Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಿಕ್ತು 300 ವರ್ಷ ಹಿಂದೆ ಮುಳುಗಿದ ಹಡಗು; ಇದರಲ್ಲಿದೆ 200 ಟನ್ ಚಿನ್ನ
ಪ್ರಮುಖ

ಸಿಕ್ತು 300 ವರ್ಷ ಹಿಂದೆ ಮುಳುಗಿದ ಹಡಗು; ಇದರಲ್ಲಿದೆ 200 ಟನ್ ಚಿನ್ನ

Share
2 Min Read
SHARE

newsics.com

ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಎಂಬ ಹಡಗು 317 ವರ್ಷಗಳ ಹಿಂದೆ ಅಂದ್ರೆ 1708ರಲ್ಲಿ ಮುಳುಗಿತ್ತು. ಈ ಹಡಗು ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ದೊಡ್ಡ ಖಜಾನೆಯನ್ನು ಹೊತ್ತು ಸಾಗುತ್ತಿತ್ತು. ಹಾಗಾಗಿ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಮುಳುಗಡೆ ವಿಶ್ವದೆಲ್ಲಡೆ ಸದ್ದು ಮಾಡಿತ್ತು. ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗಿನಲ್ಲಿ ಎಷ್ಟು ಮೌಲ್ಯದ ಸಂಪತ್ತು ಇತ್ತು.
ಎರಡೂವರೆ ಲಕ್ಷ ಕೋಟಿ (16 ಬಿಲಿಯನ್ ಡಾಲರ್) ಮೌಲ್ಯದ ಸಂಪತ್ತು ತುಂಬಿಕೊಂಡಿದ್ದಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಪೆರುವಿನಿಂದ ಸ್ಪೇನ್‌ನತ್ತ ಪ್ರಯಾಣ ಬೆಳೆಸಿತ್ತು. ಈ ನಿಧಿಯನ್ನು ಸ್ಪ್ಯಾನಿಷ್ ಉತ್ತರಾಧಿಕಾರಕ್ಕಾಗಿ ಯುದ್ಧದ ಬಳಕೆಗಾಗಿ ಸ್ಪೇನ್‌ಗೆ ಸಾಗಿಸಲಾಗುತ್ತಿತ್ತು. ಆದ್ರ ಮಾರ್ಗ ಮಧ್ಯೆ ಬ್ರಿಟನ್‌ ರಾಯಲ್ ನಲ್ಲಿ ಈ ಹಡಗು ಮುಳುಗಡೆಯಾಯ್ತು. ಅಂದಿನಿಂದ ಇಂದಿನವರೆಗೆ ಅನೇಕ ದೇಶಗಳು ಮತ್ತು ಕಂಪನಿಗಳು ದಶಕಗಳಿಂದ ಈ ನಿಧಿ ತುಂಬಿದ ಹಡಗಿನ ಹುಡುಕಾಟದಲ್ಲಿ ತೊಡಗಿವೆ. ಈಗ ಅದು ಪತ್ತೆಯಾದ ತಕ್ಷಣ, ಹಕ್ಕುದಾರರಲ್ಲಿ ಸ್ಪರ್ಧೆ ಉಂಟಾಗುತ್ತದೆ.
ಈ ಹಡಗಿನಲ್ಲಿ ಏನೇನಿತ್ತು?
ಮುಳುಗಡೆಯಾದ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಒಟ್ಟು 200 ಟನ್ ಮೌಲ್ಯದ ಬಂಗಾರ, ವಜ್ರಾಭರಣಗಳನ್ನು ಹೊತ್ತು ಪ್ರಯಾಣ ಬೆಳೆಸಿತ್ತು ಎಂದು ವರದಿಯಾಗಿದೆ. ಈ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಒಂದೊಂದು ಚಿನ್ನದ ನಾಣ್ಯಗಳು 27 ಗ್ರಾಂ ತೂಕವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.
ಕಾರ್ಟಜೆನಾ ಕರಾವಳಿಯ ಬಳಿಯ ಬರು ದ್ವೀಪದಲ್ಲಿ ಮುಳುಗಡೆಯಾದ ಹಡಗನ್ನು ಪತ್ತೆ ಮಾಡಲಾಗಿದೆ. ಕ್ರಿ.ಶ.1707 ರ ಹಿಂದಿನ ಲಿಮಾ ಮಿಂಟ್‌ನ ಚಿನ್ನದ ನಾಣ್ಯಗಳು, 1665 ರ ಹಿಂದಿನ ಫಿರಂಗಿಗಳು ಮತ್ತು ಪಿಂಗಾಣಿ ಪಾತ್ರೆಗಳು ಈ ಹಡಗಿನಲ್ಲಿ ಸಿಕ್ಕಿವೆ. ಸ್ಪೇನ್, ಪೆರು, ಕೊಲಂಬಿಯಾ ಮುಂತಾದ ದೇಶಗಳು ಗೋಕಾ ಮೊರಾ ಮತ್ತು ಸಮುದ್ರ ಸಂಶೋಧನಾ ಕಂಪನಿ ಅರ್ಮಡಾ ಈ ನಿಧಿ ತಮಗೆ ಸೇರಿದ್ದು ಎಂದು ಸ್ಪರ್ಧೆ ನಡೆಸುತ್ತಿವೆ. ಈ ಹಡಗಿನ ಹುಡುಕಾಟದಲ್ಲಿ ಈ ಹಕ್ಕುದಾರರು ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಹಾಗಾಗಿ ಹಡಗು ಯಾರಿಗೆ ಸೇರುತ್ತೆ ಎಂಬುದರ ಬಗ್ಗೆ ಗೊಂದಲದಲ್ಲಿವೆ.
ಹಕ್ಕಿಗಾಗಿ ಹೋರಾಟ
ಸಮುದ್ರದ ತಳದಲ್ಲಿ ಅಂತಹ ಹಡಗಿನ ಚಿಹ್ನೆಗಳು ನೀರೊಳಗಿನ ಡೋನ್‌ಗಳಿಂದ ಕಂಡುಬಂದಿವೆ. ಗೋಕಾ ಮೋರಾ 1981 ರಲ್ಲಿಯೇ ಹಡಗನ್ನು ಕಂಡುಹಿಡಿದಿದೆ ಎಂದು ಹೇಳುತ್ತದೆ. ಸಮುದ್ರ ಶೋಧ ಕಂಪನಿ ಅರ್ಮಡಾ ಅದರಲ್ಲಿ ಅರ್ಧದಷ್ಟು ಬೇಡಿಕೆ ಇಟ್ಟಿದೆ. ಕೊಲಂಬಿಯಾ ಸರ್ಕಾರ 2020 ರಲ್ಲಿ ಕಾನೂನನ್ನು ಜಾರಿಗೆ ತಂದಿದ್ದು, ಎಲ್ಲವನ್ನು ವಶಕ್ಕೆ ಪಡೆದುಕೊಂಡಿದೆ. ಮತ್ತೊಂದೆಡೆ ಹಡಗು ಸ್ಪೇನ್‌ಗೆ ಹೋಗುತ್ತಿತ್ತು. ಆದ್ದರಿಂದ ಹಡಗಿನ ಮೇಲೆ ಸಂಪೂರ್ಣವಾದ ಹಕ್ಕು ನಮ್ಮದು ಎಂದು ಸ್ಪ್ಯಾನಿಶ್ ಸರ್ಕಾರ ಹೇಳುತ್ತದೆ.
ಹಡಗು ಮುಳುಗಡೆಯಾಗಿದ್ದು ಹೇಗೆ?
1708 ರ ಜೂನ್ 8 ರಂದು ಕಾರ್ಟಜೆನಾದಿಂದ ಯುರೋಪ್‌ ಗೆ ಹೊರಟ ಬೆಂಗಾವಲು ಪಡೆಯಲ್ಲಿ ಸ್ಯಾನ್ ಜೋಸ್ 18 ಹಡಗುಗಳಲ್ಲಿ ಒಂದಾಗಿತ್ತು. ಈ ಹಡಗುಗಳ ಮೇಲೆ ಐದು ಬ್ರಿಟಿಷ್ ಯುದ್ಧನೌಕೆಗಳು ದಾಳಿ ಮಾಡಿದವು. ಆಗ ಬ್ರಿಟನ್ ಸ್ಪ್ಯಾನಿಷ್ ಉತ್ತರಾಧಿಕಾರ ಯುದ್ಧದಲ್ಲಿ ಸ್ಪೇನ್ ವಿರುದ್ಧ ನಿಂತಿತ್ತು. ಸ್ಪ್ಯಾನಿಷ್ ಹಡಗುಗಳು ಸಹ ಪ್ರತಿದಾಳಿ ನಡೆಸಿದವು, ಆದರೆ ಫಿರಂಗಿಗಳಲ್ಲಿ ಇರಿಸಲಾಗಿದ್ದ ಗನ್‌ಪೌಡರ್‌ನಲ್ಲಿ ಬೆಂಕಿಯಿಂದ ಉಂಟಾದ ಸ್ಫೋಟದಿಂದಾಗಿ ಹಡಗು ಮುಳುಗಿತು.

