newsics.com
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಟ್ರೆಂಡ್ ವೈರಲ್ ಆಗುತ್ತಿದೆ. ರಾತ್ರಿಯ ಕತ್ತಲೆಯಲ್ಲಿ ನೀರಿಗೆ ಅರಿಶಿನ ಸುರಿಯುವ ರೀಲ್‌ಗಳು ಮತ್ತು ವೀಡಿಯೊಗಳನ್ನು ಎಲ್ಲರೂ ಅಪ್‌ಲೋಡ್ ಮಾಡುತ್ತಿದ್ದಾರೆ.
ಆದರೆ ಹಾಗೆ ಮಾಡುವುದರಿಂದ ಅವರು ತಮಗೆ ತಾವೇ ತೊಂದರೆ ತರುತ್ತಿದ್ದಾರೆ. ಈ ಬಗೆಗಿನ ಒಂದಷ್ಟು ಮಾಹಿತಿಯನ್ನು ಟ್ಯಾರೋ ಕಾರ್ಡ್ ಎಕ್ಸರ್ಟ್ ನೀಲಂ ಟಿ. ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನೀರಿಗೆ ಅರಶಿನ ಹಾಕಿ ಅದಕ್ಕೆ ಲೈಟ್ ಹಾಕುವಂತಹದ್ದು ಅಥವಾ ಕೆಂಡ, ಬೆಂಕಿಯ ಮೇಲೆ ಇಡುವುದು ಹೀಗೆ ಈ ರೀತಿಯ ಮ್ಯಾಜಿಕ್ ಮಾಡೋದನ್ನು ತಂತ್ರಕ್ರಿಯೆ ಅಂತ ಕರಿತಾರೆ. ಮಾಟ-ಮಂತ್ರ, ವಶೀಕರಣ ಮಾಡುವವರು ಈ ತಂತ್ರಕ್ರಿಯೆಯನ್ನು ಅನುಸರಿತ್ತಾರೆ. ಈ ತಂತ್ರವನ್ನು ನೀವು ಮನೆಯಲ್ಲಿ ತಮಾಷೆಗಾಗಿ ಬಳಸಿದರೂ ನಿಮ್ಮ ಸುತ್ತಲೂ ಇರುವ ಋಣಾತ್ಮಕ ಶಕ್ತಿ ಅಂದ್ರೆ ಪ್ರೇತಾತ್ಮಗಳು ನಿಮ್ಮ ಮನೆಗೆ ಆಕರ್ಷಿಸುತ್ತವೆ.
ಇದರಿಂದ ಮನೆಯಲ್ಲಿ ಜಗಳ, ಮನಸ್ತಾಪ, ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ತಮಾಷೆಗೂ ಕೂಡ ಈ ತಂತ್ರವನ್ನು ಟ್ರೈ ಮಾಡ್ಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಯಾರಾದ್ರೂ ಈ ರೀತಿ ಮಾಡಿದ್ರೆ, ಅದಕ್ಕೆ ಪರಿಹಾರವನ್ನು ಕೂಡ ಅವರು ತೀಳಿಸಿಕೊಟ್ಟಿದ್ದಾರೆ ಅದೇನೆಂದರೆ, ನೀರು ಮತ್ತು ಅರಶಿನವನ್ನು ಮಿಕ್ಸ್ ಮಾಡಿ ಅದನ್ನು ತುಳಸಿ ಗಿಡಕ್ಕೆ ಹಾಕಿ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ.
https://www.instagram.com/reel/DLU0gpwyIrm/?igsh=NG1maWtrczF4ZnVw