Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Share
5 Min Read
SHARE

newsics.com / ನ್ಯೂಸಿಕ್ಸ್

ಶುಭೋದಯ

ಇಂದಿನ ರಾಶಿ ಭವಿಷ್ಯ

18-06-2026, ಗುರುವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಶುಕ್ಲಪಕ್ಷದ ಚತುರ್ಥಿ.

* ವಿನಾಯಕ ಚತುರ್ಥಿ

* ಗುರುಪುಷ್ಯಾಮೃತ ಯೋಗ

——————–

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:57 – 15:34, ಯಮಗಂಡ ಕಾಲ 05:55 – 07:32, ಗುಳಿಕ ಕಾಲ 09:48 – 10:44

===========

ಇಂದಿನ ರಾಶಿ ಭವಿಷ್ಯ

ಮೇಷ

ಇಂದು ನಿಮ್ಮ ಸಾಧಾರಣ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು.‌ ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ‌ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ.

ವೃಷಭ 

ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ನಿಮಗೆ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಬಹುದು. ಮನಸ್ಸು ಒಂದು ಕಡೆ ನಿಲ್ಲದೇ ಓಡಾಡುವುದು. ಕಳೆದುಕೊಂಡದ್ದನ್ನು ಪಡೆಯುವ ಹಠವಿರುವುದು. ಅದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುವುದು. ಪ್ರೀತಿಸುವವರನ್ನು ಮುಕ್ತವಾಗಿ ಬಿಡುವಿರಿ. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.

ಮಿಥುನ 

ನಿಮ್ಮ ಮಗುವಿನ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಐತಿಹಾಸಿಕ ದೇವಾಲಯವನ್ನು ನೋಡುವ ಹಂಬಲವಿರುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಲಿದೆ. ಅತಿಯಾದರೆ ಅಮೃತವೂ ವಿಷ. ದುರಭ್ಯಾಸವು ಗೊತ್ತಾಗದಂತೆ ನಿಮಗೆ ಬರಲಿದೆ. ಬಿಡಿಸಲು ಮನೆಯವರ ಪ್ರಯತ್ನ ಮಾಡುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌

ಕರ್ಕಾಟಕ 

ಯಾರನ್ನೂ ಅವಲಂಬಿಸಬೇಕು ಅನ್ನಿಸದು. ನೀವು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆದೆ. ಹುಟ್ಟಿನಿಂದ ಬಂದ ಸ್ವಭಾವವನ್ನು ತಿದ್ದಲಾಗದು. ಸಮಯವನ್ನು ತಿನ್ನುವವರಿಗೆ ಸಿಗದೇ ಇದ್ದರೆ ಒಳ್ಳೆಯದು. ಮನೆಯಲ್ಲಿ ನಿಮ್ಮ ಸ್ವಭಾವವನ್ನು ತಿದ್ದಲು ಪ್ರಯತ್ನಿಸುವರು. ಮಾಡಬೇಕು ಎಂದು ಅನ್ನಿಸಿದ್ದನ್ನು ಮಾಡಿ‌ಮುಗಿಸಿ. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.

ಸಿಂಹ 

ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ಯಾರಿಗೂ ತಿಳಿಸದೇ ಎಲ್ಲಿಗೋ ಹೋಗುವಿರಿ. ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಸಮಾರಂಭದಲ್ಲಿ ಮುಖ್ಯಸ್ಥಾನವನ್ನು ಪಡೆಯುವಿರಿ. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ. ಬಹಳ‌ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ.

ಕನ್ಯಾ 

ನಿಮ್ಮ ಬಿಡುವಿನ ವೇಳೆಯನ್ನು ಸ್ವಯಂ ಸೇವಕರಾಗಿ ಅಥವಾ ಇತರರಿಗೆ ಸಹಾಯ ಮಾಡಲು ಕಳೆಯಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ನಿಮ್ಮ ಮಾತು ಕೇಳುವುದಿಲ್ಲ ಎಂದೆನಿಸುವುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.

ತುಲಾ 

ವಾಹನದ ಖರೀದಿಗೆ ಸಾಲ ಮಾಡುವಂತೆ ಪ್ರೇರಣೆ ಬರಲಿದೆ. ಮಕ್ಕಳಿಗೆ ಹೆಚ್ಚಿನ ಗಮನವನ್ನು ಕೊಡಬೇಕಾಗುವುದು. ಊರಿಂದ ಊರಿಗೆ ವರ್ಗಾವಣೆಯಾಗುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಸಮಾಧಾನವನ್ನು ಮಾಡುವುದು ಬಿಟ್ಟು ಸೊಪ್ಪು ಹಾಕುವರು. ಎಷ್ಟೋ ದಿನದ ಹಿಂದೆ ಹೊಸ ವಸ್ತುಗಳನ್ನು ಖರೀದಿಸಿದ್ದು ಇಂದು ನಿಮಗೆ ನೆನಪಾಗುವುದು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಇಷ್ಟಪಟ್ಟ ವಸ್ತುವನ್ನು ಪಡೆಯಲು ಹಣದ ಅಭಾವವು ಕಾಣಿಸಬಹುದು.

