Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?
ಪ್ರಮುಖಮನರಂಜನೆ

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಕೇವಲ ಟಾಲಿವುಡ್ ಮಾತ್ರವಲ್ಲದೆ ಇಡೀ ಸೌತ್ ಸಿನಿಪ್ರೇಕ್ಷಕರ ಹಾಟ್ ಫೇವರಿಟ್ ಜೋಡಿ ಎಂದರೆ, ಅದು ಸಮಂತಾ ರುತ್ ಪ್ರಭು ಮತ್ತು ದಳಪತಿ ವಿಜಯ್. ಬೆಳ್ಳಿ ಪರದೆಯ ಮೇಲೆ ಬ್ಯಾಕ್ಟು-ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಜನರ ಮನಸ್ಸು ಗೆದ್ದಿದ್ದ ಈ ಜೋಡಿ, ಈಗ ಮತ್ತೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ನಟಿ ಸಮಂತಾ ಇತ್ತೀಚೆಗಷ್ಟೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತನ್ನ ವಿಜಯ್ ದಳಪತಿ ವಿಜಯ್ ರನ್ನು ಭೇಟಿಯಾಗಿ ಶುಭ ಕೋರಿದ್ದಾರೆ.

ಸಿಎಂ ಕಚೇರಿಯಲ್ಲಿ ನಡೆದ ಭೇಟಿಯ ಸುಂದರ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ.
ಮಿಂಚಿದ ಸಮಂತಾ ಭಾವುಕ ಪೋಸ್ಟ್!

ವಿಜಯ್ ಅವರನ್ನು ಭೇಟಿಯಾಗಲು ಸಮಂತಾ ಸಾಂಪ್ರದಾಯಿಕ ಕೆಂಪು ಸೀರೆ ಮತ್ತು ಹಳದಿ ಬ್ಲೌಸ್ ಧರಿಸಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ಫೋಟೋಗಳ ಜೊತೆಗೆ ಸಮಂತಾ ಹಂಚಿಕೊಂಡಿರುವ ಸುದೀರ್ಘವಾದ ಸಂದೇಶ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಇಂದು ನಾನು ಚೆನ್ನೈಗೆ ಬಂದಾಗ ಮನಸ್ಸಿಗೆ ಒಂಥರಾ ಅಪಾರ ಸಂತೋಷವಾಯಿತು. ಯಾಕಂದ್ರೆ ನಾನು ನಮ್ಮ ಸಿಎಂ ಅವರನ್ನು ಭೇಟಿಯಾಗಬೇಕಿತ್ತು. ವಿಜಯ್ ಸರ್ ಅವರನ್ನು ನಾನು ಯಾವತ್ತೂ ಕೇವಲ ಪರದೆಯ ಮೇಲಿನ ಹೀರೊ ಅಂತ ಭಾವಿಸಿಲ್ಲ.

ಅವರಲ್ಲಿರುವ ಶಕ್ತಿ, ವ್ಯಕ್ತಿತ್ವ ಮತ್ತು ಜನ ಅವರನ್ನ ನೋಡೋ ರೀತಿ ಇದೆಯಲ್ಲಾ, ಅದನ್ನ ನೋಡಿದಾಗಲೇ ಇವರು ಜೀವನದಲ್ಲಿ ಏನೋ ದೊಡ್ಡದನ್ನ ಸಾಧಿಸೋಕೆ ಹುಟ್ಟಿದ್ದಾರೆ ಅಂತ ಅನ್ಸುತ್ತಿತ್ತು ಎಂದು ಸಮಂತಾ ಬರೆದುಕೊಂಡಿದ್ದಾರೆ.
ವಿಜಯ್ ಸರ್ ಧೈರ್ಯಕ್ಕೆ ನಾನು ಫಿದಾ!

ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ವಿಜಯ್, ಅದನ್ನೆಲ್ಲ ಬಿಟ್ಟು ರಾಜಕೀಯ ಎಂಬ ಹೊಸ ಅಖಾಡಕ್ಕೆ ಧುಮುಕಿದ್ದನ್ನು ಸಮಂತಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾವು ಈಗಾಗಲೇ ಸಾಧಿಸಿರುವ, ನಮಗೆ ಕರಗತವಾಗಿರುವ ಕಂಫರ್ಟ್ ಜೋನ್‌ನಿಂದ ಹೊರಬಂದು, ಇಂಥದ್ದೊಂದು ದೊಡ್ಡ ಸವಾಲನ್ನು ಸ್ವೀಕರಿಸಲು ಭಾರಿ ಧೈರ್ಯ ಬೇಕು.

ವಿಜಯ್​ ಅವರು ರಾಜಕೀಯ ಸುಲಭ ಎಂದು ಇಲ್ಲಿಗೆ ಬಂದಿಲ್ಲ, ಬದಲಿಗೆ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ತರಬಲ್ಲೆ ಎನ್ನುವ ನಂಬಿಕೆಯಿಂದ ಬಂದಿದ್ದಾರೆ. ಅವರ ಈ ಧೈರ್ಯ ನನಗೆ ತುಂಬಾ ಸ್ಫೂರ್ತಿ ನೀಡಿದೆ ಎಂದು ಸ್ಯಾಮ್ ಕೊಂಡಾಡಿದ್ದಾರೆ.

ಕೊನೆಯಲ್ಲಿ, ನಮ್ಮ ಸಿಎಂ ಅವರಿಗೆ ಈ ಹೊಸ ಹಾದಿಯಲ್ಲಿ ಮುನ್ನಡೆಯಲು ಬೇಕಾದ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಹಳೇ ನೆನಪುಗಳಿಗೆ ಜಾರಿದ ಫ್ಯಾನ್ಸ್!

ಸಮಂತಾ ಮತ್ತು ವಿಜಯ್ ಒಟ್ಟಿಗೆ ಇರುವ ಫೋಟೋಗಳನ್ನು ನೋಡಿದ ತಕ್ಷಣ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಕಣ್ಣು ತುಂಬಿ ಬಂತು, ಬೆಸ್ಟ್ ಆನ್-ಸ್ಕ್ರೀನ್ ಜೋಡಿ ಈಗ ಸಿಎಂ ಆಫೀಸ್‌ನಲ್ಲಿ, ನಿಜಕ್ಕೂ ನನ್ನ ದಿನ ಇವತ್ತು ಸೂಪರ್ ಆಯ್ತು ಎಂದೆಲ್ಲಾ ಕಮೆಂಟ್ಸ್ ಹರಿಬಿಡುತ್ತಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ಕತ್ತಿ (2014) ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್​ ಮತ್ತು ಸಮಂತಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆಮೇಲೆ ಅಟ್ಲೀ ನಿರ್ದೇಶನದ ಥೇರಿ (2016) ಮತ್ತು ಮೆರ್ಸಲ್ (2017) ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಈ ಜೋಡಿ ನೀಡಿತ್ತು.

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

 

TAGGED:He is not just an on-screen hero.. CM Vijay's daughter-in-law Samantha; Sam salutes Thalapathy for his courage! Samantha on Thalapathy Vijay
Share This Article
Facebook Twitter Copy Link Print
Previous Article ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

Popular Posts

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

2 Min Read

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

1 Min Read

ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ

2 Min Read

PG ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಸೆರೆಗೆ ಯತ್ನ!

1 Min Read

You Might Also Like

ಕರ್ನಾಟಕಪ್ರಮುಖ

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

2 Min Read
ಪ್ರಮುಖವೈರಲ್

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Social Networks

Facebook-f Instagram Twitter
Welcome Back!

Sign in to your account

Lost your password?