newsics.com
ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯಾನಂದ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಬಳಿಕ ನಿತ್ಯಾನಂದ ನಿಧನ ಹೊಂದಿಲ್ಲ ಎಂಬ ಸುದ್ದಿಯೂ ಅಷ್ಟೇ ವೇಗವಾಗಿ ಹಬ್ಬಿತ್ತು.
ಆದರೆ ಅಸಲಿಯತ್ತು ಬೇರೆಯೇ ಇದೆ. ಬೊಲಿವಿಯ ಸ್ಥಳೀಯ ಬುಡಕಟ್ಟು ಸಮುದಾಯಗಳಿಂದ ಜಾಗವನ್ನು ಭೋಗ್ಯಕ್ಕೆ ಹಾಕಿಕೊಳ್ಳಲು ಹೋಗಿ ನಿತ್ಯಾನಂದ ಹಾಗೂ ಆತನ ಹಿಂಬಾಲಕರು ವಿವಾದ ಮಾಡಿಕೊಂಡಿದ್ದಾರೆ. ಅಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯವೊಂದಕ್ಕೆ ಹಣದ ಆಸೆ ತೋರಿಸಿ 1000 ವರ್ಷಕ್ಕೆ ಜಾಗವನ್ನು ಲೀಸ್‌ಗೆ ತೆಗೆದುಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಬೊಲಿವಿಯದ ಸ್ಥಳೀಯ ದಿನಪತ್ರಿಕೆ ಎಲ್ ದೆಬೆರ್ ಈ ಕುರಿತು ಸುದ್ದಿಯನ್ನು ಮಾಡಿ ನಿತ್ಯಾನಂದನ ಬಣ್ಣ ಬಿಚ್ಚಿಟ್ಟಿತ್ತು. ಈ ಸುದ್ದಿಯಿಂದ ಮುಖವಾಡ ಬಯಲಾಗುತ್ತಿದ್ದಂತೆ ನಿತ್ಯಾನಂದ ಬೊಲಿವಿಯದಿಂದ ಕಾಲ್ಕಿತ್ತಿದ್ದಾನೆ. ನಿತ್ಯಾನಂದನ ಹಿಂಬಾಲಕರು ಸಹ ಅಲ್ಲಿಂದ ತಮ್ಮ ತಮ್ಮ ದೇಶಗಳಿಗೆ ವಾಪಸ್ ಆಗಿದ್ದಾರೆ. ನಿತ್ಯಾನಂದನ ಮುಖವಾಡ ಬಯಲಾಗುತ್ತಿದ್ದಂತೆ ಬೊಲಿವಿಯ ಸಚಿವಾಲಯ ತಾವು ನಿತ್ಯಾನಂದನ ಊಹಿತ ದೇಶ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಜೊತೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೊಲಿವಿಯ ಪೊಲೀಸರು ನಿತ್ಯಾನಂದನ ಊಹಿತ ದೇಶ ಕೈಲಾಸದ ಒಟ್ಟು 20 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ ಭೂಕಬಳಿಕೆ ಪ್ರಕರಣ ದಾಖಲಿಸಿದೆ. ಪ್ರವಾಸಿ ವಿಸಾ ಬಳಸಿ ಬೊಲಿವಿಯ ತಲುಪಿ ಈ ಖತರ್ನಾಕ್ ಯೋಜನೆ ಮಾಡಿದ್ದ ನಿತ್ಯಾನಂದ ಅಂಡ್ ಗ್ಯಾಂಗ್ ಇದೀಗ ಬೊಲಿವಿಯದಿಂದ ಎಸ್ಕೇಪ್ ಆಗಿದ್ದು, ಶೀಘ್ರದಲ್ಲೇ ನಿತ್ಯಾನಂದ ಭಾರತಕ್ಕೆ ಮರಳುವ ಸಾಧ್ಯತೆಗಳಿವೆ.
ಮೇ 11 ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ: ರಾಜ್ಯಾದ್ಯಂತ ಹೋರಾಟಕ್ಕೆ ಸ್ವಾಮೀಜಿ ಕರೆ