Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Relationsip ನಿಮ್ಮ ಲವರ್‌ಗೆ ಇಂಥ ಗಿಫ್ಟ್ ಕೊಡಲೇಬೇಡಿ, ಬ್ರೇಕಪ್ ಆಗಬಹುದು!
ಅನಾವರಣಜ್ಯೋತಿಷ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationsip ನಿಮ್ಮ ಲವರ್‌ಗೆ ಇಂಥ ಗಿಫ್ಟ್ ಕೊಡಲೇಬೇಡಿ, ಬ್ರೇಕಪ್ ಆಗಬಹುದು!

Share
2 Min Read
SHARE

newsics.com

Relationship ಪ್ರೇಮಿಗಳು ಪರಸ್ಪರ ಉಡುಗೊರೆ ಕೊಟ್ಟುಕೊಳ್ಳುವುದು ಕಾಮನ್.‌ ಬರ್ತ್‌ಡೇ, ಪ್ರೇಮಿಗಳ ದಿನದಂದು ಅಥವಾ ಸಂಗಾತಿಯನ್ನು ಸಂತೋಷಪಡಿಸಲು, ಸಂಗಾತಿಯ ಮುನಿಸನ್ನು ಕಮ್ಮಿ ಮಾಡಲು ಪ್ರೇಮಿಗಳು ಉಡುಗೊರೆಗಳನ್ನು ನೀಡುತ್ತಾರೆ.

ಆದರೆ ಗಿಫ್ಟ್‌ಗಳನ್ನು ಕೊಡುವಾಗ ಹತ್ತಾರು ಬಾರಿ ಯೋಚಿಸುವುದು ಉತ್ತಮ. ಕೆಲವೊಮ್ಮೆ ಈ ಗಿಫ್ಟ್‌ಗಳೇ ಅವಾಂತರ ಸೃಷ್ಟಿಸಿಬಿಡುತ್ತವೆ.

ಲವರ್‌ಗೆ ಕೆಲವು ಗಿಫ್ಟ್‌ಗಳನ್ನು ಕೊಡ್ಬಾರ್ದಂತೆ.  ಶಾಸ್ತ್ರಗಳ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಗಿಫ್ಟ್ ಕೊಡುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ಸಮಸ್ಯೆ ಬರುವಂತೆ, ನೀವು ಈ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನಿಮ್ಮ ಪ್ರಿಯತಮೆಗೋ ಅಥವಾ ಪ್ರಿಯತಮನಿಗೋ ನೀಡಿದರೆ ಅದರಿಂದ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಬ್ರೇಕಪ್‌ ಕೂಡ ಆಗಬಹುದು.

ಮುಳ್ಳಿನ ಗಿಡಗಳು:

ಸಂಗಾತಿಗೆ ಗಿಡಗಳು ಇಷ್ಟ ಎಂದು ಕೆಲವರು ಬೇರೆ ಬೇರೆ ಗಿಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಹೀಗೆ ನೀವು ಗಿಡ ಗಿಫ್ಟ್‌ ಕೊಡುವುದಾದರೆ ಯಾವುದೇ ಕಾರಣಕ್ಕೂ ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯವನ್ನು ಗಿಫ್ಟ್‌ ಮಾಡ್ಬೇಡಿ.

ಶಾಸ್ತ್ರಗಳ ಪ್ರಕಾರ, ಈ ಉಡುಗೊರೆಗಳು ನಿಮ್ಮ ಸಂಬಂಧಕ್ಕೆ ಹಾನಿ ಮಾಡಬಹುದು. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ. ಸಂಗಾತಿಗಳ ನಡುವೆ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತವೆ. ಹಾಗಾಗಿ ನಿಮ್ಮ ಪ್ರೀತಿಗೆ ಯಾವುದೇ ತೊಂದರೆ ಬಾರದಿರಲು ಗುಲಾಬಿ ಅಥವಾ ಆರ್ಕಿಡ್‌ಗಳಂತಹ ಸಕಾರಾತ್ಮಕತೆ ಹೊರಸೂಸುವ ಸಸ್ಯಗಳನ್ನು ಉಡುಗೊರೆಯಾಗಿ ನೀಡಿ.

ಗಾಜಿನ ವಸ್ತುಗಳು:

ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಾಜಿನ ವಸ್ತುಗಳು ಒಡೆದುಹೋಗುತ್ತವೆ. ಅದೇ ರೀತಿ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಿದರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ.

