Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಅಕ್ಟೋಬರ್ ಅಂತ್ಯದವರೆಗೂ ನಟ ದರ್ಶನ್‌ಗೆ ಸಂಕಷ್ಟ ಮುಂದವರಿಕೆ, ಜಾಮೀನು ಸಿಗುವುದು ಕಷ್ಟ: ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ
ಕರ್ನಾಟಕಪ್ರಮುಖಮನರಂಜನೆ

ಅಕ್ಟೋಬರ್ ಅಂತ್ಯದವರೆಗೂ ನಟ ದರ್ಶನ್‌ಗೆ ಸಂಕಷ್ಟ ಮುಂದವರಿಕೆ, ಜಾಮೀನು ಸಿಗುವುದು ಕಷ್ಟ: ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ

Share
2 Min Read
SHARE

newsics.com
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಹಿರಿಯ ನಟ ದರ್ಶನ್ ಅಕ್ಟೋಬರ್ ಅಂತ್ಯದವರೆಗೂ ಸಂಕಷ್ಟಕ್ಕೊಳಗಾಗಲಿದ್ದಾರೆ. ಅಕ್ಟೋಬರ್ 28ರವರೆಗೂ ಜಾಮೀನು ಸಿಗುವುದು ಕಷ್ಟ ಎಂದು ಬಿಗ್ ಬಾಸ್‌ಗೆ ಅತಿಥಿಯಾಗಿ ಬಂದು ಖ್ಯಾತಿ ಪಡೆದಿರುವ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕೆಯಾಗಿದೆ. ಅವರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ 15 ವರ್ಷಗಳಲ್ಲಿ ದರ್ಶನ್ ಅವರು ಒಂದಲ್ಲಾ ಒಂದು ವಿವಾದ ಮಾಡಿಕೊಳ್ಳುತ್ತಿದ್ದಾರೆ. ಕೋಪ ಅನ್ನೋದು ಆಯುಧವೂ ಹೌದು, ದೌರ್ಬಲ್ಯವೂ ಹೌದು. ಆತುರಗಾರನಿಗೆ ಬುದ್ಧಿಮಟ್ಟ. ದರ್ಶನ್ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಾವು ಹೇಳಬಾರದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುತ್ತದೆ’ ಎಂದು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ದರ್ಶನ್ ಅವರ ಜನ್ಮದಿನ, ರಾಶಿ-ನಕ್ಷತ್ರ ಉಲ್ಲೇಖಿಸಿ ಮುಂದೇನಾಗಬಹುದು ಎಂಬುದನ್ನು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ವಿವರಿಸಿದ್ದಾರೆ.

‘2011ರಿಂದ ದರ್ಶನ್ ಅವರಿಗೆ ಗುರುದಶ ಶುರುವಾಗಿದೆ. ಅವರು ಆಗ ದೊಡ್ಡ ಅಪವಾದ ಅನುಭವಿಸಿದ್ದರು. ಹಲವು ದಿನ ಜೈಲಿನಲ್ಲಿದ್ದರು. ಹೊರಗೆ ಇರುವ ದರ್ಶನ್‌ಗೂ ಆಂತರ್ಯದಲ್ಲಿರುವ ದರ್ಶನ್‌ಗೂ ಸಾಕಷ್ಟು ವ್ಯತ್ಯಾಸ ಇದೆ. ಗುರುದಶ ಶುರುವಾದಾಗಿನಿಂದ ಅವರು ಮೇಲೆ ಹೋಗೋದು ಪಾತಾಳಕ್ಕೆ ಬೀಳೋದು ಆಗುತ್ತಿದೆ’ ಎಂದಿದ್ದಾರೆ ಸ್ವಾಮೀಜಿ.
2013ರ ನಂತರ ಬಿಡುಗಡೆಯಾದ ಯಾವ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. 2023 ನವೆಂಬರ್‌ನಿಂದ 2024ರ ಅಕ್ಟೋಬರ್‌ವರೆಗೆ ಕುಜ ಭುಕ್ತಿ ಇದೆ. ಕುಜ ತುಂಬಾ ಕೋಪದವನು. ಕಾರಾಗೃಹ ವಾಸವನ್ನು ಕೊಡ್ತಾನೆ. ಅಲ್ಲಿಯೇ ಕೇತು ಬೇರೆ ಇದ್ದಾನೆ. ಹೀಗಾಗಿ ಅಪನಿಂದನೆ ಆಗುತ್ತದೆ. ತುಂಬಾ ಜಾಗೃತಿಯಿಂದ ಇರಬೇಕಿತ್ತು. ದರ್ಶನ್ ಅರೆಸ್ಟ್ ಆದ ದಿನವನ್ನು ಗಮನಿಸಿ ಹೇಳುವುದಾದರೆ, ಮಂಗಳವಾರ ಅವರು ಅರೆಸ್ಟ್ ಆಗಿದ್ದಾರೆ. ಹುಟ್ಟಿದಾಗಲೂ, ಅರೆಸ್ಟ್ ಆದಾಗಲೂ ಗುರು ಇದ್ದಾನೆ. 2024ರ ಅಕ್ಟೋಬರ್‌ವರೆಗೂ ಅವರಿಗೆ ಕಠಿಣ ಪರಿಸ್ಥಿತಿ ಇದೆ. ಅಕ್ಟೋಬರ್ ನಂತರ ಅವರ ಜೀವನ ಬದಲಾಗುತ್ತದೆ. ದರ್ಶನ್‌ಗೆ ಅಕ್ಟೋಬರ್ 28ವರೆಗೂ ಜಾಮೀನು ಅಸಾಧ್ಯ’ ಎಂದು ಸ್ವಾಮೀಜಿ ಹೇಳಿದ್ದಾರೆ.

ಚಿನ್ನ, ಬೆಳ್ಳಿ ಮತ್ತೆ ಬಲು ದುಬಾರಿ

2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ

ರಾಜ್ಯದಲ್ಲಿ ಮುಂದುವರಿದ ಡೆಂಘೀ ಅಟ್ಟಹಾಸ: ಬೆಂಗಳೂರಲ್ಲಿ ಬಾಲಕ ಸಾವು, ಶಿವಮೊಗ್ಗದಲ್ಲಿ ಝೀಕಾಗೆ ವೃದ್ಧ ಬಲಿ

TAGGED:Difficult continuation for actor Darshan till end of Octoberdifficult to get bail: Vidya Shankarananda Saraswati Swamiji
Share This Article
Facebook Twitter Copy Link Print
Previous Article ಚಿನ್ನ, ಬೆಳ್ಳಿ ಮತ್ತೆ ಬಲು ದುಬಾರಿ
Next Article ಜುಲೈ 23ಕ್ಕೆ ಕೇಂದ್ರ ಬಜೆಟ್: ಸಚಿವ ಕಿರಣ್ ರಿಜಿಜು ಮಾಹಿತಿ

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?