newsics.com
ಬೇಡದ ಕೂದಲುಗಳನ್ನು ಹೇಗೆ ತೆಗೆಯಬೇಕು ಎಂದು ಸ್ಯಾಂಡ್ ವುಡ್ ನಟಿ ಅದಿತಿ ಪ್ರಭುದೇವ ಹೇಳಿಕೊಟ್ಟಿದ್ದಾರೆ.
ಬ್ಲೇಡ್ ಕಂಪೆನಿಯೊಂದರ ಪೇಡ್ ಪ್ರಮೋಷನ್ ಅಂದರೆ, ಆ ಕಂಪೆನಿಯ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಟಿವಿಗಳಲ್ಲಿ ಬರುವ ಜಾಹೀರಾತುಗಳ ಬದಲಾಗಿದೆ ಸೆಲೆಬ್ರಿಟಿಗಳ ಯೂಟ್ಯೂಬ್ ಚಾನೆಲ್ಗಳಿಗಾಗಿಯೇ ಅವರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಈ ರೀತಿಯ ಜಾಹೀರಾತುಗಳನ್ನು ಹಾಕಿಸಿಕೊಳ್ಳಲಾಗುತ್ತದೆ. ಯಾವುದೋ ವಿಷಯದ ವಿಡಿಯೋ ಮಾಡುವ ನಡುವೆ, ಈ ಜಾಹೀರಾತುಗಳನ್ನು ಕೂಡ ಅವರ ಫಾಲೋವರ್ಸ್ ತಲೆಯಲ್ಲಿ ಬಿಡುವುದು ಇದರ ಟ್ರಿಕ್ಸ್. ಇಲ್ಲಿ ಕೂಡ ಬ್ಲೇಡ್ ಕಂಪೆನಿಯೊಂದರ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲೇಡ್ ಯಾವುದೇ ಇರಲಿ ಆದರೆ ಶೇವ್ ಮಾಡುವ ಸರಿಯಾದ ವಿಧಾನ ಯಾವುದು ಎನ್ನುವುದನ್ನು ಅದಿತಿ ಇದರಲ್ಲಿ ಹೇಳಿಕೊಟ್ಟಿದ್ದಾರೆ.
https://youtu.be/iOFqmapCW-4
ಬ್ಲೇಡ್ ನಿಂದ ಕೂದಲನ್ನು ತೆಗೆಯುವಾಗ ಕೂದಲು ಯಾವ ರೀತಿ ಬೆಳೆದಿರುತ್ತದೆಯೋ ಅದೇ ರೀತಿ ತೆಗೆಯಬೇಕಾಗುತ್ತದೆ. ಉದಾಹರಣೆಗೆ ಕಾಲಿನ ಕೂದಲನ್ನು ತೆಗೆಯುವಾಗ ಮೇಲಿನಿಂದ ಕೆಳಕ್ಕೆ ಬ್ಲೇಡ್ ಜಾರಿಸಬೇಕು, ಅದೇ ರೀತಿ ಕೈಕೂದಲು ಕೂಡ ಅದೇ ರೀತಿ ತೆಗೆಯಬೇಕು. ಕೈ ಮತ್ತು ಕಾಲಿನ ಕೂದಲನ್ನು ತೆಗೆದಬಳಿಕ ಡಯಾಗ್ನಲ್ ಶೇಪ್ನಲ್ಲಿ ಬ್ಲೇಡ್ ಆಡಿಸಿದರೆ ಚಿಕ್ಕಪುಟ್ಟ ಕೂದಲು ಇದ್ದರೆ ಅದು ಕೂಡ ಹೊರಟುಹೋಗುತ್ತದೆ ಎಂದು ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ಅದೇ ರೀತಿ ದೇಹದಲ್ಲಿನ ಯಾವ ಭಾಗದ ಕೂದಲನ್ನು ತೆಗೆಯಬೇಕು ಎಂದರೂ ಅದು ಬೆಳೆದ ಭಾಗದಂತೆಯೇ ತೆಗೆಯಬೇಕು, ಆಪಾಸಿಟ್ ಡೈರೆಕ್ಷನ್ನಲ್ಲಿ ತೆಗೆಯಬೇಡಿ ಎಂದು ನಟಿ ಹೇಳಿದ್ದಾರೆ.
ಸದ್ಯ 10 ತಿಂಗಳ ಮಗುವಾಗಿರುವ ನಟಿ, ರಿಯಾಲಿಟಿ ಷೋ ಸೇರಿದಂತೆ ಮಗಳ ಲಾಲನೆ, ಪಾಲನೆ, ಫೋಟೋಶೂಟ್ಗಳಲ್ಲಿ ಬಿಜಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ.