newsics.com
ಡಿಜಿಟಲೀಕರಣದ ಈ ಯುಗದಲ್ಲಿ ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಹಲವಾರು ಸೇವೆಗಳಿವೆ. ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಸೌಲಭ್ಯ ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ. ಮನೆಯಲ್ಲಿ ತಿಂಗಳಿಗೊಮ್ಮೆ ಹೋಟೆಲ್ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಈಗ ಕೂತಲ್ಲೇ ಫುಡ್ ಆರ್ಡರ್ ಮಾಡಿ ತಿನ್ನುವ ಕಾಲ. ಅದು ಆಂಬುಲೆನ್ಸ್ ಬರುವ ವೇಗಕ್ಕಿಂತ ಫುಡ್ ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತೆ.
ಇದೇ ನಮ್ಮ ವ್ಯವಸ್ಥೆ ಅಲ್ವಾ? ಆರ್ಡರ್ ಮಾಡಿದ 20 ನಿಮಿಷದೊಳಗೆ ಬಿಸಿ ಬಿಸಿ ಫುಡ್ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಇದಕ್ಕಾಗಿ ಸಾಕಷ್ಟು ಆ್ಯಪ್ಗಳು ಕೂಡ ಇವೆ. ಸ್ವಿಗ್ಗಿ , ಝೊಮಾಟೋ, ಡನ್ಜೋ ಸೇರಿದಂತೆ ಅನೇಕ ಮೊಬೈಲ್ ಫುಡ್ ಆ್ಯಪ್ಗಳು ನಿಮ್ಮ ಫೇವರಿಟ್ ಊಟವನ್ನು ನಿಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತವೆ. ಆದರೆ ನೀವೇನಾದ್ರೂ ಜೆಪ್ಟೋ ಅಪ್ಲಿಕೇಶನ್ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಈ ಮಾಜಿ ಉದ್ಯೋಗಿಯು ಹೇಳುವ ವಿಚಾರದ ಬಗ್ಗೆ ನಿಮಗೆ ತಿಳಿದಿರುವುದು ಬಹಳ ಮುಖ್ಯ. ಮಾಜಿ ಉದ್ಯೋಗಿಯೊಬ್ಬರು ಈ ಅಪ್ಲಿಕೇಶನ್ ಕುರಿತಾದ ಕರಾಳ ವಿಚಾರವನ್ನು ತಿಳಿಸಿದ್ದು, ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಅಪ್ಲಿಕೇಶನ್ ವಿರುದ್ಧ ಗರಂ ಆಗಿದ್ದಾರೆ.
r/pune ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಕಂಪನಿಯ ಕಾರ್ಯನಿರ್ವಹಣೆಯ ಬಗೆಗಿನ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್‌ನಲ್ಲಿ, ನಾನು ಜೆಪ್ಟೋದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಇನ್ನು ಮೌನವಾಗಿರಲು ನನ್ನಿಂದ ಸಾಧ್ಯವಿಲ್ಲ. ನಾನು ಉದ್ಯೋಗದಲ್ಲಿದ್ದಾಗ ಒಮ್ಮೆ, ಗ್ರಾಹಕರೊಬ್ಬರು ಗ್ರೀಕ್ ಮೊಸರನ್ನು ಆರ್ಡರ್ ಮಾಡಿದ್ದರು. ನಮ್ಮ ಬಳಿ ಕೇವಲ ಮೂರು ಡಬ್ಬಿಗಳಿದ್ದವು ಅಷ್ಟೇ. ಆ ಡಬ್ಬಿಗಳು ಅವಧಿ ಮೀರಿದ್ದವು. ಆದರೂ, ನಮ್ಮ ಸ್ಟೋರ್ ಇನ್‌ಚಾರ್ಜ್ ಒಬ್ಬರು, ‘ಅದನ್ನೇ ಕೊಡಿ ಎಂದು ಹೇಳಿದರು. ಫುಡ್ ಆರ್ಡರ್ ಮಾಡುವ ಜನರು ಜೆಪ್ಟೋ ಸ್ವಚ್ಛವಾಗಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ಸ್ವಚ್ಛತೆಯಿಂದ ದೂರ ಉಳಿದಿದೆ. ಮಳೆಗಾಲದಲ್ಲಿ ನಮ್ಮ ಪುಣೆ ಸ್ಟೋರ್‌ನಲ್ಲಿ ಚರಂಡಿ ನೀರಿಂದ ತುಂಬಿಹೋಗುತ್ತದೆ. ದಿನಸಿ ಸಾಮಾನುಗಳನ್ನು ಪ್ಯಾಕ್ ಮಾಡುವ ಸ್ಥಳದಲ್ಲಿಯೇ ನೀರು ಇರುತ್ತದೆ ಎಂದಿದ್ದಾರೆ.