Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಾಂಖೆಡೆ ಸ್ಟೇಡಿಯಂನಲ್ಲಿ ಭಾರೀ‌ ಜನಸಮೂಹ: ಬಿಸಿಸಿಐನಿಂದ 125 ಕೋಟಿ ಬಹುಮಾನ, ಮಾರ್ದನಿಸಿದ ವಂದೇ ಮಾತರಂ
ದೇಶಪ್ರಮುಖ

ವಾಂಖೆಡೆ ಸ್ಟೇಡಿಯಂನಲ್ಲಿ ಭಾರೀ‌ ಜನಸಮೂಹ: ಬಿಸಿಸಿಐನಿಂದ 125 ಕೋಟಿ ಬಹುಮಾನ, ಮಾರ್ದನಿಸಿದ ವಂದೇ ಮಾತರಂ

Share
2 Min Read
SHARE

newsics.com

ಮುಂಬೈ: ಅದ್ದೂರಿಯಾಗಿ ನಡೆದ ಗೆಲುವಿನ ಪರೇಡ್‌ ಬಳಿಕ, ಟಿ20 ವಿಶ್ವಕಪ್‌ ವಿಜೇತ ಟೀಮ್‌ ಇಂಡಿಯಾ ಆಟಗಾರರಿಗೆ ಬಿಸಿಸಿಐ ವತಿಯಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅದ್ದೂರಿ ಸ್ವಾಗತ ಕಾರ್ಯಕ್ರಮದ ಕೊನೆ ಎನ್ನುವಂತೆ ಬಿಸಿಸಿಐ ತಾನು ಘೋಷಣೆ ಮಾಡಿದ್ದ 125 ಕೋಟಿ ರೂಪಾಯಿಯ ಬಹುಮಾನ ಮೊತ್ತದ ಚೆಕ್‌ಅನ್ನು ವಿಶ್ವಕಪ್‌ ವಿಜೇತ ತಂಡಕ್ಕೆ ಹಸ್ತಾಂತರ ಮಾಡಿತು.

ಬಳಿಕ ಟ್ರೋಫಿ ಗೆದ್ದ ತಂಡದ ಆಟಗಾರರು ವಂದೇ ಮಾತರಂ ಹಾಡಿಗೆ ಇಡೀ ಮೈದಾನದ ಸುತ್ತ ವಿಕ್ಟರಿ ಲ್ಯಾಪ್‌ ಮಾಡಿದರು. ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಜನಸ್ತೋಮ ವಿಜೇತ ತಂಡದ ಆಟಗಾರರ ಹೆಸರು ಕೂಗಿ ಸಂಭ್ರಮಿಸಿತು.

ಆಟಗಾರರು ವಿಕ್ಟರಿ ಲ್ಯಾಪ್‌ ಮಾಡುವಾಗ 2011ರ ಏಕದಿನ ವಿಶ್ವಕಪ್‌ನ ಟೀಮ್‌ನ ದಿನಗಳನ್ನು ನೆನಪಿಸಿತು. ಅಂದೂ ಕೂಡ ಟೀಮ್‌ ಇಂಡಿಯಾ ಬ್ಯಾಟಿಂಗ್‌ ವೇಳೆ ಬೇರೆಲ್ಲ ಗೀತೆಗಿಂತ ವಂದೇ ಮಾತರಂ ಹೆಚ್ಚಾಗಿ ಮೊಳಗಿತ್ತು.

ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ವಿಶೇಷವಾದ ನೆನಪಿನ ಬಗ್ಗೆ ಈ ವೇಳೆ ಮಾತನಾಡಿದರು. 2024 ರ T20 ವಿಶ್ವಕಪ್ ಗೆದ್ದ ನಂತರ ನಾನು ಮತ್ತು ರೋಹಿತ್ ಇಬ್ಬರೂ ಕಣ್ಣೀರು ಹಾಕಿದ್ದೆವು ಎಂದು ಹೇಳಿದರು. ಕೊಹ್ಲಿ ಅವರು ರೋಹಿತ್ ಅವರನ್ನು ತಬ್ಬಿಕೊಂಡಾಗ – ಆ ಕ್ಷಣವು ಅವರ ವೃತ್ತಿಜೀವನದಲ್ಲಿ ಅವರಿಗೆ ಅತ್ಯಂತ ವಿಶೇಷ ಸ್ಮರಣೆಯಾಗಿ ಉಳಿಯುತ್ತದೆ ಎಂದಿದ್ದಾರೆ.

ಇಡೀ ಟೂರ್ನಿಯಲ್ಲಿ ಸ್ಮರಣೀಯ ಎನಿಸುವಂಥ ಬೌಲಿಂಗ್‌ ಮಾಡಿದ ಜಸ್‌ಪ್ರೀತ್‌ ಬುಮ್ರಾರನ್ನು ಪ್ರಶಂಸೆ ಮಾಡಿದ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಡೆತ್‌ ಓವರ್‌ ಬೌಲಿಂಗ್‌ಅನ್ನು ಶ್ಲಾಘಿಸಿದರು.

