Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ
ಪ್ರಮುಖ

ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಬಳಕೆದಾರರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇಲ್ಲದೇ ಹೋದರೆ ನಿಮಗೆ ಗ್ಯಾಸ್​ ಸಬ್ಸಿಡಿ ಸಿಗುವುದಿಲ್ಲ. ಕೆವೈಸಿ ಮಾಡಲು ಜೂನ್​ 30 ಕೊನೆಯ ದಿನವಾಗಿದೆ. ಇದಾಗಲೇ ಎಲ್ಲಾ ಗ್ರಾಹಕರ ಮೊಬೈಲ್​ಗೂ ಈ ಸಂದೇಶ ಕಳುಹಿಸಲಾಗಿದೆ.

ಒಂದು ವೇಳೆ ಇದೇ 30ರ ಒಳಗೆ ಇ-ಕೆವೈಸಿ ಮಾಡದೇ ಹೋದರೆ ನಿಮಗೆ ಸಿಗುವ ಗ್ಯಾಸ್​ ಸಬ್ಸಿಡಿ ಕಟ್​ ಆಗಲಿದೆ. ಆದ್ದರಿಂದ ಆಧಾರ್ ಆಧರಿತ ದೃಢೀಕರಣ ಮಾಡಿಸುವುದು ಕಡ್ಡಾಯವಾಗಿದೆ.

ನೀವು ನಿಗದಿತ ಅವಧಿಯ ಒಳಗೆ ಆಧಾರ್ ವೆರಿಫಿಕೇಶನ್ ಮಾಡಿಸದಿದ್ದರೆ ಜುಲೈ 1ರಿಂದ ಸಬ್ಸಿಡಿ ಪ್ರಯೋಜನಗಳು ಸ್ಥಗಿತಗೊಳ್ಳಬಹುದು. ಗ್ಯಾಸ್​ ಸಿಲಿಂಡರ್​ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದ್ದರೆ ಮತ್ತೆ ಚಿಂತೆ ಮಾಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮತ್ತು ಇತರ ಸಬ್ಸಿಡಿ ಪಡೆಯುವ ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮತ್ತು ವೆರಿಫಿಕೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ನಿಮ್ಮ ಗ್ಯಾಸ್​ ಸಿಲಿಂಡರ್​ಗೆ ಇ- ಕೆವೈಸಿ ಆಗಿದೆಯೇ, ಇಲ್ಲವೇ ಎನ್ನುವುದನ್ನು ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆಯಪ್​ ಮೂಲಕ ಅಥವಾ ತಮ್ಮ ಹತ್ತಿರದ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಖಾತೆಯ ವಿವರಗಳನ್ನು ಪರಿಶೀಲಿಸಬಹುದು. ಒಂದು ವೇಳೆ ಇ-ಕೆವೈಸಿ ಆಗದೇ ಇದ್ದರೆ ಅದನ್ನು ಮಾಡುವುದು ಹೀಗೆ:

ಎಚ್‌ಪಿ ಗ್ಯಾಸ್ (HP Gas) ಇ-ಕೆವೈಸಿ ವಿಧಾನ:

– ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ HP Pay ಆಪ್ ಡೌನ್‌ಲೋಡ್ ಮಾಡಿ.

– ನಿಮ್ಮ ಎಲ್‌ಪಿಜಿ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬಳಸಿ ರಿಜಿಸ್ಟರ್ ಮಾಡಿ.

– OTP ಪರಿಶೀಲಿಸಿ, ನಿಮ್ಮ ಭದ್ರತೆಗಾಗಿ MPIN ಅನ್ನು ಸೆಟ್ ಮಾಡಿ.

– ಆಪ್‌ನಲ್ಲಿನ ‘MY HP’ ಅಡಿಯಲ್ಲಿ ಇರುವ ಎಲ್‌ಪಿಜಿ (LPG) ಸೆಕ್ಷನ್ ತೆರೆಯಿರಿ.