ಗಾಜಿನ ವಸ್ತುಗಳನ್ನು ಗಿಫ್ಟ್‌ ನೀಡುವುದರಿಂದ ಸಂಬಂಧದಲ್ಲಿ ಜಗಳ ಮತ್ತು ಉದ್ವಿಗ್ನತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಇದು ಸಂಬಂಧದಲ್ಲಿ ಅಶಾಂತಿ ಮತ್ತು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಬೇಡಿ.

ಸುಗಂಧ ದ್ರವ್ಯ:

ಸುಗಂಧದ್ರವ್ಯವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಇದರಿಂದ ಜೀವನದಲ್ಲಿ ಹಣದ ಕೊರತೆ ಮತ್ತು ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಗಂಧ ದ್ರವ್ಯದ ವಾಸನೆ ಸ್ಪಲ್ಪ ಸಮಯದ ಬಳಿಕ ಮಾಯವಾಗುತ್ತದೆ. ಇದನ್ನು ಲವರ್‌ಗೆ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಬಂಧ ಕೂಡಾ ಹಾಳಾಗಬಹುದು. ಅದಕ್ಕಾಗಿ ಇದನ್ನು ಉಡುಗೊರೆಯಾಗಿ ನೀಡಬೇಡಿ.

ಕಪ್ಪು ಬಣ್ಣದ ವಸ್ತುಗಳು:

ಬಟ್ಟೆ, ಮನೆ ಅಲಂಕಾರಿಕ ವಸ್ತುಗಳಂತಹ ಸೇರಿದಂತೆ ಯಾವುದೇ ಕಪ್ಪು ಬಣ್ಣದ ವಸ್ತುಗಳನ್ನು ಗಿಫ್ಟ್‌ ಆಗಿ ನೀಡಬೇಡಿ. ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಂಬಿಕೆಗಳ ಪ್ರಕಾರ ಕಪ್ಪು ಬಣ್ಣವನ್ನು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸುತ್ತದೆ. ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು, ಇದು ಸಂಗಾತಿಗಳ ನಡುವೆ ತಪ್ಪು ತಿಳಿವಳಿಕೆ ಮತ್ತು ಜಗಳಗಳಿಗೆ ಕಾರಣವಾಗಬಹುದು.

ಚೂಪಾದ ವಸ್ತುಗಳು:

ರೇಜರ್‌ಗಳು, ಚಾಕುಗಳು ಮುಂತಾದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ಸಂಗಾತಿಗಳ ನಡುವಿನ ಬಂಧವನ್ನೇ ಒಡೆದು ಬ್ರೇಕಪ್‌ಗೆ ಕಾರಣವಾಗಬಹುದು. ಅಲ್ಲದೆ ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು ಹೊರ ಸೂಸುವುದರಿಂದ ಇದರಿಂದ ಜಗಳಗಳು, ಮನಸ್ತಾಪಗಳೂ ಉಂಟಾಗಬಹುದು.

ಗಡಿಯಾರ:

ಸಮಯವು ಎಲ್ಲರಿಗೂ ಅಮೂಲ್ಯವಾದುದು. ಆದರೆ ಸಮಯವನ್ನು ಸೂಚಿಸುವ ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಜೀವನದಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ತೊಂದರೆಗಳಿಗೆ ಕಾರಣವಾಗಬಹುದು.

ನಿಮ್ಮ ಸಂಗಾತಿಗೆ ಗಡಿಯಾರ ಅಥವಾ ವಾಚ್ ಉಡುಗೊರೆಯಾಗಿ ನೀಡುವುದರಿಂದ ಕೆಲವೊಂದು ಬಾರಿ ಸಮಯವೇ ನಿಂತಂತೆ ಸಂಬಂಧವೂ ಅಂತ್ಯ ಕಾಣಬಹುದು.

 

Relationship tips ಗಂಡ- ಹೆಂಡತಿ ಯಾವ್ಯಾವಾಗ ದೈಹಿಕ ಸಂಪರ್ಕ ಹೊಂದಬಾರದು? ಯಾಕೆ?

Belts ಪುರುಷರು ಹೆಚ್ಚಾಗಿ ಬೆಲ್ಟ್ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ!

TAGGED:#love #relationship #lovers #gifts #breakup #black #perfume #news #newsics
Share This Article
Facebook Twitter Copy Link Print
Previous Article ವಿಮಾನದಲ್ಲಿ ಹೋಗುವಾಗ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ
Next Article BBMP ಮಳೆ ಅವಾಂತರ ನಿಯಂತ್ರಿಸಲು ಡ್ರೋನ್ ಮೊರೆ ಹೋದ ಬಿಬಿಎಂಪಿ

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?