newsics.com
ಬೆಳಗಿನ ಜಾವದಲ್ಲಿ ಬರುವ ಕನಸುಗಳು ನನಸಾಗುತ್ತವೆ. ಕನಸಿನಲ್ಲಿ ಕಾಣುವ ವಸ್ತುಗಳು ಜೀವನದಲ್ಲಿನ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಪ್ರತಿನಿಧಿಸುತ್ತವೆ. ಕನಸಿನಲ್ಲಿ ಏನೇ ನೋಡಿದರು, ಖಂಡಿತವಾಗಿಯೂ ಸಲ್ಪ ಅರ್ಥವಿರುತ್ತದೆ. ಹೀಗಾಗಿ, ಈ ಮೂರು ಪಕ್ಷಿಗಳು ಕನಸಿನಲ್ಲಿ ಕಂಡ್ರೆ ಇವು ಅದೃಷ್ಠದ ಸಂಕೇತವಾಗಿದ್ದು, ಒಳ್ಳೆಯ ದಿನಗಳು ಆರಂಭವಾದಂತೆ.
1.ಕನಸಿನಲ್ಲಿ ಗಿಳಿ ನೋಡಿ
ನಿಮ್ಮ ಕನಸಿನಲ್ಲಿ ಗಿಳಿ ರಾಮನನ್ನು ನೋಡಿದರೆ, ಅಲ್ಲಿಂದ ನಿಮಗೆ ಶುಭದಿನಗಳು ಆರಂಭವಾದಂತೆ ಅರ್ಥಮಾಡಿಕೊಳ್ಳಿ. ಗಿಳಿಯನ್ನು ನೋಡುವುದು ಶುಭವಾಗಿದ್ದು, ಗಿಳಿಯನ್ನು ನೋಡುವುದರಿಂದ ಆರ್ಥಿಕ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಜೋಡಿ ಗಿಳಿ ಕಂಡ್ರೆ ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಅಧಿಕವಾಗುತ್ತದೆ ಎಂದರ್ಥ.
2.ಕನಸನಲ್ಲಿ ಗೂಬೆ ನೋಡಿ
ಒಂದು ವೇಳೆ ಕನಸಿನಲ್ಲಿ ಗೂಬೆ ನೋಡಿದರೆ, ಲಕ್ಷ್ಮೀದೇವಿ ಮನೆ ಬಾಗಿಲಿಗೆ ಎಂದರ್ಥ. ಗೂಬೆಯನ್ನು ನೋಡಿದರೆ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂದು ಅರ್ಥಮಾಡಿಕೊಳ್ಳಿ. ಕನಸಲ್ಲಿ ಗೂಬೆ ನೋಡುವುದರಿಂದ ಆರ್ಥಿಕ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಗಲಿದೆ ಎಂದರ್ಥ.
3. ನವಿಲು ನೋಡುವುದು
ಕನಸಿನಲ್ಲಿ ನವಿಲು ನೋಡಿದರೆ ಬಹಳ ಶುಭ ಸಂಕೇತ. ಎಲ್ಲರಿಗೂ ತಿಳಿದಿರುವಂತೆ ನವಿಲು ಕಾರ್ತೀಕೇಯ ವಾಹನ. ಹೀಗಾಗಿ, ಕನಸಿನಲ್ಲಿ ನವಿಲು ಕಂಡ್ರೆ ಕಚೇರಿಯಲ್ಲಿ ಯಶಸ್ಸನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಅಂತಹ ಕನಸು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳವನ್ನು ಸೂಚಿಸುತ್ತದೆ.