Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಿಯಲ್ ಎಸ್ಟೇಟ್ ಏಜೆಂಟ್ ಪತಿ ಕೊಲೆಗೆ ‘ಹೌ ಟು ಕಿಲ್’ ಪುಸ್ತಕ ಖರೀದಿಸಿದ್ದ ಪತ್ನಿ
ಕರ್ನಾಟಕಪ್ರಮುಖ

ರಿಯಲ್ ಎಸ್ಟೇಟ್ ಏಜೆಂಟ್ ಪತಿ ಕೊಲೆಗೆ ‘ಹೌ ಟು ಕಿಲ್’ ಪುಸ್ತಕ ಖರೀದಿಸಿದ್ದ ಪತ್ನಿ

Share
2 Min Read
SHARE

newsics.com

ಬೆಂಗಳೂರು: ‘ಹೌ ಟು ಕಿಲ್’ ಎಂಬ ಪುಸ್ತಕದಿಂದ ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಸಿಂಗ್
ಕೊಲೆಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ
ತಾನೇ ತಂದು ಕೊಟ್ಟಿದ್ದ ನಿದ್ರೆ ಮಾತ್ರೆಯಿಂದಲೇ ಪತ್ನಿ ಹಾಗೂ ಅತ್ತೆಯಿಂದ ಲೋಕನಾಥ್‌ ಕೊಲೆಯಾಗಿದ್ದ ಸಂಗತಿ ಬಯಲಾಗಿದೆ.

ಕಳೆದ ಶನಿವಾರ ಬಿಳಿಜಾಜಿಹಳ್ಳಿ ಸಮೀಪದ ಬಿಜಿಎಸ್‌ ಲೇಔಟ್‌ನಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಲೋಕನಾಥ್‌ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ನಿ ಯಶಸ್ವಿನಿ ಹಾಗೂ ಅತ್ತೆ ಹೇಮಾ ಬಾಯಿಯನ್ನು ಬಂಧಿಸಿದ್ದ ಪೊಲೀಸರು, ಈ ಹತ್ಯೆ ಹಿಂದಿನ ಪೂರ್ವ ಸಿದ್ಧತೆ ಬಗ್ಗೆ ತನಿಖೆಗಿಳಿದಾಗ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ.
ಮೃತ ಲೋಕನಾಥ್ ಹಾಗೂ ಹೆಸರಘಟ್ಟ ಸಮೀಪದ ಕೆರೆಗುಡ್ಡದಹಳ್ಳಿ ಹೇಮಾ ಕುಟುಂಬವು ಸಂಬಂಧಿಕರಾಗಿದ್ದು, ಆತನ ಅಪರಾಧಿಕ ಚಟುವಟಿಕೆಗಳ ವಿಚಾರ ತಿಳಿದು ಆತನಿಂದ ಅವರು ಸಂಪರ್ಕ ಕಡಿತಗೊಂಡಿದ್ದರು. ಹೀಗಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಯಶಸ್ವಿನಿಯನ್ನು ಮರಳು ಮಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಈ ಸಂಗತಿ ತಿಳಿದು ಮಗಳಿಗೆ ಬುದ್ಧಿ ಹೇಳಿ ಲೋಕನಾಥ್ ಸಂಗದಿಂದ ಆಕೆಯ ಪೋಷಕರು ದೂರವಿರಿಸಿದ್ದರು. ಆಕೆ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮತ್ತೆ ಸೆಳೆದು ಕಳೆದ ಡಿಸೆಂಬರ್‌ನಲ್ಲಿ ಕುಣಿಗಲ್‌ ಉಪ ನೋಂದಣಿಧಿಕಾರಿಯಲ್ಲಿ ಮದುವೆಯಾಗಿದ್ದರು.

