Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್
ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

Share
2 Min Read
SHARE

newsics.com/ನ್ಯೂಸಿಕ್ಸ್

ಬಾಲಿವುಡ್ ನಟ ಆಮಿರ್ ಖಾನ್ ಅವರು  ಇತ್ತೀಚೆಗೆ ನಟನೆಗಿಂತ, ಸಿನಿಮಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ಈ ನಿರ್ಮಾಣ ಸಂಸ್ಥೆಯಿಂದ ಡಾಕ್ಯುಮೆಂಟರಿ ಒಂದು ಬರಲಿದೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರೋಚಕ ಹಾಗೂ ಸ್ಪೂರ್ತಿದಾಯಕ ಜೀವನದ ಕುರಿತು ವಿಶೇಷ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಒಂದನ್ನು ಸಿದ್ಧಪಡಿಸಲು ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ.

ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಡಾಕ್ಯುಮೆಂಟರಿಯನ್ನು ನಿರ್ದೇಶಿಸುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯೊಂದರಿಂದ ಆರಂಭವಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗೆ ದ್ರೌಪದಿ ಮುರ್ಮು ಅವರು ನಡೆದುಬಂದ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತದೆ.

ಕಷ್ಟದ ದಿನಗಳು ಹಾಗೂ ಹಳ್ಳಿಯ ಜೀವನದ ಮರುಸೃಷ್ಟಿ:

ವರದಿಗಳ ಪ್ರಕಾರ, ಈ ಡಾಕ್ಯುಮೆಂಟರಿಯಲ್ಲಿ ದ್ರೌಪದಿ ಮುರ್ಮು ಅವರ ಜೀವನದ ಪ್ರಮುಖ ಘಟ್ಟಗಳನ್ನು ತೋರಿಸಲಾಗುತ್ತದೆ. ಒಡಿಶಾದ ಹಳ್ಳಿಯ ದಿನಗಳು, ಅವರ ಸಾರ್ವಜನಿಕ ಜೀವನದ ಪ್ರವೇಶ ಹಾಗೂ ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಸುಂದರ ಕ್ಷಣಗಳು ಇದರಲ್ಲಿ ಇರಲಿವೆ. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲಿ ಅವರು ಎದುರಿಸಿದ ಕಷ್ಟಗಳು, ಅವರು ಕಂಡ ಸಾವು-ನೋವುಗಳು ಮತ್ತು ಅವುಗಳನ್ನು ಮೆಟ್ಟಿ ನಿಂತ ಅವರ ಧೈರ್ಯದ ಕಥೆಯೂ ಇದರಲ್ಲಿ ಇರಲಿವೆ.

ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರದ ಕೆಲವು ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಅವರ ಬಾಲ್ಯದ ದಿನಗಳನ್ನು ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. 2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಮುರ್ಮು ಅವರು, ಈ ಹುದ್ದೆಗೇರಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ.

ಹಳೆಯ ಜೋಡಿ ಮತ್ತೆ ಒಂದಾಗಿ ಮುನ್ನಡೆ:

ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ‘ರುಬಾರು ರೋಶ್ನಿ’ (2019) ಸಾಕ್ಷ್ಯಚಿತ್ರವನ್ನು ಕೂಡ ಸ್ವಾತಿ ಚಕ್ರವರ್ತಿ ಅವರೇ ನಿರ್ದೇಶಿಸಿದ್ದರು. ಈಗ ಈ ಯಶಸ್ವಿ ಜೋಡಿ ದ್ರೌಪದಿ ಮುರ್ಮು ಅವರ ಬಯೋಪಿಕ್ ಮಾದರಿಯ ಡಾಕ್ಯುಮೆಂಟರಿಗಾಗಿ ಮತ್ತೊಮ್ಮೆ ಕೈಜೋಡಿಸಿದೆ.

ಸದ್ಯ ಆಮಿರ್ ಖಾನ್ ಪ್ರೊಡಕ್ಷನ್ಸ್ ಸಖತ್ ಬ್ಯುಸಿಯಾಗಿದೆ. ಆಮಿರ್ ಖಾನ್ ಅವರು ಸನ್ನಿ ಡಿಯೋಲ್ ನಟನೆಯ ಮತ್ತು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಬಿಗ್ ಬಜೆಟ್ ಸಿನಿಮಾ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಆರೋಗ್ಯಕರ ಜೀವನ ನಿಮ್ಮದಾಗಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

TAGGED:Aamir Khan to make a documentary based on the life of President Draupadi Murmu
Share This Article
Facebook Twitter Copy Link Print
Previous Article ಆರೋಗ್ಯಕರ ಜೀವನ ನಿಮ್ಮದಾಗಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
Next Article ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read
ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?