newsics.com
ನಟ ಅಶೋಕ್ ಹೆಗಡೆ ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಅವಕಾಶಗಳ ನಂತರ ʻಕುಲವಧುʼ ಧಾರಾವಾಹಿಯಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿದ್ದ ಅಶೋಕ್ ಅವರಿಗೆ ಆ ಪಾತ್ರ ದೊಡ್ಡ ಖ್ಯಾತಿ ತಂದು ಕೊಟ್ಟಿತು. ಸದ್ಯ ʻದೃಷ್ಟಿ ಬೊಟ್ಟುʼ ಧಾರಾವಾಹಿಯಲ್ಲಿ ಅಶೋಕ್ ನಟಿಸುತ್ತಿದ್ದಾರೆ. ನಟ ಅಶೋಕ್ ಹೆಗಡೆ ಮೊದಲ ಬಾರಿಗೆ ತಮ್ಮ ಬದುಕಿನಲ್ಲಿರುವ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದು, ತಮ್ಮ ಜೀವನದ ಕಹಿ ಘಟನೆ ನೆನೆದು ಕಣ್ಣೀರಾಗಿದ್ದಾರೆ
ನನಗೆ ಎರಡು ಮಕ್ಕಳಾದವು. ಆ ಪ್ರಗ್ನೆನ್ಸಿ ಟೈಮ್ನಲ್ಲಿ ಶುಗರ್ ಬಂತು. ಮೊದಲು ನನ್ನ ಹೆಂಡತಿಗೆ ಶುಗರ್ ಇರಲಿಲ್ಲ. ಎರಡು ಮಕ್ಕಳು ಹಾಗೆ ಸತ್ತು ಹೋಯ್ತು. ಶುಗರ್ ಮಗುಗೆ ಅಟ್ಯಾಕ್ ಆಗಿ, ಎರಡೂ ಮಕ್ಕಳು ಇಂದು ಹರಿಶ್ಚಂದ್ರ ಘಾಟ್ನಲ್ಲಿ ಮಲಗಿವೆ. ಒಂದು ಮಗು ಆಯ್ತು, ಅದು ಹಾಗೆ ಹೋಯ್ತು. ಇನ್ನೊಂದು ಮಗು ಆಯ್ತು, ಅದು ಹಾಗೆ ಹೋಯ್ತು. ನಾನು ಈಗ ಹೊರಗಡೆ ಶೂಟಿಂಗ್ ಎಲ್ಲ ಹೋಗ್ಬಿಡ್ತೀನಿ, ಅವಳು ಒಬ್ಬಳೇ ಮನೆಯಲ್ಲಿ ಇರುವಾಗ ಅವಳಿಗೆ ಒಂಥರ ಮಾನಸಿಕ ಆಗುತ್ತದೆ. ಇನ್ನೊಂದು ಮಗು ಆದ್ರೂ ಹೀಗೆ ಆಗ್ಬಿಡುತ್ತಾ ಎನ್ನೋ ಭಯ ಆವರಿಸುತ್ತದೆ, ಮತ್ತೆ ಮಗು ಬೇಡ ಅಂತ ನಿರ್ಧಾರ ಮಾಡಿದ್ವಿ. ಮಕ್ಕಳು ಬೇಡ ನನಗೆ ನೀನು, ನಿನಗೆ ನಾನು ಅಂತ ಫಿಕ್ಸ್ ಆಗಿ ಇಂದಿಗೂ ನಾನು ಅವಳಿಗೆ ದದ್ದ ಅಂತ ಕರೀತೀನಿ, ಅವಳು ನನಗೆ ದದ್ದ ಅಂತ ಕರೆಯುತ್ತಾಳೆ. ನನ್ನನ್ನು ಅವಳು ಯಾವುದೇ ನಿರೀಕ್ಷೆ ಇಲ್ಲದೆ ಪ್ರೀತಿಸಿದಳು. ಇಂದು ಕೂಡ ಅವಳು ನನ್ನ ಜೊತೆಗೆ ಇದ್ದಾಳೆ” ಎಂದು ಅಶೋಕ್ ಹೆಗಡೆ ಹೇಳಿದ್ದಾರೆ.