Plane Crash: ಕೆಲ ದಿನಗಳ ಹಿಂದೆ ಕೆಲಸ ತೊರೆದಿದ್ದ ವೈದ್ಯೆ, ಇಡೀ ಕುಟುಂಬವೇ ಬಲಿ

TAGGED:200 tons of gold: Ship that sank 300 years ago found
Share This Article
Facebook Twitter Copy Link Print
Previous Article Plane Crash: ಕೆಲ ದಿನಗಳ ಹಿಂದೆ ಕೆಲಸ ತೊರೆದಿದ್ದ ವೈದ್ಯೆ, ಇಡೀ ಕುಟುಂಬವೇ ಬಲಿ
Next Article Ahmedabad Plane Crash ವಿಮಾನ ಪತನದಲ್ಲಿ ಮೃತಪಟ್ಟಾಗ ಪರಿಹಾರ ಕೊಡೋದ್ಯಾರು?; ಸಿಗುವ ಹಣವೆಷ್ಟು?

Popular Posts

ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

2 Min Read

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

2 Min Read

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

1 Min Read

ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ

2 Min Read

You Might Also Like

ಕರ್ನಾಟಕಪ್ರಮುಖ

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

2 Min Read
ಪ್ರಮುಖವೈರಲ್

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Social Networks

Facebook-f Instagram Twitter
Welcome Back!

Sign in to your account

Lost your password?