚಿಕ್ಕಂದಿನಿಂದಲೇ ಕ್ರಿಕೆಟ್‌ನತ್ತ ಅಪಾರ ಒಲವು ಬೆಳೆಸಿಕೊಂಡಿದ್ದ ಇರಾ, ಸ್ಥಳೀಯ ಕ್ಲಬ್‌ಗಳಲ್ಲಿ ಆಡುತ್ತಾ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದರು. ಶಾಲಾ ಮಟ್ಟದ ಟೂರ್ನಮೆಂಟ್‌ಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಕೋಚ್‌ ಪ್ರಶಂಸೆಗೆ ಪಾತ್ರರಾಗಿದ್ದರು.

ಆಸ್ಟ್ರೇಲಿಯಾದ ವಿಕ್ಟೋರಿಯಾ ವೆಸ್ಟರ್ನ್ ರೀಜನ್ ಜೂನಿಯರ್ ಕ್ರಿಕೆಟ್ ಅಸೋಸಿಯೇಷನ್ ​​ಮೂಲಕ ಇರಾ ಅವರ ಕ್ರಿಕೆಟ್ ಪ್ರಯಾಣ ಆರಂಭವಾಯಿತು. ಕಠಿಣ ಶಿಸ್ತು, ಅತ್ಯುತ್ತಮ ಫಿಟ್‌ನೆಸ್ ಮತ್ತು ಆಟದ ಮೇಲಿನ ಅಚಲ ಭಕ್ತಿಯಿಂದಾಗಿ ಹಂತ-ಹಂತವಾಗಿ ಬೆಳೆದ ಅವರು, ಶೀಘ್ರದಲ್ಲೇ ರಾಜ್ಯ ಮಟ್ಟದ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅದಾದ ಬಳಿಕ ತಮ್ಮ ವೃತ್ತಿಜೀವನದ ಪ್ರಮುಖ ಮೈಲಿಗಲ್ಲಾಗಿ ಆಸ್ಟ್ರೇಲಿಯಾ ಮಹಿಳಾ ಅಂಡರ್-19 ತಂಡಕ್ಕೆ ಆಯ್ಕೆಯಾದರು.

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಮಹಿಳಾ ಅಂಡರ್-19 ತ್ರಿಕೋನ ಸರಣಿಯಲ್ಲಿ ಇರಾ ಏರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಡೀ ಟೂರ್ನಮೆಂಟ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒತ್ತಡದ ಸಂದರ್ಭಗಳಲ್ಲೂ ವಿಕೆಟ್ ಪಡೆಯುವ ಅವರ ಸಾಮರ್ಥ್ಯ ಮತ್ತು ಬೌಲಿಂಗ್ ಸ್ಥಿರತೆಯು ಸೆಲೆಕ್ಟರ್‌ಗಳ ಮನಗೆದ್ದಿದೆ.

ಪ್ರಸ್ತುತ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆದಾರರು ಇರಾ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದೇ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಶೀಘ್ರದಲ್ಲೇ ಆಸ್ಟ್ರೇಲಿಯಾದ ಸೀನಿಯರ್ ಮಹಿಳಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಆಲ್‌ರೌಂಡರ್ ಆಗಿ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನೆರವಾಗುವ ಗುಣ ಹೊಂದಿರುವುದು ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇರಾ ಏರಿ ಹೆಸರು ವೈರಲ್‌ ಆಗುತ್ತಿದೆ. ಇವರ ಸೌಂದರ್ಯ, ಫಿಟ್‌ನೆಸ್ ಮತ್ತು ವಿಶಿಷ್ಟ ಆಟದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವು ಅಭಿಮಾನಿಗಳಂತೂ ಇವರನ್ನು ಆಸ್ಟ್ರೇಲಿಯಾದ ಸ್ಟಾರ್ ಮಹಿಳಾ ಕ್ರಿಕೆಟರ್ ಎಲಿಸ್ ಪೆರ್ರಿ (Ellyse Perry) ಅವರಿಗೆ ಹೋಲಿಸಿ ಪ್ರಶಂಸಿಸುತ್ತಿದ್ದಾರೆ. ಆದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಇರಾ ತನ್ನದೇ ಆದ ಸ್ವಂತ ಪ್ರತಿಭೆಯಿಂದ ವಿಶಿಷ್ಟ ಗುರುತನ್ನು ಗಳಿಸುತ್ತಿದ್ದಾರೆ. ಭಾರತೀಯ ಮೂಲದ ಈ ಯುವ ಕ್ರಿಕೆಟರ್ ಈಗ ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳ ‘ಹೊಸ ಕ್ರಶ್’ ಆಗಿ ಬದಲಾಗಿದ್ದಾರೆ.

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

TAGGED:#assees #cricketer #iraaery #newcrush #news #newsics
Share This Article
Facebook Twitter Copy Link Print
Previous Article Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?
Next Article Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

Popular Posts

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

You Might Also Like

ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!

1 Min Read
ಕರ್ನಾಟಕದೇಶಪ್ರಮುಖ

PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?