ಜಸ್‌ಪ್ರೀತ್‌ ಬುಮ್ರಾನಂಥ ವೇಗಿ ಯುಗಕ್ಕೆ ಒಬ್ಬರು ಸಿಗುತ್ತಾರೆ. ಅವರು ನಿಜಕ್ಕೂ ವಿಶ್ವದ 8ನೇ ಅಚ್ಚರಿ ಎಂದರೂ ತಪ್ಪಲ್ಲ ಎಂದರು. ಹಾಗೇನಾದರೂ ನಾವು ಕಾಪಾಡಿಕೊಳ್ಳಬೇಕಾದ ವಿಚಾರವೇನಾದರೂ ಇದ್ದರೆ, ಅದು ಜಸ್‌ಪ್ರೀತ್‌ ಬುಮ್ರಾ ಮಾತ್ರ ಎಂದು ಕೊಹ್ಲಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೋಚ್‌ ರಾಹುಲ್‌ ದ್ರಾವಿಡ್‌, 2023ರ ಏಕದಿನ ವಿಶ್ವಕಪ್‌ ಸೋಲಿನ ಬಳಿಕ ಕೋಚ್‌ ಸ್ಥಾನದಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದೆ. ಈ ಹಂತದಲ್ಲಿ ಕ್ಯಾಪ್ಟನ್‌ ರೋಹಿತ್‌ ಶರ್ಮ ಫೋನ್‌ ಮಾಡಿದ್ದರಿಂದ ನನ್ನ ನಿರ್ಧಾರ ಬದಲಾಯಿಸಿದೆ ಎಂದಿದ್ದಾರೆ.

ಅಂದು ಕರೆ ಮಾಡಿದ ರೋಹಿತ್‌ ಶರ್ಮ, ಏಕದಿನ ವಿಶ್ವಕಪ್‌ ಸೋಲಿನಿಂದ ಬೇಸರವಾಗಿರುವುದು ನಿಜ. ಆದರೆ, ಇನ್ನೊಂದು 6-7 ತಿಂಗಳಲ್ಲಿ ಟಿ20 ವಿಶ್ವಕಪ್‌ ಇದೆ. ನಮ್ಮಿಬ್ಬರ ಕೊನೆಯ ಅವಕಾಶ ಎನ್ನುವಂತೆ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದರು. ಆ ಬಳಿಕ ನನ್ನ ನಿರ್ಧಾರ ಬದಲಾಯಿಸಿದೆ. ರೋಹಿತ್‌ ಶರ್ಮಗೆ ಥ್ಯಾಂಕ್ಸ್‌. ಇದೀಗ ನನ್ನ ಸುದೀರ್ಘ ದಿನಗಳ ಕನಸು ನನಸಾಗಿದೆ ಎಂದು ದ್ರಾವಿಡ್‌ ಹೇಳಿದರು.

ಅದರೊಂದಿಗೆ ವಿಶ್ವಕಪ್‌ನಲ್ಲಿ ಆಡಿದ ಟೀಮ್‌ನ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್‌, ಈ ಟೀಮ್‌ನಲ್ಲಿರುವ ಅಚಲವಾದ ಮನೋಭಾವಕ್ಕೆ ವಿಶ್ವಕಪ್‌ ಟ್ರೋಫಿ ಸಿಗಲೇಬೇಕಿತ್ತು. ಇದಕ್ಕೆ ತಂಡ ಅರ್ಹವಾಗಿತ್ತು ಎಂದು ಹೇಳಿದ್ದಾರೆ.

ಟೀಮ್‌ ಕ್ಯಾಪ್ಟನ್‌ ರೋಹಿತ್‌ ಶರ್ಮ ಮಾತನಾಡಿ, ಫೈನಲ್‌ ಓವರ್‌ನ ಕ್ಷಣಗಳನ್ನು ಮಾತನಾಡಿದರು. ಸೂರ್ಯಕುಮಾರ್‌ ಯಾದವ್‌ ಪಡೆದುಕೊಂಡ ಡೇವಿಡ್‌ ಮಿಲ್ಲರ್‌ ಅವರ ಬ್ರಿಲಿಯಂಟ್‌ ಕ್ಯಾಚ್‌ ತಾವೆಂದೂ ಮರೆಯೋದಿಲ್ಲ ಎಂದು ಹೇಳಿದರು. ಅದರೊಂದಿಗೆ ಹಾರ್ದಿಕ್‌ ಪಾಂಡ್ಯ ಅವರ ಫೈನಲ್‌ ಓವರ್‌ನ ಬಗ್ಗೆ ಮಾತನಾಡಲು ಆರಂಭಿಸಿದಾಗ, ಇಡೀ ವಾಂಖೆಡೆ ಪ್ರೇಕ್ಷಕರು ವಾಂಖೆಡೆ, ವಾಂಖೆಡೆ.. ಎಂದು ಕರತಾಡನ ಮಾಡಲು ಆರಂಭಿಸಿದರು.

ಮುಂಬೈನಲ್ಲಿ ಟೀಂ ಇಂಡಿಯಾಗೆ ವಾಟರ್ ಸೆಲ್ಯೂಟ್, ವಿಶಿಷ್ಟ ಗೌರವ, ಮಳೆಯಲ್ಲೂ ಕಿಕ್ಕಿರಿದ ಅಭಿಮಾನಿಗಳು, ಭಾರೀ ಟ್ರಾಫಿಕ್ ಜಾಮ್, ವಿಡಿಯೋ ನೋಡಿ

ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಳಬಹುದು!

ಡೆಂಗ್ಯೂ ಜ್ವರಕ್ಕೆ ಅಂಕೋಲಾದ ಯುವಕ ಬಲಿ, ರಾಜ್ಯದಲ್ಲಿಂದು 286‌ ಮಂದಿಗೆ ಡೆಂಗ್ಯೂ ಸೋಂಕು

TAGGED:Massive crowd at Wankhede Stadium: 125 crore prize from BCCIVande Mataram
Share This Article
Facebook Twitter Copy Link Print
Previous Article ಲೆಹೆಂಗಾ ತೊಟ್ಟು ಹಾಟ್ ಲುಕ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
Next Article ಸಾಲ ಬಾಧೆ: ರಾಯಚೂರಿನ ರೈತ ಆತ್ಮಹತ್ಯೆ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?