newsics.com
ಮಂಗಳೂರು: ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಮುರಿದು ಬಿದ್ದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡಿನಲ್ಲಿ ನಡೆದಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ನಡೆಯುತ್ತಿದ್ದ ವೇಳೆ ಕುಸಿದಿದೆ.
ರಾತ್ರಿ ಸುಮಾರು 1.40-2.00 ಗಂಟೆ ವೇಳೆಗೆ ತೇರು ಮುರಿದು ಬಿದ್ದ ಘಟನೆ ನಡೆದಿದೆ ಎನ್ನಲಾಗ್ತಿದೆ. ರಾತ್ರಿ ವೇಳೆಯೂ ಕೂಡ ರಥತೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಈ ಅವಘಡದಿಂದ, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಘಟನೆಯು ಭಕ್ತ ಸಮೂಹದಲ್ಲಿ ಆತಂಕಕ್ಕೆ ಕಾರಣವಾಯಿತು. ಬಳಿಕ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ಮುಂದುವರಿಸಲಾಯಿತು. ಯಾವುದೇ ವಿಘ್ನವಿಲ್ಲದೆ ಜಾತ್ರೋತ್ಸವ ಮುಂದುವರಿದಿದೆ.