Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!
ಅನಾವರಣಕರ್ನಾಟಕಪ್ರಮುಖ

Nagarapanchami special ಇಲ್ಲಿದೆ ಚೇಳಿಗೊಂದು ದೇವಸ್ಥಾನ: ಚೇಳು ಹಿಡಿದು ಆಟವಾಡುವ ಜನ!

Share
2 Min Read
SHARE

newsics.com

ಯಾದಗಿರಿ: ವಿಷ ಜಂತುಗಳನ್ನು ಕಂಡರೆ ಸಾಕು ಮಾರುದ್ದ ಹೊಗುವ ಈ ದಿನಗಳಲ್ಲಿ ಇಲ್ಲೊಂದು ಬೆಟ್ಟದಲ್ಲಿ ಜನತೆ ಚೇಳು ಹಿಡಿದು ಸಂಭ್ರಮಿಸುತ್ತಾರೆ. ದಿನವಿಡೀ ಅವುಗಳ ಜತೆ ಆಟವಾಡಿದರೂ ಅವು ಕಚ್ಚುವುದಿಲ್ಲ.

ಈ ವಿಶಿಷ್ಟ ಜಾತ್ರೆ ನಡೆಯುವುದು ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿನ ಬೆಟ್ಟದಲ್ಲಿ. ಕೊಂಡಮಾಯಿ ಹೆಸರಿನ ಈ ದೇವಸ್ಥಾನ ದೇಶದಲ್ಲೇ ಅಪರೂಪ ಎನಿಸಿದೆ. ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳುಗಳು ಕಾಣಿಸುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ.

ವಿಶೇಷವೆಂದರೆ ವರ್ಷವಿಡೀ ಬೆಟ್ಡದಲ್ಲಿ ಸಿಗದ ಚೇಳುಗಳು ನಾಗರ ಪಂಚಮಿ ದಿನದಂದು ಮಾತ್ರ ಕಾಣಿಸುತ್ತವೆ. ಮಾತ್ರವಲ್ಲ, ಇಲ್ಲಿನ ಸಣ್ಣಪುಟ್ಟ ಕಲ್ಲು ತೆಗೆದರೂ ಈ ಹುಳು ಸಿಗುತ್ತವೆ. ವೈಜ್ಞಾನಿಕ ಕ್ಷೇತ್ರಕ್ಕೆ ಸವಾಲಾದ ಈ ವಿಸ್ಮಯ ಕಣ್ತುಂಬಿಕೊಳ್ಳಲು ಕರ್ನಾಟಕ ಸೇರಿ, ನೆರೆಯ ತೆಲಂಗಾಣ ರಾಜ್ಯದಿಂದ ಸಾವಿರಾರು ಜನ ಬೆಟ್ಟಕ್ಕೆ ಆಗಮಿಸುತ್ತಾರೆ.

ಈ ಭಾಗದಲ್ಲಿನ ಪ್ರಕೃತಿ ಹಾಗೂ ಚೇಳುಗಳ ವಂಶಾಭಿವೃದ್ಧಿಗೆ ಬೆಟ್ಡದ ತಪ್ಪಲಿನ ಈ ವಾತಾವರಣ ಪೂರಕವಾಗಿದೆ ಎಂಬ ವಿಶ್ಲೇಷಣೆ ಸಹ ಇದೆ. ಅಲ್ಲದೆ, ಗುಲಬರ್ಗಾ ವಿವಿಯ ತಜ್ಞರು ಸಹ ಪ್ರತಿವರ್ಷ ಇಲ್ಲಿಗೆ ಆಗಮಿಸಿ, ಈ ಕೌತುಕದ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.

ಕೊಂಡಮಾಯಿ ದೇವಿ ಕೃಪೆ: ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ (ಹಳದಿ ಬಣ್ಣ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆಯಂತೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳನ್ನು ಆರಾಧಿಸಲಾಗುತ್ತದೆ.

ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬದ ದಿನ ಇಲ್ಲಿ ಚೇಳುಗಳನ್ನೆ ದೇವರೆಂದು ತಿಳಿದು ಪೂಜಿಸಿ ಮೈಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಂತಹ ಒಂದು ವಿಶೇಷ ಆಚರಣೆ ನಮ್ಮ ಗ್ರಾಮದಲ್ಲಿ ನಡೆಯುವುದು ವಿಶೇಷ ಎನ್ನುತ್ತಾರೆ ಭಕ್ತರು.
ಹಿಂದೆ ಬೆಟ್ಟದಲ್ಲಿ ಯಾವ ಸೌಲಭ್ಯ ಸಹ ಇರಲಿಲ್ಲ. ಆದರೆ, ಹಿಂದಿನ ಶಾಸಕರಾಗಿದ್ದ ದಿ.ನಾಗನಗೌಡ ಅವರು, ಕೊಂಡಮ್ಮಾಯಿ ಬೆಟ್ಟದ ಅಭಿವೃದ್ಧಿಗೆ ಸುಮಾರು ಒಂದು ಕೋಟಿ ರೂ.ಗಳ ವೆಚ್ಛದಲ್ಲಿ ಮೆಟ್ಟಿಲು, ಆಸನ, ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ್ದು ಇಲ್ಲಿ ಸ್ಮರಿಸಬಹುದು.

ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ

TAGGED:Here is a temple for scorpions: People play with scorpions!
Share This Article
Facebook Twitter Copy Link Print
Previous Article ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ
Next Article Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ಜಸ್ಟ್ ಇದನ್ನ ಟ್ರೈ ಮಾಡಿ

Popular Posts

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

You Might Also Like

ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?