newsics.com
ರಾಯಚೂರು: ಸಾಲ ಬಾಧೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಮಗಡ್ಡಿ ಗ್ರಾಮದಲ್ಲಿ ನಡೆದಿದೆ.
ಚನ್ನಬಸಪ್ಪ ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಇತರೆ ಕೆಲಸ ಕಾರ್ಯಗಳಿಗೆ 10 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದ. ಜಮೀನು ಒತ್ತೆ ಇಟ್ಟು 5 ಲಕ್ಷ ರೂಪಾಯಿ ಸಾಲ, ಮನೆ ನಿರ್ಮಾಣಕ್ಕೆ 4 ಲಕ್ಷ 80 ಸಾವಿರ ರೂಪಾಯಿ ಸಾಲ ಇದರ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 1 ಲಕ್ಷ 34 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದ ಮೃತ ರೈತ. ಬರಗಾಲದ ಜತೆಗೆ ಬೆಳೆ ಇಲ್ಲದೇ ಸಾಲ ತೀರಿಸಲಾಗದೆ ಬೇಸತ್ತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಹಲವೆಡೆ ಭಾರೀ ಮಳೆ: ಇಬ್ಬರ ಸಾವು, ಉಡುಪಿಯ 3, ಉತ್ತರ ಕನ್ನಡ ಜಿಲ್ಲೆಯ 3 ತಾಲೂಕುಗಳ ಶಾಲಾ ಕಾಲೇಜಿಗೆ ನಾಳೆ ರಜೆ
ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ, ಜೀವ ಉಳಿಸಿದ ಹುಡುಗ..!
ಡೆಂಗ್ಯೂ ಜ್ವರಕ್ಕೆ ಅಂಕೋಲಾದ ಯುವಕ ಬಲಿ, ರಾಜ್ಯದಲ್ಲಿಂದು 286 ಮಂದಿಗೆ ಡೆಂಗ್ಯೂ ಸೋಂಕು