newsics.com
ಮನೆ ಕೆಲಸಕ್ಕೆ ಕೆಲಸದವರು ಸಿಗದೇ ಪರದಾಡುತ್ತಿರುವವರಿ ಗುಡ್ ನ್ಯೂಸ್ ಸಿಕ್ಕಿದೆ. ಗೃಹ ಸೇವೆಗಳನ್ನು ಒದಗಿಸುವ ಅರ್ಬನ್ ಕಂಪನಿ ‘ಇನ್ಸ್ಟಾ ಮೇಡ್ಸ್’ ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯು 15 ನಿಮಿಷಗಳಲ್ಲಿ ಮನೆಯ ಕೆಲಸದವರನ್ನು ಬುಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.
ಈ ಸೇವೆಯು ಪಾತ್ರೆಗಳನ್ನು ತೊಳೆಯುವುದು, ಗುಡಿಸುವುದು ಮತ್ತು ಒರೆಸುವುದು, ಆಹಾರ ತಯಾರಿಕೆ ಸೇರಿದಂತೆ ಹಲವು ಮನೆಯ ಕೆಲಸಗಳನ್ನು ಒಳಗೊಂಡಿದೆ. ಮನೆಯ ಕೆಲಸದವರಿಗೆ ಒಂದೊಂದು ಕೆಲಸಕ್ಕೆ ಏನಿಲ್ಲ ಎಂದರೂ ಒಂದರಿಂದ ಎರಡು ಸಾವಿರ ಚಾರ್ಜ್ ಮಾಡಲಾಗುತ್ತದೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಇದರ ಬೆಲೆ ಇನ್ನೂ ಹೆಚ್ಚು. ಆದರೆ ‘ಇನ್ಸ್ಟಾ ಮೇಡ್ಸ್’ನಲ್ಲಿ ಬುಕ್ ಮಾಡಿದರೆ, ಗಂಟೆಗೆ 49 ರೂಪಾಯಿಗಳಲ್ಲಿ ಸೇವೆಗೆ ಕೆಲಸದವರು ಸಿಗಲಿದ್ದಾರೆ ಎನ್ನಲಾಗಿದೆ.
ಸದ್ಯ ಇದನ್ನು ಮುಂಬೈನಲ್ಲಿ ಮಾತ್ರ ಪರೀಕ್ಷಾರ್ಥವಾಗಿ ಸೇವೆ ಒದಗಿಸಲಾಗುತ್ತಿದೆ. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಆಧಾರದ ಮೇಲೆ ಇದನ್ನು ಎಲ್ಲೆಡೆಗಳಲ್ಲಿ ವಿಸ್ತರಿಸಲಾಗುವುದು.