newsics.com
ಮುಂಬೈ: ಜನಪ್ರಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಬಾಲಿವುಡ್ ನಟ ಮತ್ತು ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ಕುಮಾರ್ ಕೊನೆಯುಸಿರೆಳೆದಿದ್ದಾರೆ.
ಟಿ-ಸೀರಿಸ್ ಅಧ್ಯಕ್ಷ ಮತ್ತು ಸಿನಿಮಾ ನಿರ್ಮಾಪಕ ಭೂಷಣ್ ಕುಮಾರ್ ಸೋದರ ಸಂಬಂಧಿ ತಿಶಾ ಅವರು ಕೇವಲ 21ನೇ ವಯಸ್ಸಿಗೇ ನಿಧನರಾದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ತಿಶಾ ಅವರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು 2023ರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರದ ಮೊದಲ ಪ್ರದರ್ಶನಕ್ಕೆ ಹಾಜರಾಗಿದ್ದರು.
ಅಲ್ಲದೆ ಆಗಾಗ ತಂದೆ ಕೃಷ್ಣ ಕುಮಾರ್ ಜತೆ ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು.
ತಿಶಾ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ಕುಟುಂಬದವರು ಆಕೆಯನ್ನು ಚಿಕಿತ್ಸೆಗಾಗಿ ಜರ್ಮನಿಗೆ ಕರೆದೊಯ್ದಿದ್ದರು. ಗುರುವಾರ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ ಎಂದು ವರದಿ ಹೇಳಿದೆ.
ಈ ಬಗ್ಗೆ ಟಿ-ಸೀರಿಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಕೃಷ್ಣ ಹಾಗೂ ತಾನ್ಯಾ ಸಿಂಗ್ ದಂಪತಿಗೆ ತಿಶಾ ಏಕೈಕ ಮಗಳಾಗಿದ್ದಳು.
2003ರ ಸೆಪ್ಟೆಂಬರ್ 6ರಂದು ಜನಿಸಿದ್ದ ತಿಶಾ ಟಿ-ಸೀರಿಸ್ ಸಿನಿಮಾ ಪ್ರದರ್ಶನಗಳ ವೇಳೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಈ ಸಿನಿಮಾದ ಪ್ರೀಮಿಯರ್ ಸಂದರ್ಭದಲ್ಲಿ ಅವರು ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.
ಬಿಗ್ ಬಿಗೆ ಕಿಸ್ ಮಾಡಲು ಎರಡೆರಡು ಬಾರಿ ಹಲ್ಲುಜ್ಜಿ ರೆಡಿಯಾಗಿದ್ದ ನಟಿ!
ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