newsics.com
ಮುಂಜಾನೆಯನ್ನು ನಾವು ಹೇಗೆ ಆರಂಭಿಸುತ್ತೇವೋ ನಮ್ಮ ಸಂಪೂರ್ಣ ದಿನವೂ ಅದೇ ರೀತಿ ಇರುತ್ತದೆ. ಈ ಕಾರಣಕ್ಕಾಗಿ ಮುಂಜಾನೆ ಎದ್ದಾಕ್ಷಣ ಇವುಗಳನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಮುಂಜಾನೆ ಅಥವಾ ಬೆಳಗ್ಗೆ ಎದ್ದಾಕ್ಷಣ ನಾವು ಏನನ್ನು ನೋಡಬಾರದು.? ಮುಂಜಾನೆ ಎದ್ದ ತಕ್ಷಣ ಇವುಗಳನ್ನು ನೋಡಲೇಬೇಡಿ.
ಸಾಮಾನ್ಯವಾಗಿ ಜನರು ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡುತ್ತಾರೆ, ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಮೊದಲು ದೇವರ ದರ್ಶನ ಮಾಡಬೇಕು. ಹೀಗೆ ಮಾಡುವುದರಿಂದ ದಿನ ಉತ್ತಮವಾಗಿ ಆರಂಭದೊಂದು ಉತ್ತಮವಾಗಿ ಕಳೆಯುತ್ತದೆ.
ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳು ಅಥವಾ ಇತರರ ನೆರಳನ್ನು ನೋಡುವುದು ಒಳ್ಳೆಯದಲ್ಲ. ನೋಡಿದರೆ ಜೀವನದಲ್ಲಿ ಅಶಾಂತಿ, ಒತ್ತಡ ಹೆಚ್ಚುತ್ತದೆ. ಬೆಳಿಗ್ಗೆ ನೆರಳನ್ನು ನೋಡುವುದು ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಹ ಬೆಳಗ್ಗೆ ಎದ್ದ ತಕ್ಷಣ ನೆರಳು ನೋಡಬೇಡಿ.
ವ್ಯಕ್ತಿಯ ಭವಿಷ್ಯವು ಗಡಿಯಾರದೊಂದಿಗೆ ಸಂಬಂಧಿಸಿದೆ. ಮನೆಯಲ್ಲಿ ನಿಂತುಹೋದ ಗಡಿಯಾರವು ಕೆಟ್ಟ ಸಮಯವನ್ನು ಸೂಚಿಸುತ್ತದೆ. ಧರ್ಮಗ್ರಂಥಗಳ ಪ್ರಕಾರ, ನಿಂತುಹೋದ ಗಡಿಯಾರವನ್ನು ನೋಡುವುದು ಮನೆಯಲ್ಲಿ ವಿವಾದಕ್ಕೆ ಕಾರಣವಾಗಬಹುದು. ಪ್ರತಿದಿನದ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.
ಬೆಳಗ್ಗೆ ಎದ್ದ ತಕ್ಷಣ ಕಾಡು ಪ್ರಾಣಿಗಳ, ಯುದ್ಧದ ಚಿತ್ರಗಳನ್ನು ನೋಡಬೇಡಿ. ಇದು ನಿಮ್ಮ ಸಂಬಂಧಗಳು, ಮನಸ್ಸು, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಚಿತ್ರಗಳನ್ನು ಮನೆಯಲ್ಲಿ ಇಡದಿರುವುದು ಉತ್ತಮ.
ಬೆಳಗ್ಗೆ ಎದ್ದ ತಕ್ಷಣ ಮುಸುರಿ ಪಾತ್ರೆಗಳನ್ನು ನೋಡುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಕಡಿಮೆಯಾಗುತ್ತದೆ. ಶಾಸ್ತ್ರಗಳ ಪ್ರಕಾರ ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಮಲಗಬೇಕು. ಮುಸುರಿ ಪಾತ್ರೆಗಳನ್ನು ಹಾಗೆಯೇ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ.