newsics.com
ಸಂಬಂಧದಲ್ಲಿ ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಆದರೆ ಈ ಕೋಪ ಅತಿಯಾದರೆ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ
ನಿಮ್ಮ ಹೆಂಡತಿ ಪದೇ ಪದೇ ಕೋಪಗೊಂಡಾಗ, ವಿಷಯ ಸ್ವಲ್ಪ ಗಂಭೀರವಾಗಬಹುದು. ಇದರರ್ಥ ನಿಮ್ಮಿಬ್ಬರ ನಡುವೆ ಪ್ರೀತಿ ಮುಗಿದಿದೆ ಎಂದರ್ಥವಲ್ಲ. ಆಕೆಯ ಖುಷಿಯಾಗಿದ್ದರೆ ಮನೆಯಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಂಡ ಹೆಂಡತಿಯ, ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ ಆಕೆಯನ್ನು ಕೋಪವನ್ನು ಕಂಟ್ರೋಲ್‌ಗೆ ತರುವುದು ಬಹಳ ಮುಖ್ಯ. ಇದರಿಂದ ಸಂಬಂಧವೂ ಕೂಡ ಬಲಗೊಳ್ಳುತ್ತದೆ. ಹಾಗಿದ್ದರೆ, ಹೆಂಡತಿಯ ಕೋಪವನ್ನು ಹೇಗೆ ಕಂಟ್ರೋಲ್‌ಗೆ ತರಬೇಕು ಎಂಬುದನ್ನು ನೋಡೋಣ.
ವಿಷಯ ತುಂಬಾ ಗಂಭೀರವಾಗಿದ್ದಾಗ, ಸಮಾಧಾನವಾಗಲು ಆಕೆಯನ್ನು ಒಬ್ಬಂಟಿಯಾಗಿ ಬಿಡಿ. ಸ್ವಲ್ಪ ಸಮಯ ಏಕಾಂತದಲ್ಲಿ ಕಾಲ ಕಳೆದರೆ ಆಕೆ ಮನಸ್ಸು ಹಗುರವಾಗುತ್ತದೆ. ಮೆದುಳು ಸರಿಯಾಗಿ ಯೋಚಿಸಲಾರಂಭಿಸುತ್ತದೆ. ಜಗಳವಾದಾಗ ಒಬ್ಬಂಟಿಯಾಗಿರಲು ವಾಕಿಂಗ್‌ಗೆ ಹೋಗಿ, ಸ್ವಲ್ಪ ಏನಾದರೂ ಕೆಲಸ ಮಾಡಿ ಆಕೆಯನ್ನು ಒಬ್ಬಂಟಿಯಾಗಿ ಬಿಡೋದರಿಂದ ಆಕೆಗೂ ಯೋಚಿಸಲು ಅವಕಾಶ ದೊರೆಯುತ್ತದೆ.
ನಿಮ್ಮ ತಪ್ಪಿರಲಿ, ಇಲ್ಲದಿರಲಿ, ಕ್ಷಮೆಯಾಚಿಸುವುದು ತಪ್ಪಲ್ಲ. ಕ್ಷಮೆಯಾಚನೆಯು ಸಂಬಂಧವನ್ನು ಉಳಿಸಬಹುದು. ಅದು ಪ್ರೀತಿಯನ್ನು ಕಾಪಾಡಿಕೊಳ್ಳಲು ಒಂದು ಮಾರ್ಗವಾಗಿದೆ. ಹಾಗಾಗಿ ಆಕೆಯಲ್ಲಿ ಕ್ಷಮೆಯಾಚಿಸಿ, ಇದರಿಂದ ಆಕೆಗೆ ಸಮಾಧಾನವಾಗುತ್ತದೆ.
ಏಕೆ ಈ ಕೋಪ ಎಂದು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿ ಮತ್ತು ನೀವಿಬ್ಬರೂ ಅವುಗಳನ್ನು ಒಟ್ಟಿಗೆ ಪರಿಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಂಗಾತಿ ಮುಂಗೋಪಿಯಾಗಿದ್ದರೆ, ನೀವು ಅವರನ್ನು ಮನವೊಲಿಸುವಲ್ಲಿ ತುಂಬಾ ತಾಳ್ಮೆ ವಹಿಸಬೇಕು. ಮತ್ತು ಕೋಪಕ್ಕೆ ಕಾರಣವೇನು ಎಂದು ನೋಡಿ ಅದನ್ನು ಪರಿಹರಿಸಲು ಪ್ರಯತ್ನಿಸಿ.
ಯಾವುದೇ ನಕಾರಾತ್ಮಕ ನಡವಳಿಕೆಯನ್ನು ಬದಲಾಯಿಸಲು ಸಣ್ಣ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ನಿಮ್ಮ ಪತ್ನಿಯಲ್ಲಿ ಬದಲಾವಣೆ ಅಥವಾ ಸುಧಾರಣೆಯನ್ನು ತರಲು, ನೀವು ಅವರ ಉತ್ತಮ ನಡವಳಿಕೆಯನ್ನು ಪ್ರಶಂಸಿಸಬೇಕು. ಅಲ್ಲದೆ, ಅವರ ಕೋಪದ ನಡವಳಿಕೆ ನಿಮ್ಮ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರಿಗೆ ತಿಳಿಸಿ, ಇದರಿಂದ ಅವರ ಕೋಪ ಶಮನಗೊಳ್ಳಬಹುದು.