newsics.com
ಅಹಮದಾಬಾದ್: ಏರ್ ಇಂಡಿಯಾ ಭೀಕರ ವಿಮಾನ ದುರಂತದಲ್ಲಿ ರಾಜಸ್ಥಾನದ ಬನ್ಸ್ವಾರಾ ಮೂಲದ ಕುಟುಂಬವೇ ಬಲಿಯಾಗಿದ್ದು, ವಿಮಾನ ಹಾರಾಟ ಆರಂಭಿಸುವ ಮುನ್ನ ತೆಗೆದ ಸೆಲ್ಫಿ ವೈರಲ್ ಆಗುತ್ತಿದ್ದು ಎಲ್ಲರಲ್ಲಿ ಕಣ್ಣೀರು ತರಿಸುತ್ತಿದೆ.
ಪ್ರತೀಕ್ ಜೋಶಿ ಆರು ವರ್ಷಗಳ ಹಿಂದೆ ಲಂಡನ್‌ನಲ್ಲಿ ವಾಸಿಸುತ್ತಿದ್ದರು.
ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ಅವರು, ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡಿದ್ದರು. ವೀಸಾ ಸೇರಿ ಸರಿಯಾದ ಅನುಮತಿಗಳಿಗಾಗಿ ವರ್ಷಗಳ ಕಾಲ ಕಾದ ನಂತರ, ಕನಸು ಅಂತಿಮವಾಗಿ ನನಸಾಗಿತ್ತು. ಕೇವಲ ಎರಡು ದಿನಗಳ ಹಿಂದೆ, ಅವರ ಪತ್ನಿ, ಉದಯಪುರದ ಪ್ರಸಿದ್ಧ ವೈದ್ಯೆ ಡಾ. ಕೋಮಿ ವ್ಯಾಸ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬ್ಯಾಗ್ ಗಳು ಪ್ಯಾಕ್ ಆಗಿದ್ದವು, ವಿದಾಯ ಹೇಳಿ ಭವಿಷ್ಯವು ಕೈಗೆಟುಕುವ ದೂರದಲ್ಲಿದೆ ಎಂದು ಪ್ರಯಾಣ ಆರಂಭಿಸಿದ್ದರು.
ಐದು ವರ್ಷದ ಅವಳಿ ಹೆಣ್ಣು ಮಕ್ಕಳು ಸೇರಿ ಉತ್ಸಾಹದಿಂದ ತುಂಬಿದ ಕುಟುಂಬವು ಲಂಡನ್‌ಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ವಿಮಾನದ ಸೀಟಿನಲ್ಲಿ ಕುಳಿತು ಬಳಿಕ ಸೆಲ್ಫಿ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳುಹಿಸಿ ಸಂಭ್ರಮ ಪಟ್ಟಿದ್ದರು. ಆದರೆ ಆ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ವಿಮಾನವೇರಿದ ಕೆಲವೇ ಕ್ಷಣಗಳಲ್ಲಿ ವಿಮಾನವು ತಾಂತ್ರಿಕ ದೋಷದಿಂದ ಜನನಿಬಿಡ ಪ್ರದೇಶದಲ್ಲಿ ಪತನವಾಯಿತು. ಪ್ರತೀಕ್ ಜೋಶಿ ಕುಟುಂಬ ಕಂಡ ಕನಸುಗಳೆಲ್ಲವೂ ಕ್ಷಣಮಾತ್ರದಲ್ಲಿ ನುಚ್ಚು ನೂರಾಯಿತು. ಸಣ್ಣ ಮಕ್ಕಳು ಸೇರಿಂದತೆ, ಕುಟುಂಬದ ಯಾವುದೇ ಸದಸ್ಯರೂ ಘಟನೆಯಲ್ಲಿ ಬದುಕುಳಿದಿಲ್ಲ. ಅವರು ತೆಗೆದ ಕೊನೆಯ ಸೆಲ್ಫಿ ಮಾತ್ರ ಎಲ್ಲದೆ ಹರಿದಾಡುತ್ತಿದೆ.
Siddaramaiah ಪೊಲೀಸ್ ಅಧಿಕಾರಿಗೆ ಹೊಡೆಯಲು ಕೈ ಎತ್ತಿದ ಘಟನೆ: ಸಿದ್ದರಾಮಯ್ಯ ವಿರುದ್ಧ ದೂರು