ನಟಿ ದೀಪಿಕಾ ದಾಸ್ ಮೊದಲ ಬಾರಿಗೆ ಹೊರ ರಾಜ್ಯದ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ.ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ.
ನಟಿ ದೀಪಿಕಾ ದಾಸ್ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್, ನಾಗಿಣಿ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದಾರೆ.
ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಕೆಂಪು ಬಣ್ಣದ ಸೀರೆ, ಹಣೆಗೆ ಕುಂಕುಮ, ಕೈಯಲ್ಲಿ ಹೂವು, ಹಿಂದೆ ಕಾಮಾಕ್ಯ ದೇವಿ ದೇವಸ್ಥಾನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ.
ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಕಾಮಾಕ್ಯ ದೇವಿ ದೇವಸ್ಥಾನವು ಒಂದಾಗಿದೆ. ಗುವಾಹಟಿಯ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ದೇವಿ ನೆಲೆಸಿದ್ದಾಳೆ. ಈ ಕಾಮಾಕ್ಷಿ ಮಾತೆ ಪವರ್ ಫುಲ್’ ಶಕ್ತಿ ದೇವತೆ ಎನ್ನಿಸಿಕೊಂಡಿದ್ದಾಳೆ. ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತೆ.
https://www.instagram.com/p/DLo8EDnhK47/?igsh=MXNtdzBtdWZhcDdiMQ==