– ‘e-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

-ನಿಯಮ ಮತ್ತು ಷರತ್ತುಗಳನ್ನು ಸ್ವೀಕರಿಸಿ, ಆಧಾರ್ ಫೇಸ್ ಅಥೆಂಟಿಕೇಶನ್ ಮುಗಿಸಿ ಸಬ್ಮಿಟ್ ನೀಡಿ.

ಇಂಡೇನ್ ಗ್ಯಾಸ್ ಇ-ಕೆವೈಸಿ ( Indane Gas E-KYC )

– IndianOil ONE App ಡೌನ್‌ಲೋಡ್ ಮಾಡಿ.

<span;><span;>- ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಳ್ಳಿ.

-ನಿಮ್ಮ 16 ಅಂಕಿಯ ಎಲ್‌ಪಿಜಿ ಐಡಿಯನ್ನು (LPG ID) ಖಾತೆಗೆ ಲಿಂಕ್ ಮಾಡಿ.

-ಆಪ್‌ನಲ್ಲಿನ ‘My Profile’ ವಿಭಾಗಕ್ಕೆ ಹೋಗಿ.

ಎಲ್‌ಪಿಜಿ ವಿವರಗಳನ್ನು ಆಯ್ದುಕೊಂಡು, ಅಲ್ಲಿ ಕಾಣಿಸುವ ‘e-KYC’ ಆಯ್ಕೆಯನ್ನು ಕ್ಲಿಕ್ ಮಾಡಿ.

-ನಿಯಮ ಮತ್ತು ಷರತ್ತುಗಳನ್ನು ಓದಿ, ಒಪ್ಪಿಗೆ ನೀಡಿ.

-ಆಧಾರ್ ಫೇಸ್ ಅಥೆಂಟಿಕೇಶನ್ (Aadhaar face authentication – ಮುಖದ ಗುರುತು ಪರಿಶೀಲನೆ) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಬ್ಮಿಟ್ ಮಾಡಿ.

ಭಾರತ್ ಗ್ಯಾಸ್ (BharatGas) ಇ-ಕೆವೈಸಿ ವಿಧಾನ:

– ಗೂಗಲ್ ಪ್ಲೇ ಸ್ಟೋರ್‌ನಿಂದ Hello BPCL ಆಪ್ ಡೌನ್‌ಲೋಡ್ ಮಾಡಿ.

– ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನೀಡಿ ಲಾಗ್-ಇನ್ ಆಗಿ.

– ಹೋಮ್ ಸ್ಕ್ರೀನ್‌ನಲ್ಲಿರುವ ‘e-KYC’ ಆಯ್ಕೆಯನ್ನು ಆರಿಸಿಕೊಳ್ಳಿ.

– ನಿಮ್ಮ ಮೊಬೈಲ್‌ಗೆ ಬರುವ OTP ಯನ್ನು ನಮೂದಿಸಿ ವೆರಿಫೈ ಮಾಡಿ.

– ನಿಯಮಗಳನ್ನು ಒಪ್ಪಿಕೊಂಡು, ಬಯೋಮೆಟ್ರಿಕ್/ಮುಖದ ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಜಿಯನ್ನು ಸಲ್ಲಿಸಿ.

PG ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಸೆರೆಗೆ ಯತ್ನ!

TAGGED:Gas subsidy cut if KYC not done by June 30: How to do it from home - step-by-step information
Share This Article
Facebook Twitter Copy Link Print
Previous Article PG ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಸೆರೆಗೆ ಯತ್ನ!
Next Article ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

Popular Posts

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

2 Min Read

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

1 Min Read

ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ

2 Min Read

PG ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಸೆರೆಗೆ ಯತ್ನ!

1 Min Read

You Might Also Like

ಕರ್ನಾಟಕಪ್ರಮುಖ

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

2 Min Read
ಪ್ರಮುಖವೈರಲ್

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Social Networks

Facebook-f Instagram Twitter
Welcome Back!

Sign in to your account

Lost your password?