ಮದುವೆ ಬಳಿಕ ಹಿಂಸೆ: ಮದುವೆ ಬಳಿಕ ಲೋಕನಾಥ್, ‘ನಾನು ನಿನ್ನನ್ನು ವಿವಾಹವಾಗಿದ್ದೇ ಚಿತ್ರಹಿಂಸೆ ಕೊಡಲು. ನಿನ್ನ ತಂದೆ-ತಾಯಿಯನ್ನು ಸಹ ಜೀವ ಸಹಿತ ಉಳಿಸುವುದಿಲ್ಲ’ ಎಂದು ಪತ್ನಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಅವಳು ಬೇಕು ನೀನು ಬೇಕು ಎಂದಿದ್ದ. ಇದರಿಂದ ಯಶಸ್ವಿನಿ ಖಿನ್ನತೆಗೊಳಗಾಗಿದ್ದಳು. ಮಗಳ ಸ್ಥಿತಿ ಕಂಡು ಹೇಮಾ, ಏನಾಗಿದೆ ಎಂದು ವಿಚಾರಿಸಿದಾಗ ಎಲ್ಲ ವಿಚಾರ ತಿಳಿದಿದೆ. ಆಗ ಲೋಕನಾಥ್‌ ಜೀವಂತವಿದ್ದರೆ ನಾವು ಬದುಕಲು ಸಾಧ್ಯವಿಲ್ಲವೆಂದು ಕೊಲೆಗೆ ಸಂಚು ರೂಪಿಸಿದ್ದಾರೆ. ಯಶಸ್ವಿನಿ ಹಾಗೂ ಆಕೆಯ ಕುಟುಂಬದವರ ಬಗ್ಗೆ ಮಾಹಿತಿ ಸಂಗ್ರಹಿಸಲು ತನ್ನ ಸಹಚರರ ಮೂಲಕ ಆತ ಗೂಢಚಾರಿಕೆ ನಡೆಸಿದ್ದ. ಇದರಿಂದ ಆಕೆಗೆ ಮತ್ತಷ್ಟು ಭೀತಿ ಹೆಚ್ಚಾಯಿತು. ಈ ಆತಂಕದಿಂದಲೇ ಪತಿ ಕೊಲೆಗೆ ಯಶಸ್ವಿನಿ ಸಹ ಸಮ್ಮತಿಸಿದ್ದಳು ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ಹೌ ಟು ಕಿಲ್ ಎಂಬ ಪುಸ್ತಕ ಖರೀದಿಸಿ ಅದನ್ನು ಓದಿ ಹತ್ಯೆ ಹೇಗೆ ಮಾಡಬೇಕು ಎಂದು ತಾಯಿ-ಮಗಳು ತಿಳಿದುಕೊಂಡಿದ್ದರು. ಊಟದಲ್ಲಿ ನಿದ್ರೆ ಮಾತ್ರೆ ಬೆರಸಿಕೊಟ್ಟು ಆತ ನಿದ್ರೆಗೆ ಜಾರಿದಾಗ ಕತ್ತು ಸೀಳಿ ಕೊಲ್ಲಲು ನಿರ್ಧರಿಸಿದ್ದರು. ಅದರಂತೆ ಹತ್ಯೆಗೂ 10 ದಿನಗಳ ಮುನ್ನ ತನ್ನ ಕಾಲೇಜಿನ ಸಹಪಾಠಿಗೆ ಆರೋಗ್ಯ ಸಮಸ್ಯೆ ಕಾರಣಕ್ಕೆ ನಿದ್ರೆ ಮಾತ್ರೆ ಬೇಕಿದೆ ಎಂದು ಪತಿಗೆ ಸುಳ್ಳು ಹೇಳಿ ಮಾತ್ರೆ ತರಿಸಿದ್ದಳು. ಆದರೆ, ಜೀವ ಭೀತಿಯಿಂದ ಗನ್‌ ಮ್ಯಾನ್‌ ಹೊಂದಿದ್ದ ಲೋಕನಾಥ್‌, ಬೆಂಗಳೂರಿಗೆ ಪತ್ನಿ ಭೇಟಿಗೆ ಬಂದಾಗ ಮಾತ್ರ ಏಕಾಂಗಿಯಾಗಿ ಬರುತ್ತಿದ್ದ.

ಈ ವೇಳೆ ಪೂರ್ವ ಯೋಜಿತ ಸಂಚಿನಂತೆ ಲೋಕನಾಥ್ ನನ್ನು ಕೊಲೆಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

https://www.newsics.com/2025/03/27/shocking-minor-raped-by-uncle-girl-pregnant/

TAGGED:Wife who murdered real estate agent husband after reading 'How to Kill' book
Share This Article
Facebook Twitter Copy Link Print
Previous Article Viral ಮೈಮೇಲೆ ಪ್ರಜ್ಞೆಯಿಲ್ಲದಂತೆ ನೃತ್ಯ ಮಾಡುತ್ತಿದ್ದ ಬಾಲಕನಿಗೆ ದೊಣ್ಣೆಯೇಟು? ವೈರಲ್ ವಿಡಿಯೋ ನೋಡಿ
Next Article Viral ಕೇರಳದಲ್ಲಿದೆ ವಿಶ್ವದ ಅತ್ಯಂತ ಕುಬ್ಜ ಮೇಕೆ: ವೈರಲ್ ವಿಡಿಯೋ ನೋಡಿ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?