newsics.com
ವನ್ಯಜೀವಿಗಳ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಈ ಆನೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಟ್ರೆಂಡ್ ಆಗುತ್ತಿರುತ್ತದೆ.
ಈಗಲೂ ಹಾಗೇ ಆಗಿದೆ. ಎರಡು ಮರಿ ಆನೆಗಳು ಚುಂಬಿಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋದಲ್ಲಿ ಆನೆಗಳು ತಮ್ಮ ಸೊಂಡಿಲುಗಳನ್ನು ನಿಧಾನವಾಗಿ ಎತ್ತಿ ಕಿಸ್ ಮಾಡುವುದನ್ನು ಕಾಣಬಹುದು.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಒಡಹುಟ್ಟಿದವರ ಪ್ರೀತಿ ಎಂದಿಗೂ ಇಷ್ಟು ಮುದ್ದಾಗಿ ಕಾಣಲಿಲ್ಲ. ಎರಡು ಮರಿ ಆನೆಗಳು ಮುತ್ತು ಹಂಚಿಕೊಳ್ಳುತ್ತಿವೆ. ಪ್ರಕೃತಿಯಲ್ಲಿ ನೇರವಾಗಿ ಕಾಣುವ ಶುದ್ಧ ಕಾಡು ಪ್ರೀತಿ’ ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಎರಡು ಆನೆಗಳು ಪರಸ್ಪರ ಹತ್ತಿರ ನಿಂತಿರುವುದನ್ನು ಕಾಣಬಹುದು. ನಿಧಾನವಾಗಿ ಎರಡು ಆನೆಗಳು ತಲೆಯನ್ನು ಹತ್ತಿರ ತರುತ್ತವೆ. ಆನೆಗಳು ಪರಸ್ಪರ ತಮ್ಮ ಸೊಂಡಿಲುಗಳನ್ನು ಸ್ಪರ್ಶಿಸುವುದನ್ನು ನೀವಿಲ್ಲಿ ನೋಡಬಹುದು. ಇದು ಎರಡು ಕೂಡ ಚುಂಬಿಸಿದಂತಿದೆ.
ಈ ವಿಡಿಯೋವನ್ನು ಜುಲೈ 28ಕ್ಕೆ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಮೂರು ಸಾವಿರಕ್ಕೂ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ.
https://twitter.com/i/status/1949689331360178189
Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!
ಪೋಷಕರೇ ಜಾಗರೂಕರಾಗಿರಿ; ಈ ತಪ್ಪುಗಳು ಮಕ್ಕಳ ಆರೋಗ್ಯದ ಮೇಲೆ ಎಫೆಕ್ಟ್ ಆಗುತ್ತೆ