newsics.com
ಬೆಂಗಳೂರು: ‘ಹೌ ಟು ಕಿಲ್’ ಎಂಬ ಪುಸ್ತಕದಿಂದ ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಸಿಂಗ್
ಕೊಲೆಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ
ತಾನೇ ತಂದು ಕೊಟ್ಟಿದ್ದ ನಿದ್ರೆ ಮಾತ್ರೆಯಿಂದಲೇ ಪತ್ನಿ ಹಾಗೂ ಅತ್ತೆಯಿಂದ ಲೋಕನಾಥ್ ಕೊಲೆಯಾಗಿದ್ದ ಸಂಗತಿ ಬಯಲಾಗಿದೆ.
ಕಳೆದ ಶನಿವಾರ ಬಿಳಿಜಾಜಿಹಳ್ಳಿ ಸಮೀಪದ ಬಿಜಿಎಸ್ ಲೇಔಟ್ನಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಲೋಕನಾಥ್ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ನಿ ಯಶಸ್ವಿನಿ ಹಾಗೂ ಅತ್ತೆ ಹೇಮಾ ಬಾಯಿಯನ್ನು ಬಂಧಿಸಿದ್ದ ಪೊಲೀಸರು, ಈ ಹತ್ಯೆ ಹಿಂದಿನ ಪೂರ್ವ ಸಿದ್ಧತೆ ಬಗ್ಗೆ ತನಿಖೆಗಿಳಿದಾಗ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ.
ಮೃತ ಲೋಕನಾಥ್ ಹಾಗೂ ಹೆಸರಘಟ್ಟ ಸಮೀಪದ ಕೆರೆಗುಡ್ಡದಹಳ್ಳಿ ಹೇಮಾ ಕುಟುಂಬವು ಸಂಬಂಧಿಕರಾಗಿದ್ದು, ಆತನ ಅಪರಾಧಿಕ ಚಟುವಟಿಕೆಗಳ ವಿಚಾರ ತಿಳಿದು ಆತನಿಂದ ಅವರು ಸಂಪರ್ಕ ಕಡಿತಗೊಂಡಿದ್ದರು. ಹೀಗಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಯಶಸ್ವಿನಿಯನ್ನು ಮರಳು ಮಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಈ ಸಂಗತಿ ತಿಳಿದು ಮಗಳಿಗೆ ಬುದ್ಧಿ ಹೇಳಿ ಲೋಕನಾಥ್ ಸಂಗದಿಂದ ಆಕೆಯ ಪೋಷಕರು ದೂರವಿರಿಸಿದ್ದರು. ಆಕೆ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮತ್ತೆ ಸೆಳೆದು ಕಳೆದ ಡಿಸೆಂಬರ್ನಲ್ಲಿ ಕುಣಿಗಲ್ ಉಪ ನೋಂದಣಿಧಿಕಾರಿಯಲ್ಲಿ ಮದುವೆಯಾಗಿದ್ದರು.
ಮದುವೆ ಬಳಿಕ ಹಿಂಸೆ: ಮದುವೆ ಬಳಿಕ ಲೋಕನಾಥ್, ‘ನಾನು ನಿನ್ನನ್ನು ವಿವಾಹವಾಗಿದ್ದೇ ಚಿತ್ರಹಿಂಸೆ ಕೊಡಲು. ನಿನ್ನ ತಂದೆ-ತಾಯಿಯನ್ನು ಸಹ ಜೀವ ಸಹಿತ ಉಳಿಸುವುದಿಲ್ಲ’ ಎಂದು ಪತ್ನಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಅವಳು ಬೇಕು ನೀನು ಬೇಕು ಎಂದಿದ್ದ. ಇದರಿಂದ ಯಶಸ್ವಿನಿ ಖಿನ್ನತೆಗೊಳಗಾಗಿದ್ದಳು. ಮಗಳ ಸ್ಥಿತಿ ಕಂಡು ಹೇಮಾ, ಏನಾಗಿದೆ ಎಂದು ವಿಚಾರಿಸಿದಾಗ ಎಲ್ಲ ವಿಚಾರ ತಿಳಿದಿದೆ. ಆಗ ಲೋಕನಾಥ್ ಜೀವಂತವಿದ್ದರೆ ನಾವು ಬದುಕಲು ಸಾಧ್ಯವಿಲ್ಲವೆಂದು ಕೊಲೆಗೆ ಸಂಚು ರೂಪಿಸಿದ್ದಾರೆ. ಯಶಸ್ವಿನಿ ಹಾಗೂ ಆಕೆಯ ಕುಟುಂಬದವರ ಬಗ್ಗೆ ಮಾಹಿತಿ ಸಂಗ್ರಹಿಸಲು ತನ್ನ ಸಹಚರರ ಮೂಲಕ ಆತ ಗೂಢಚಾರಿಕೆ ನಡೆಸಿದ್ದ. ಇದರಿಂದ ಆಕೆಗೆ ಮತ್ತಷ್ಟು ಭೀತಿ ಹೆಚ್ಚಾಯಿತು. ಈ ಆತಂಕದಿಂದಲೇ ಪತಿ ಕೊಲೆಗೆ ಯಶಸ್ವಿನಿ ಸಹ ಸಮ್ಮತಿಸಿದ್ದಳು ಎನ್ನಲಾಗಿದೆ.
ಆನ್ಲೈನ್ನಲ್ಲಿ ಹೌ ಟು ಕಿಲ್ ಎಂಬ ಪುಸ್ತಕ ಖರೀದಿಸಿ ಅದನ್ನು ಓದಿ ಹತ್ಯೆ ಹೇಗೆ ಮಾಡಬೇಕು ಎಂದು ತಾಯಿ-ಮಗಳು ತಿಳಿದುಕೊಂಡಿದ್ದರು. ಊಟದಲ್ಲಿ ನಿದ್ರೆ ಮಾತ್ರೆ ಬೆರಸಿಕೊಟ್ಟು ಆತ ನಿದ್ರೆಗೆ ಜಾರಿದಾಗ ಕತ್ತು ಸೀಳಿ ಕೊಲ್ಲಲು ನಿರ್ಧರಿಸಿದ್ದರು. ಅದರಂತೆ ಹತ್ಯೆಗೂ 10 ದಿನಗಳ ಮುನ್ನ ತನ್ನ ಕಾಲೇಜಿನ ಸಹಪಾಠಿಗೆ ಆರೋಗ್ಯ ಸಮಸ್ಯೆ ಕಾರಣಕ್ಕೆ ನಿದ್ರೆ ಮಾತ್ರೆ ಬೇಕಿದೆ ಎಂದು ಪತಿಗೆ ಸುಳ್ಳು ಹೇಳಿ ಮಾತ್ರೆ ತರಿಸಿದ್ದಳು. ಆದರೆ, ಜೀವ ಭೀತಿಯಿಂದ ಗನ್ ಮ್ಯಾನ್ ಹೊಂದಿದ್ದ ಲೋಕನಾಥ್, ಬೆಂಗಳೂರಿಗೆ ಪತ್ನಿ ಭೇಟಿಗೆ ಬಂದಾಗ ಮಾತ್ರ ಏಕಾಂಗಿಯಾಗಿ ಬರುತ್ತಿದ್ದ.
ಈ ವೇಳೆ ಪೂರ್ವ ಯೋಜಿತ ಸಂಚಿನಂತೆ ಲೋಕನಾಥ್ ನನ್ನು ಕೊಲೆಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
https://www.newsics.com/2025/03/27/shocking-minor-raped-by-uncle-girl-pregnant/