newsics.com
ಪಂಜಾಬ್: ಮಾತೌರ್ ಕಾರ್ಖಾನೆಯ ರೆಫ್ರಿಜರೇಟರ್ ಒಳಗೆ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿರುವ ಘಟನೆ ಪಂಜಾಬ್‌ನ ಮೊಹಾಲಿ ಬಳಿ ನಡೆದಿದೆ.
ಪಾತ್ರೆಗಳಲ್ಲಿ ಸ್ವಲ್ಪ ಮಾಂಸವೂ ಕಂಡುಬಂದಿದ್ದು,. ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕಾರ್ಖಾನೆಯಲ್ಲಿ ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ತಯಾರಿಸಿ ಅನೇಕ ಸ್ಥಳಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಕಾರ್ಖಾನೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿತ್ತು. ಇಲ್ಲಿ ಆಹಾರ ಪದಾರ್ಥಗಳನ್ನು ತುಂಬಾ ಕೊಳಕು ಸ್ಥಿತಿಯಲ್ಲಿ ತಯಾರಿಸಿ ನಂತರ ಸರಬರಾಜು ಮಾಡಲಾಗುತ್ತಿತ್ತು.
ನಾಯಿ ತಲೆ ಮತ್ತು ಸ್ವಲ್ಪ ಮಾಂಸ ಪತ್ತೆಯಾದ ಮೇಲೆ ಈಗ ನಾಯಿ ಮಾಂಸವನ್ನು ಮೊಮೊಸ್‌ನಲ್ಲಿ ಹಾಕಿ ಜನರಿಗೆ ತಿನ್ನಿಸಲಾಗಿದೆಯೇ ಅಥವಾ ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಸ್ವತಃ ತಿನ್ನುತ್ತಿದ್ದಾರೆಯೇ ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಈ ನಾಯಿಯ ದೇಹದ ಒಂದು ಭಾಗ ಕಾಣೆಯಾಗಿದೆ. ತಲೆ ಕೂಡ ಪೂರ್ಣವಾಗಿಲ್ಲ. ತಲೆಯನ್ನು ಪರೀಕ್ಷೆಗಾಗಿ ಪಶುವೈದ್ಯಕೀಯ ಇಲಾಖೆಗೆ ಕಳುಹಿಸಲಾಗಿದೆ.
ಆರೋಗ್ಯ ಮತ್ತು ಪುರಸಭೆ ತಂಡಗಳು ಮಾತೌರ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ, ಫ್ರಿಡ್ಜ್‌ನಲ್ಲಿ ನಾಯಿಯ ತಲೆ ಪತ್ತೆಯಾಗಿದೆ. ಮೊಹಾಲಿ ಪುರಸಭೆಯು ಕಾರ್ಖಾನೆಯ ಮಾಲೀಕರಿಗೆ 12,000 ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಪ್ಲಾಸ್ಟಿಕ್ ಚೀಲಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದ ಹಿನ್ನೆಲೆ 10,000 ರೂ. ದಂಡವನ್ನು ವಿಧಿಸಲಾಗಿದೆ.