newsics.com
ಬೆಂಗಳೂರು: ಹಣಕ್ಕಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಟೆಕ್ಕಿಯೊಬ್ಬರು ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಅವರು ಪತ್ನಿಯ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಪತ್ನಿ ಮೇಲೆ ಪತಿ ಆರೋಪ ಏನು?
“2022ರ ಆಗಷ್ಟ್‌ನಲ್ಲಿ ಆಕೆಯನ್ನು ವಿವಾಹವಾಗಿದ್ದೇನೆ. ಮದುವೆಯಾಗಿ ಎರಡು ವರ್ಷಗಳಾದರೂ ಸಹ ಒಂದು ದಿನ ಸರಿಯಾಗಿ ಸಂಸಾರ ಮಾಡಿಲ್ಲ. ಬಲವಂತವಾಗಿ ಮುಟ್ಟಿದರೆ ಡೆತ್‌ನೋಟ್ ಬರೆದಿಟ್ಟು ಸಾಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಾಳೆ. ಒಂದು ದಿನ ಮಲಗಬೇಕು ಅಂದ್ರೆ ಐದು ಸಾವಿರ ರೂ. ಕೊಡಬೇಕು ಅಂತ ಹೇಳ್ತಾಳೆ. ಹಣಕ್ಕಾಗಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಮತ್ತು ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪತ್ನಿ ಮನೆಯವರು ಮನೆ ಕೊಂಡುಕೊಳ್ಳಲು ಲಕ್ಷಾಂತರ ರೂ. ಹಣ ಕೇಳಿದ್ದರು. ಹಣ ನೀಡದಿದ್ದಕ್ಕೆ ಪತ್ನಿ ಕಡೆಯಿಂದ ಕಿರುಕುಳ ಕೊಡಿಸುತ್ತಿದ್ದಾರೆ. ನೀನು ಸರಿ ಹೋಗುವವರೆಗೂ ನಿನ್ನ ಪಕ್ಕ ಬರಲ್ಲ. ಹೀಗಾಗಿ, 60 ವರ್ಷ ಆದ್ಮೇಲೆ ಮಕ್ಕಳು ಮಾಡಿಕೊಳ್ಳೋಣ” ಎಂದು ಪತ್ನಿ ಮತ್ತು ಅವರ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ.
“ಖಾಸಗಿ ಕಂಪನಿವೊಂದರಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದೆ ವರ್ಕ್ ಫ್ರಮ್ ಹೋಮ್ ವೇಳೆ ಪತ್ನಿಯ ಕಿರುಕುಳದಿಂದ ಕೆಲಸ ಕಳೆದುಕೊಂಡಿದ್ದೇನೆ. ಮೀಟಿಂಗ್ ವೇಳೆ ಬಂದು ಜಗಳ, ಡ್ಯಾನ್ಸ್ ಮಾಡುತ್ತಾಳೆ. ವಿಚ್ಛೇದನ ಕೇಳಿದರೆ 45 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪತ್ನಿ ವಿರುದ್ಧ ಆರೋಪಿಸಿದ್ದಾರೆ.
ಇನ್ನು, ಪೊಲೀಸರು ಆಕೆಯ ಹೇಳಿಕೆ ಪಡೆದುಕೊಂಡಿದ್ದು, “ಆತನ ಜೊತೆ ಬಾಳಲು ಇಷ್ಟ ಇಲ್ಲ, ಇಬ್ಬರಿಗೂ ಸರಿಹೊಂದಲ್ಲ ಎಂದು ಹೇಳಿದ್ದಾರೆ.