newsics.com
ಜಬಲ್ಪುರ(ಮಧ್ಯಪ್ರದೇಶ): ಇಲ್ಲಿ ಎರಡು ಕುದುರೆಗಳ ನಡುವೆ ನಡೆದ ಫೈಟ್ ವೇಳೆ ಆಟೋದೊಳಗೆ ಕುದುರೆಯೊಂದು ಸಿಲುಕಿ ಪರದಾಡಿದ ಘಟನೆ ನಡೆದಿದೆ.
ಚಲಿಸುತ್ತಿದ್ದ ಆಟೋದೊಳಗೆ ನುಗ್ಗಿದ ಕುದುರೆಯಿಂದಾಗಿ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿವೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನೀಲಿ ಬಣ್ಣದ ಆಟೋದ ಒಳಗೆ ಚಾಲಕ ಸೀಟ್ನ ಒಂದು ಬದಿಯಿಂದ ಕುದುರೆಯೊಂದು ನುಗ್ಗಿ ಹೋಗಿದ್ದು, ಅದಕ್ಕೆ ವಾಪಸ್ ಬರುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲಿದ್ದ ಅನೇಕರು ಕುದುರೆಯನ್ನು ಆಟೋದಿಂದ ಬಿಡಿಸುವುದಕ್ಕೆ ಭಾರೀ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ.
ಜಬಲ್ಪುರದ ನಗ್ರತ್ ಚೌಕ್ನಲ್ಲಿ ಈ ಘಟನೆ ನಡೆದಿದೆ. ಎರಡು ಕುದುರೆಗಳು ಬಹಳ ಆಕ್ರಮಣಕಾರಿಯಾಗಿ ಪರಸ್ಪರ ಕಚ್ಚಾಡಿವೆ. ಈ ವೇಳೆ ಸ್ಥಳೀಯರು ಕುದುರೆಗಳನ್ನು ಬೇರೆಡೆಗೆ ಓಡಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಒಂದು ಕುದುರೆ ಅಲ್ಲಿ ಸಾಗುತ್ತಿದ್ದ ಇ-ರಿಕ್ಷಾದೊಳಗೆ ನುಗ್ಗಿದ್ದು, ಇದರಿಂದ ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಆಟೋದೊಳಗೆ ನುಗ್ಗಿದ್ದ ಕುದುರೆ ಹೊರಬರಲಾಗದೇ ಅಲ್ಲೇ 20 ನಿಮಿಷ ಬಾಕಿಯಾಗಿದ್ದು, ಡ್ರೈವರ್ ಕುಳಿತುಕೊಳ್ಳುವ ಕಂಪಾರ್ಟ್ಮೆಂಟ್ನಿಂದ ಹಿಂಭಾಗಕ್ಕೆ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದತ್ತ ಮುಂಭಾಗದ ಎರಡು ಕಾಲು ಹಾಗೂ ತಲೆಯನ್ನು ಹಾಕಿ ನೇತಾಡುವುದು ವೀಡಿಯೋದಲ್ಲಿ ಸೆರೆಯಾಗಿದೆ.
https://twitter.com/i/status/1948216012882481418
Government decision ಬಾಲ್ಯವಿವಾಹ ನಿಶ್ಚಿತಾರ್ಥದಲ್ಲಿ ಭಾಗಿಯಾದವರ ವಿರುದ್ಧವೂ ಇನ್ಮುಂದೆ ಕ್ರಮ: ಸರ್ಕಾರ ನಿರ್ಧಾರ