newsics.com
ಅಹಮದಾಬಾದ್: ಗುಜರಾತ್ ನ ವಡೋದರಾ ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 15 ಜನರು ಮೃತಪಟ್ಟಿದ್ದಾರೆ.
ಮಹಿಸಾಗರ ನದಿಗೆ ಕಟ್ಟಲಾಗಿದ್ದ ಸೇತುವೆ ವಾಹನಗಳು ಚಲಿಸುತ್ತಿದ್ದಗಲೇ ಬುಧವಾರ ಏಕಾಏಕಿ ಕುಸಿತಗೊಂಡು ವಾಹನಗಳ ಸಮೇತ ಜನರು ನದಿಗೆ ಬಿದ್ದಿದ್ದಾರೆ. ದುರಂತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಸೇತುವೆಯ 10-15 ಮೀಟರ್ ಉದ್ದ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದು ಈ ದುರಂತ ಸಂಭವಿಸಿದೆ. ಎರಡು ಟ್ರಕ್, ಎರಡು ವ್ಯಾನ್, ಒಂದು ರಿಕ್ಷಾ, ಒಂದು ದ್ವಿಚಕ್ರವಾಹನಗಳು ನದಿಗೆ ಬಿದ್ದಿವೆ. ಘಟನೆಯಲ್ಲಿ ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಸಾಗರ ನದಿಯಲ್ಲಿ ಘಟನಾ ಸ್ಥಳದಿಂದ ೪ ಕಿ.ಮೀ ದೂರದವರೆಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ನದಿಯಲ್ಲಿ ಬಿದ್ದಿರುವ ವಾಹನಗಳು ಸುಮಾರು ಮೂರು ಮೀಟರ್ ಹೂಳಿನಲ್ಲಿ ಸಿಲುಕಿಕೊಂಡಿವೆ. ನಾಪತ್ತೆಯಾದವರ್ಗಾಗಿಯೂ ಶೋಧ ಮುಂದುವರೆಸಲಾಗಿದೆ. ಮತ್ತೊಂದೆಡೆ ಸೇತುವೆ ಕುಸಿತ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ.
Life style ಬೆಳಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿ ಸಾಕು ಮುಖ ಪಳಪಳ ಹೊಳೆಯುತ್ತೆ