newsics.com
ನವದೆಹಲಿ: ಹಾಸಿಗೆ ಸುಖ ಸಿಗಲಿಲ್ಲವೆಂಬ ಕಾರಣ ಹಾಗೂ ಸೋದರಮಾವನ ಮೇಲಿನ ವ್ಯಾಮೋಹದಿಂದ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
25 ವರ್ಷದ ಫರ್ಜಾನಾ ಸೋದರಮಾವನ ಮೇಲಿನ ಆಸೆಗಾಗಿ ಗಂಡ ಶಾಹಿದ್ ಉರ್ಫ್ ಇರ್ಫಾನ್‌ನನ್ನು ಹತ್ಯೆಗೈದಿದ್ದಾಳೆ.
ಗಂಡ ಹಾಸಿಗೆಯಲ್ಲಿ ತನಗೆ ತೃಪ್ತಿ ಕೊಡುತ್ತಿರಲಿಲ್ಲ. ಲೈಂಗಿಕ ವಿಚಾರದಲ್ಲಿ ಅತಿಯಾದ ನಿರಾಸಕ್ತಿ ಹೊಂದಿದ್ದ ಎಂದು ಫರ್ಜಾನಾ ಕೊ*ಲೆಗೆ ಕಾರಣವನ್ನು ನೀಡಿದ್ದಾಳೆ.
ದೆಹಲಿಯ ನಿಹಾಲ್ ಬಿಹಾರ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೈಹಿಕ ಸಂಬಂಧದಲ್ಲಿ ತೃಪ್ತಿ ಸಿಗದ್ದಕ್ಕೆ ಗಂಡನನ್ನೇ ಕೊಂದು ಸೋದರಮಾವನೊಂದಿಗೆ ಜೀವನ ನಡೆಸಲು ಫರ್ಜಾನಾ ಪ್ಲಾನ್ ಮಾಡಿಕೊಂಡಿದ್ದಳು. ಆದರೆ ಈಗ ಜೈಲು ಸೇರಿ ಫರ್ಜಾನಾ ಕಣ್ಣೀರು ಹಾಕುತ್ತಿದ್ದಾಳೆ.
ಮೃತ ಶಾಹಿದ್ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದಿನವಿಡೀ ಕೆಲಸ ಮಾಡಿ ದಣಿದು ಬರುತ್ತಿದ್ದ ಶಾಹಿದ್ ನಿದ್ದೆಗೆ ಜಾರುತ್ತಿದ್ದ. ಆದರೆ ಇದು ಫರ್ಜಾನಾಗೆ ಇಷ್ಟವಾಗುತ್ತಿರಲಿಲ್ಲ. ಇದು ಗಂಡನ ಮೇಲಿನ ದ್ವೇಷಕ್ಕೆ ಕಾರಣವಾಗಿತ್ತು.
ಈ ನಡುವೆ ಫರ್ಜಾನಾಗೆ ಸೋದರಮಾವನ ಮೇಲೆ ಪ್ರೇಮಾಂಕುರವಾಗಿತ್ತು. ಫರ್ಜಾನಾಳ ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿದಾಗಲೇ ತನ್ನ ದಾರಿಗೆ ಅಡ್ಡವಾಗಿದ್ದ ಗಂಡನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಳು.
ಪತಿ ಶಾಹಿದ್ ಆಹಾರದಲ್ಲಿ ನಶೆ ಪದಾರ್ಥ ಸೇರಿಸಿದ್ದಾಳೆ. ಈ ಆಹಾರ ಸೇವಿಸಿದ ಶಾಹಿದ್ ಗಾಢವಾದ ನಿದ್ದೆಗೆ ಜಾರಿದ್ದಾನೆ. ಈ ವೇಳೆ, ಗಂಡನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾಳೆ. ನಂತರ ಇದನ್ನು ಆತ್ಮಹ*ತ್ಯೆ ಎಂದು ಬಿಂಬಿಸಲು ಫರ್ಜಾನಾ ಯತ್ನಿಸಿದ್ದಳು. ಹಣಕಾಸಿನ ವಿಚಾರಕ್ಕೆ ನೊಂದು ಗಂಡ ಚಾಕು ಇರಿದುಕೊಂಡಿದ್ದಾನೆ ಎಂದು ಫರ್ಜಾನಾ ಸುಳ್ಳು ಹೇಳಿದ್ದಳು.
ಪೋಷಕರು ಕೂಡಲೇ ಶಾಹಿದ್‌ನನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಗಂಡನ ಪ್ರಾಣ ಹೇಗೆ ತೆಗೆಯಬೇಕೆಂದು ಹಂತಕಿ ಫರ್ಜಾನಾ ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದ್ದಳು. ವಿಡಿಯೋ ನೋಡಿ ಹೇಗೆ ಪ್ಲಾನ್ ಮಾಡಬೇಕೆಂದು ಸ್ಕ್ರಿಪ್ಟ್ ಕೂಡ ರೆಡಿ ಮಾಡಿಕೊಂಡಿದ್ದಳು. ನಂತರ ಯುಟ್ಯೂಬ್ ನೋಡಿಯೇ ಸರ್ಚ್ ಹಿಸ್ಟರಿ ಡಿಲೀಟ್ ಮಾಡಿದ್ದಳು. ಈ ಎಲ್ಲಾ ವಿಷಯವನ್ನು ಪೊಲೀಸರ ಮುಂದೆಯೇ ಫರ್ಜಾನಾ ಹೇಳಿದ್ದಾಳೆ. ತನ್ನ ತಪ್ಪನ್ನು ಸಹ ಫರ್ಜಾನಾ ಒಪ್ಪಿಕೊಂಡಿದ್ದು, ಗಂಡ ಹಾಸಿಗೆಯಲ್ಲಿ ತನ್ನ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ಈಗ ಪೊಲೀಸರು ಫರ್ಜಾನಾಳ ಸೋದರಮಾವನ ಮೇಲೆಯೂ ಕಣ್ಣಿಟ್ಟಿದ್ದಾರೆ. ಆತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಫರ್ಜಾನಾ ಗರ್ಭಿಣಿಯಾಗಿದ್ದ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟು ಗರ್ಭಪಾತ ಮಾಡಿಸಿಕೊಂಡಿದ್ದ ವಿಷಯವೂ ಈಗ ಬೆಳಕಿಗೆ ಬಂದಿದೆ. ಗಂಡನಿಂದ ದೂರವಾಗಲು ಗರ್ಭಪಾತ ಮಾಡಿಸಿಕೊಂಡಿದ್ದಾ ಅಥವಾ ಬೇರೆಯವರೊಂದಿಗೆ ಫರ್ಜಾನಾ ಅನೈತಿಕ ಸಂಬಂಧ ಹೊಂದಿದ್ದಳಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Government decision ಬಾಲ್ಯವಿವಾಹ ನಿಶ್ಚಿತಾರ್ಥದಲ್ಲಿ ಭಾಗಿಯಾದವರ ವಿರುದ್ಧವೂ ಇನ್ಮುಂದೆ ಕ್ರಮ: ಸರ್ಕಾರ ನಿರ್ಧಾರ