newsics.com
ಸಾಕಷ್ಟು ಪ್ರಯೋಜನಗಳನ್ನು ನೀಡುವ ಅಲೋವೆರಾ ಗಿಡವನ್ನು ಮನೆಯಲ್ಲಿ ಬೆಳೆಸುವುದು ಸುಲಭ ಹಾಗೂ ಲಾಭದಾಯಕ ಕೂಡ. ಅಲೋವೆರಾ ನಿಮ್ಮ ಮನೆಯ ಉದ್ಯಾನಕ್ಕೆ ಸೌಂದರ್ಯವನ್ನು ಸೇರಿಸುವುದಲ್ಲದೆ, ಇದು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಲೋವೆರಾ ಗಿಡವನ್ನು ನೆಟ್ಟರೆ ಅದು ತುಂಬಾ ಮಂಗಳಕರ ಫಲಗಳನ್ನ ನೀಡುತ್ತದೆ.
ವಾಸ್ತು ಪ್ರಕಾರ ಮನೆಯಲ್ಲಿ ಅಲೋವೆರಾವನ್ನು ನೆಡುವುದರಿಂದ ನಮ್ಮ ಜೀವನದ ಪ್ರಗತಿಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು ಎನ್ನುವ ನಂಬಿಕೆ ಇದೆ. ಅಲೋವೆರಾವನ್ನು ಮನೆಯಲ್ಲಿ ನೆಡುವುದು ಎಂದರೆ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯವುದು ಎಂಬ ಅರ್ಥವಾಗಿದೆ. ಅಲೋವೆರಾವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲಸಿರುತ್ತಾಳೆ ಮತ್ತು ನಾವು ಎಂದಿಗೂ ಸಂಪತ್ತು, ವೈಭವ ಮತ್ತು ಸಂತೋಷದ ಕೊರತೆಯನ್ನು ಎದುರಿಸುವುದಿಲ್ಲ ಎನ್ನಲಾಗುತ್ತದೆ.
ವಾಸ್ತು ಪ್ರಕಾರ ಅಲೋವೆರಾ ಗಿಡವನ್ನು ಮನೆಯಲ್ಲಿ ಗಿಡ ನೆಟ್ಟರೆ ಅದೃಷ್ಟ ಹೆಚ್ಚುತ್ತದೆ. ಕಠಿಣ ಪರಿಶ್ರಮದ ನಂತರವೂ ಕೆಲಸದಲ್ಲಿ ಪ್ರಗತಿ ಸಾಧಿಸದಿದ್ದರೆ, ಮನೆಯಲ್ಲಿ ಅಲೋವೆರಾ ಗಿಡವನ್ನು ನೆಡಬಹುದು. ಅಲೋವೆರಾ ಸಸ್ಯವು ಉದ್ಯೋಗ ಪಡೆಯುವಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಮನೆಯಲ್ಲಿ ಅಲೋವೆರಾವನ್ನು ನೆಡುವುದರಿಂದ ಪ್ರೀತಿಯ ಜೀವನದಲ್ಲಿ ಬರುವ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಆದರೆ, ಈ ಸಸ್ಯವನ್ನು ನೆಡುವಾಗ, ದಿಕ್ಕನ್ನು ನೆನಪಿನಲ್ಲಿಡಿ. ನಿಮ್ಮ ಪ್ರೀತಿಯ ಜೀವನದಲ್ಲಿ ಸಮಸ್ಯೆ ಇದ್ದರೆ, ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಅಲೋವೆರಾ ಸಸ್ಯವನ್ನು ನೆಡುವುದು ಅತ್ಯಂತ ಶುಭಕರವಾಗಿರುತ್ತದೆ. ಹೀಗೆ ಮಾಡುವುದರಿಂದ, ನಿಮ್ಮ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಬಡ್ತಿಯ ಅವಕಾಶಗಳು ಸೃಸ್ಟಿಯಾಗುತ್ತದೆ. ಅಲ್ಲದೆ, ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಅಲೋವೆರಾವನ್ನು ನಮ್ಮ ಮನೆಯ ಉದ್ಯಾನ ಅಥವಾ ಬಾಲ್ಕನಿಯಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ಮನೆಯಿಂದ ನಕಾರಾತ್ಮಕತೆ ದೂರವಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಸಹ ಸಹಾಯ ಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಅಲೋವೆರಾ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೇ, ಅದರಿಂದ ವಾಸ್ತು ದೋಷ ಹಾಗೂ ಅಏಕ ಸಮಸ್ಯೆಗಳು ಸಹ ಬರುತ್ತದೆ. ಇನ್ನು ವಾಸ್ತು ಪ್ರಕಾರ ಅಲೋವೆರಾ ಗಿಡವನ್ನು ವಾಯುವ್ಯ ದಿಕ್ಕಿನಲ್ಲಿ ನೆಡಬಾರದು. ಹೀಗೆ ಮಾಡಿದರೆ ನಕಾರಾತ್ಮಕ ಫಲಿತಾಂಶ ಬರಬಹುದು. ಅಲ್ಲದೇ, ನೀವು ಹಣಕಾಸಿನ ಸಮಸ್ಯೆಗಳಿಂದ ಸಹ ಬಳಲುವ ಸಾಧ್ಯತೆ ಇದೆ.