ವೃಶ್ಚಿಕ 

ಹೊಸ ಒಪ್ಪಂದಗಳು ಬರುವ ಸಾಧ್ಯತೆ ಇದೆ. ಹುಣ್ಣನ್ನು ಕೆದಕಿದಷ್ಟೂ ಅದು ದೊಡ್ಡ ಗಾಯವಾಗುವುದು. ಮಾತನಾಡದೇ ಸುಮ್ಮನಿರಿ. ತಾನಾಗಿಯೇ ತಣ್ಣಗಾಗುವುದು. ಯೋಜನೆಯಿಲ್ಲದೇ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಅಸಂಭಾವ್ಯ ವಿಚಾರವನ್ನು ಸಂಭಾವ್ಯ ಮಾಡಿಕೊಂಡು ಹತಾಶರಾಗುವಿರಿ. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದಿಕೆಯಾಗಲಿದೆ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು.

ಧನುಸ್ಸು

ದುರಭ್ಯಾಸದ ಜನರ ಸಹವಾಸ ಇರುವುದು. ಒಳ್ಳೆಯ ಕಾಲ ಬರುವುದೆಂದು ಕಾದು ಕುಳಿತರೆ ಪ್ರಯೋಜನವಿಲ್ಲ. ಅಗ್ನಿಯ ಭಯದಿಂದ ಏನನ್ನೂ ಮಾಡಲು ಬೆಚ್ಚುವಿರಿ. ನಿಮ್ಮ ಕೆಲಸವನ್ನು ನೀವು ಮಾಡಿ. ಕಾಲ ಬಂದಾಗ ಅದು ಮಾಡಬೇಕಾದುದನ್ನು ಮಾಡುತ್ತದೆ. ಮಕ್ಕಳ ಭವಿಷ್ಯವು ಚೆನ್ನಾಗಿರಲು ಅವರ ಹೆಸರಿನಲ್ಲಿ ಹೂಡಿಕೆ ಮಾಡುವಿರಿ. ಕಷ್ಟವಾದರೂ ಇರುವ ಉದ್ಯೋಗವು ಯಥಾಸ್ಥಿತಿಯಲ್ಲಿ ಇರಲಿ. ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ.

ಮಕರ 

ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಹಿರಿಯರ ಸೇವೆಯನ್ನು ಬಲವಾದ ಕಾರಣವಿಲ್ಲದೇ ಮಾಡಲಾರಿರಿ. ಭೂಮಿಯ ವ್ಯವಹಾರವನ್ನು ಸದ್ಯ ಮುಂದುವರಿಸಬೇಡಿ. ನ್ಯಾಯಾಲಯದ ಮೆಟ್ಟಿಲೇರಿದ ದೂರು ಇಂದು ಇತ್ಯರ್ಥವಾದೀತು. ಕಲೆಗಳಲ್ಲಿ ಆಸಕ್ತಿ ಇಲ್ಲದೇ ನೀರಸವಾಗಿ ಇರುವಿರಿ. ಕಛೇರಿಯಲ್ಲಿ ಗೌರವ ಸಿಗಲಿದೆ. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು.

ಕುಂಭ 

ಮನೆಗೆ ಅತಿಥಿಗಳ ಆಗಮನವು ಹೊಸ ಹೊಳಪು ಕೊಡುವುದು. ಗೆಲುವು ಸಣ್ಣದಾದರೂ ಸಂಭ್ರಮ ಮಾತ್ರ ದೊಡ್ಡದಾಗಿರುವುದು. ಮೇಲಧಿಕಾರಿಗಳ ವರ್ತನೆಯಿಂದ ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ಗೊಂದಲವೂ ಇರಬಹುದು. ಮಿತ್ರರ ಸಹಾಯದಿಂದ ಬಂದೊದಗಿದ ಅಪಾಯವನ್ನು ದೂರಮಾಡಿಕೊಳ್ಳುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ.

ಮೀನ 

ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಮಕ್ಕಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರರು. ಅನುರೂಪ ಸಂಗಾತಿಯ ಭೇಟಿ ಮಾಡುವಿರಿ. ಆದರೆ ಅದು ನಿಮಗೆ ಗೊತ್ತಾಗದು. ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವವನ್ನು ನೀಡಿ. ನಿದ್ರಾಹೀನತೆಯಿಂದ ಬಳಲುತ್ತಿದ್ದು ವಾತಾವರಣವು ನಿಮ್ಮ ನಿದ್ರೆಗೆ ಪೂರಕವಾಗಿರದೇ ಇರುವುದು ಕಾರಣವಾಗಿದೆ. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ.

 

TAGGED:#almanac #zodiac #prediction #18-06-2026 #thursday #horoscope #planetary #positions #news #newsics
Share This Article
Facebook Twitter Copy Link Print
Previous Article Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

You Might Also Like

ಕರ್ನಾಟಕಪ್ರಮುಖ

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read
ಕರ್ನಾಟಕದೇಶಪ್ರಮುಖ

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read
ದೇಶಪ್ರಮುಖ

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?