newsics.com
ಕೇರಳ:ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವ ಕೇರಳದ ಈ ವಿಶೇಷ ಮೇಕೆ ವಿಶ್ವದ ಅತ್ಯಂತ ಕುಬ್ಜ ಮೇಕೆ ಎಂಬ ದಾಖಲೆಯ ಪುಟ ಸೇರಿದೆ.
ಕೇರಳದ ರೈತ ಪೀಟರ್ ಲೆನು ತಮ್ಮ ಫಾರ್ಮ್‌ನಲ್ಲಿ ಸಾಕಿರುವ ಕರುಂಬಿ ಹೆಸರಿನ ಹೆಣ್ಣು ಕುಬ್ಜ ಮೇಕೆ ಗಾತ್ರದಲ್ಲಿ ತೀರಾ ಸಣ್ಣದಾಗಿದೆ. ಸುಮಾರು 4 ವರ್ಷ ವಯಸ್ಸಿನ ಕಪ್ಪು ಬಣ್ಣದ ಕೆನಡಾ ಪಿಗ್ಮಿ ತಳಿಯ ಈ ಮೇಕೆಯ ಎತ್ತರ 1.3 ಅಡಿ. ಸಾಮಾನ್ಯವಾಗಿ ಪಿಗ್ಮಿ ಮೇಕೆಗಳು 21 ಇಂಚುಗಳಷ್ಟು ಎತ್ತರದವೆರೆಗೆ ಬೆಳೆಯುತ್ತದೆ. ಆದ್ರೆ ಕರುಂಬಿ ಮಾತ್ರ 1.3 ಅಡಿ ಎತ್ತರದಷ್ಟು ಬೆಳೆದಿದೆ. 2021 ರಲ್ಲಿ ಜನಿಸಿದ ಕರುಂಬಿ ಕುಬ್ಜ ಮೇಕೆಯೆಂದು ಬಿರುದು ಪಡೆಯುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಗೆ ಸೇರಿದೆ
ಇದರ ಕುರಿತಾದ ವಿಡಿಯೋಯೊಂದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಕಪ್ಪು ಬಣ್ಣದ ಕುಬ್ಜ ಮೇಕೆಯನ್ನು ಕಾಣಬಹುದು.
https://www.instagram.com/reel/DHbZfG6sdCl/?igsh=ZWtjMG9majZ0Y3ow