newsics.com
ಬಿಗ್ ಬಾಸ್ ಸ್ಪರ್ಧಿ, ಖ್ಯಾತ ನಟಿ ಅಂಕಿತಾ ಲೋಖಂಡೆ ಇನ್ನೇನು ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಗಳ ನಡುವೆ ಗರ್ಭಿಣಿಯಾಗಿದ್ದಾರಂತೆ.
ಈ ವಿಚಾರ ಅವರ ಗಂಡನಿಗೆ ಗೊತ್ತೇ ಇಲ್ಲವಂತೆ. ಈ ಮಾಹಿತಿಯನ್ನು ಸ್ವತಃ ಅಂಕಿತಾ ಅವರೇ ನೀಡಿದ್ದಾರೆ.
ಹಿಂದಿ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದ ಹಾಗೂ ಹಿಂದಿ ಕಿರುತೆರೆಯ ಖ್ಯಾತ ನಟಿ ಅಂಕಿತಾ ಲೋಖಂಡೆ ಸದ್ಯ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಶೋನಲ್ಲಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಜತೆ ಭಾಗಿಯಾಗಿದ್ದಾರೆ. ಈ ಜೋಡಿ 14 ಡಿಸೆಂಬರ್ 2021ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹವಾಗಿ ಬರೋಬ್ಬರಿ 4 ವರ್ಷವಾಗಿದೆ.
ರಿಯಾಲಿಟಿ ಶೋನಲ್ಲಿ ಅಂಕಿತಾ ಲೋಖಂಡೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ.

ಲಾಫ್ಟರ್ ಶೆಫ್ಸ್ 2 ರ ಇತ್ತೀಚಿನ ಪ್ರೋಮೋದಲ್ಲಿ, ಕೃಷ್ಣ ಅಭಿಷೇಕ್ ಅಂಕಿತಾ ಲೋಖಂಡೆಯ ಕೈಯಿಂದ ಒಂದು ಪದಾರ್ಥವನ್ನು ಕಸಿದುಕೊಂಡು ಓಡಿ ಹೋಗುತ್ತಾರೆ. ಅಂಕಿತಾ ಅವನನ್ನು ಬೆನ್ನಟ್ಟುವಾಗ ಸುಸ್ತಾಗಿ ನಾನು ಗರ್ಭಿಣಿ ಎಂದು ಹೇಳುತ್ತಾರೆ.
ಆದರೆ ಅಚ್ಚರಿಯ ವಿಚಾರವೆಂದರೆ ಈ ಶೋನಲ್ಲಿ ಅಂಕಿತಾ ಅವರ ಪತಿ ವಿಕ್ಕಿ ಇದ್ದರು. ಈ ಬಗ್ಗೆ ಅವರು ಮೌನವಾಗಿರುವುದನ್ನು ನೋಡಿ ನೆಟ್ಟಿಗರು ವಿಕ್ಕಿ ಅವರಿಗೆ ಈ ವಿಚಾರ ತಿಳಿದಿಲ್ಲವೇ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
https://www.instagram.com/reel/DLVCYOetizY/?igsh=MXB3ejRjNm52aHVwMA==
Trend Reels ನೀರಿನಲ್ಲಿ ಅರಶಿನ ಟ್ರೆಂಡ್ ರೀಲ್ಸ್ ಮಾಡ್ತಿದ್ದೀರಾ ಹುಷಾರ್
Quattle Kitchen ಕ್ವಾಟ್ಲೆ ಕಿಚನ್ನಲ್ಲಿ ಗಿಲ್ಲಿ ನಟನ ವಿರುದ್ಧ ಶಿಲ್ಪಾ ಕಾಮತ್ ಕೋಪಗೊಂಡಿದ್ದೇಕೆ?
Illegal Relationship ಹೊಸ ಅಳಿಯನ ಜೊತೆ ಅತ್ತೆ ಪರಾರಿ; ಮದುವೆ ಮಾಡಿಕೊಟ್ಟ 15 ದಿನಕ್ಕೆ ಅಕ್ರಮ ಸಂಬಂಧ ಬಯಲು