newsics.com/ನ್ಯೂಸಿಕ್ಸ್
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ವಿಷಯ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈ ಜೋಡಿ ಪ್ರೀತಿಸಿ ಬಳಿಕ 2020ರ ಫೆಬ್ರವರಿ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.
ಆದರೆ ಈ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ ನಾಲ್ಕು ವರ್ಷಕ್ಕೆ ಅಂದರೆ 2024ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರು. ಆದರೆ ಈ ವಿಚ್ಛೇದನದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಮೆಂಟ್ ಗಳು ಬರುತ್ತಿದ್ದವು.
ಡಿವೋರ್ಸ್ ನಂತರ ಸೋಷಿಯಲ್ ಮಿಡಿಯಾಲ್ಲಿ ಸಾಕಷ್ಟು ಟ್ರೋಲ್ ಆದವು. ನಿವೇದಿತಾ ಗೌಡಗೆ ಪ್ರೀತಿ ಅಂದರೇನಂತ ಗೊತ್ತಿಲ್ಲ, ಪ್ರೀತಿಯ ಬೆಲೆ ಗೊತ್ತಿಲ್ಲ ಅಂತ ಟ್ರೋಲ್ ಮಾಡಲಾಗುತ್ತಿತ್ತು. ಇವೆಲ್ಲದಕ್ಕೆ ನಿವೇದಿತಾ ಗೌಡ ಹೇಳಿದ್ದೇನು? ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು ಹೇಳಿದ್ದಿಷ್ಟು.
ಡಿವೋರ್ಸ್ ಆಗ್ಬೇಕು ಅಂತ ಮದುವೆಯಾಗಲ್ಲ. ಚೆನ್ನಾಗಿರ್ತೀವಿ ಅಂತಾನೇ ಮದಯವೆಯಾಗ್ತಾರೆ, ನಮಗೆ ಅಷ್ಟು ಕಂಪಾಬಿಲಿಟಿ ಇರಲಿಲ್ಲ. ಸೋಷಿಯಲ್ ಮಿಡಿಯಾ ಕೂಡಾ ದೊಡ್ಡ ಪಾತ್ರ ವಹಿಸಿದೆ. ಈ ತುಂಬಾ ವಿಡಿಯೋ ನಮ್ಮ ಬಗ್ಗೆ ಆಗುತ್ತಿತ್ತು. ನೀವು ಮದುವೆಯಾದರೆ ಚೆನ್ನಾಗಿರುತ್ತೆ ಅಂತ ಹೋದಲೆಲ್ಲ ಹೇಳುತ್ತಿದ್ದರು. ಏನನ್ನೂ ಫೋರ್ಸ್ ಮಾಡಬಾರದು ಎಂದಿದ್ದಾರೆ.
ನಮ್ಮ ಪರ್ಸನಲ್ ಮ್ಯಾಟರ್ ಅದು. ಏನಕ್ಕೆ ಡಿವೋರ್ಸ್ ಆಯ್ತು ಅಂತ ಹೇಳೋಕೆ ಇಷ್ಟಪಡಲ್ಲ. ತುಂಬಾ ಊಹನೆ, ಮಾತುಗಳು, ಚರ್ಚೆಗಳೆಲ್ಲ ಶುರುವಾದವು. ಆದರೆ ಇದು ತುಂಬಾ ಹೆಚ್ಚಾಯ್ತು. ಯಾರ್ಯಾರೋ ಬಂದು ಏನೇನೋ ಮಾತನಾಡುವಾಗ ಪ್ರೆಸ್ಮೀಟ್ ಮಾಡಬೇಕು ಅನಿಸಿತು. ಇದಕ್ಕೆ ಒಂದು ಫುಲ್ಸ್ಟಾಪ್ ಕೊಡಬೇಕು ಅನಿಸಿತು. ನಾನು ಪ್ರೆಸ್ಮೀಟ್ ಮಾಡಬೇಕಂತಲೇ ಇಲ್ಲ. ಸುಮ್ಮನೆ ಸುಳ್ಳು ಹೇಳುತ್ತಾ, ರೂಮರ್ಸ್ ಮಾಡುತ್ತಾ ಇರುವುದು ತಪ್ಪು ಎಂದಿದ್ದಾರೆ.
Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