newsics.com
ಬೇಸಿಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಇದರ ರುಚಿಯು ಅದ್ಭುತವಾಗಿರುವುದು. ಆದ್ರೆ ಮಾವಿನ ಹಣ್ಣನ್ನು ತಿನ್ನೋ ಖುಷಿಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ನೀವು ಮಾವಿನ ಹಣ್ಣಿನ ಜೊತೆಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಲೇಬಾರದು. ಇಲ್ಲಿದೆ ನೋಡಿ ವಿಷಯ.
ಹಾಗಲಕಾಯಿ ಸಾಮಾನ್ಯ ದಿನಗಳಲ್ಲಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಾವಿನ ಹಣ್ಣಿಗೆ ಹಾಗಲಕಾಯಿ ವಿರುದ್ಧ ಆಹಾರವಾಗಿದೆ. ನಿಮ್ಮ ಊಟದಲ್ಲಿ ಹಾಗಲಕಾಯಿ ಇದ್ದು ಊಟದ ಜೊತೆ ನೀವು ಮಾವಿನ ಹಣ್ಣನ್ನು ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಮಾವು ಮತ್ತು ಹಾಗಲಕಾಯಿಯಿಂದ ಶರೀರದಲ್ಲಿ ರಿಯಾಕ್ಷನ್ ಆಗುತ್ತದೆ. ಇದರಿಂದ ವಾಂತಿ, ಜ್ವರ , ತಲೆ ನೋವು ಬರುವ ಸಾಧ್ಯತೆ ಹೆಚ್ಚಿದೆ.
ಮಾವು ಮತ್ತು ಸಿಟ್ರಸ್ ಹಣ್ಣುಗಳು ಹುಳಿ ರುಚಿಯನ್ನು ಹೊಂದಿದ್ದರೂ, ಮಾವಿನ ಹಣ್ಣುಗಳನ್ನು ತಿಂದ ತಕ್ಷಣ ಈ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಯಂತಹ ಹಣ್ಣುಗಳಲ್ಲಿ ಹೆಚ್ಚಿನ ಆಮ್ಲವಿದೆ. ಇದು ಮಾವಿನ ಹಣ್ಣಿನಲ್ಲಿರುವ ಕಿಣ್ವಗಳೊಂದಿಗೆ ಬೆರೆತಾಗ ಅದು ಆಮ್ಲೀಯತೆಯನ್ನು ಉಂಟುಮಾಡುತ್ತದೆ ಮತ್ತು ನಮಗೆ ಅತಿಸಾರ ಸಮಸ್ಯೆಯನ್ನುಂಟು ಮಾಡುತ್ತದೆ.
ಬಿಸಿ ಮತ್ತು ಮಸಾಲೆಯುಕ್ತ ಆಹಾರವನ್ನು ಮಾವಿನ ಹಣ್ಣಿನೊಂದಿಗೆ ತಿನ್ನುವುದರಿಂದ ಮಸಾಲೆಯು ನಮ್ಮ ರುಚಿ ನಾಲಿಗೆಯನ್ನು ಆವರಿಸುತ್ತದೆ. ಇವು ಮಾವಿನ ವಿಶಿಷ್ಟ ರುಚಿಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ, ಮಸಾಲೆಯುಕ್ತ ಆಹಾರಗಳು ಮಾವಿನ ಹಣ್ಣಿನಲ್ಲಿರುವ ನೈಸರ್ಗಿಕವಾಗಿ ಕಂಡುಬರುವ ಕಿಣ್ವಗಳೊಂದಿಗೆ ಬೆರೆತಾಗ, ನಮಗೆ ಗ್ಯಾಸ್ಟ್ರಿಕ್ಟ್ ಸಮಸ್ಯೆಯನ್ನು ಉಂಟಾಗುತ್ತದೆ. ಹಾಗಾಗಿ ಮಾವಿನ ಹಣ್ಣನ್ನು ಮಾತ್ರ ತಿನ್ನುವುದು ಉತ್ತಮ.
ಸಣ್ಣವರಿದ್ದಾಗ ಅದೆಷ್ಟೋ ಜನರಿಗೆ ಹೇಳಿರಬಹುದು. ಮಾವಿನ ಕಾಯಿ ಮತ್ತು ಮಾವಿನ ಹಣ್ಣನ್ನು ತಿಂದು ನೀರನ್ನು ಕುಡಿಬೇಡಿ ಅಂತ. ಇದು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಾವಿನಹಣ್ಣನ್ನು ತಿಂದು ಅರ್ಧಗಂಟೆಯ ನಂತರ ನೀರು ಕುಡಿಯುವುದು ಒಳ್ಳೆಯದು.