newsics.com
ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣಗಳು ಮತ್ತು ಅವುಗಳ ಹಿಂದಿನ ಕಾರಣಗಳು ಸಿನಿಮಾ ಜಗತ್ತನ್ನೇ ಬೆಚ್ಚಿಬೀಳಿಸುತ್ತಿವೆ.. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿವೆ. ಸಣ್ಣಪುಟ್ಟ ಕಾರಣಗಳಿಗೆ ಸೆಲೆಬ್ರಿಟಿಗಳು ಬ್ರೇಕ್ ಅಪ್ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸುತ್ತಿದೆ.
ಈಗ ಇದೇ ಡಿವೋರ್ಸ್ ವಿಚಾರದಲ್ಲಿ ಮತ್ತೊಬ್ಬ ಖ್ಯಾತ ನಟಿಯ ಹೆಸರು ಕೇಳಿಬರುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಲೇಡಿ ಸೂಪರ್‌ಸ್ಟಾರ್ ಖ್ಯಾತಿಯ ನಯನತಾರಾ ಅವರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿರುವ ನಯನತಾರಾ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಬಹುತೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ನಟಿಯಾಗಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವೇ ವರ್ಷಗಳ ಹಿಂದೆ ಅವರು ನಿರ್ದೇಶಕ ವಿಗ್ನೇಶ್ ಶಿವನ್ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ದಂಪತಿಗೆ ಸದ್ಯ ಎರಡು ಮುದ್ದಾದ ಅವಳಿ ಮಕ್ಕಳೂ ಇವೆ. ಆದರೂ ನಯನತಾರಾ ದಿಢೀರ್ ಡಿವೋರ್ಸ್‌ಗೆ ಮುಂದಾಗಿರುವುದು ಏಕೆ? ಎಂದು ಅವರ ಅಭಿಮಾನಿಗಳು ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆ ಸೋಷಿಯಲ್ ಮೀಡಿಯಾ ಪೋಸ್ಟ್..!
ವೈರಲ್ ಆಗಿರುವ ಸ್ಕ್ರೀನ್‌ಶಾಟ್ ನಯನತಾರಾ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಎಂದು ಹೇಳಲಾಗಿದೆ. ಅದರಲ್ಲಿ “ಒಬ್ಬ ಮೂರ್ಖನನ್ನು ಮದುವೆಯಾಗುವುದು ತಪ್ಪು. ಪತಿಯ ಕೃತ್ಯಗಳಿಗೆ ಹೊಣೆ ಹೊತ್ತಿಕೊಳ್ಳಬೇಕಾಗಿಲ್ಲ, ಏಕೆಂದರೆ ಪುರುಷರು ಸಾಮಾನ್ಯವಾಗಿ ಬೆಳೆಯುವುದಿಲ್ಲ. ದಯವಿಟ್ಟು ನನ್ನನ್ನು ಒಬ್ಬಳೇ ಇರಲು ಬಿಡಿ. ನಾನು ತುಂಬಾ ಬೇಸತ್ತಿದ್ದೇನೆ” ಎಂಬ ಸಾಲುಗಳಿವೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದ್ದು, ನಯನತಾರಾ-ವಿಘ್ನೇಶ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದೆ.
ಈ ಪೋಸ್ಟ್ ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಯಿತು. ವೈರಲ್ ಆಗುತ್ತಿದ್ದಂತೆ ನಯನತಾರಾ ಫೋಸ್ಟ್ ಡಿಲೀಟ್ ಮಾಡಿದ್ದು, ಅದರ ಸ್ಕ್ರೀನ್‌ಶಾಟ್‌ಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ ನಟಿ ನಯನತಾರಾ ಹಾಗೂ ವಿಗ್ನೇಶ್ ಶಿವನ್ ಇಲ್ಲಿವರೆಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಹಲವಾರು ಮೂಲಗಳು ಈ ವೈರಲ್ ಪೋಸ್ಟ್ ಅನ್ನು ನಕಲಿ ಎಂದು ಹೇಳುತ್ತಿವೆ.