Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಆಗಮನ: ಈ ಹಳ್ಳಿಯಲ್ಲಿ ನಿತ್ಯವೂ ನಡೆದಿತ್ತು ಪ್ರಾರ್ಥನೆ
ದೇಶಪ್ರಮುಖವಿದೇಶ

ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಆಗಮನ: ಈ ಹಳ್ಳಿಯಲ್ಲಿ ನಿತ್ಯವೂ ನಡೆದಿತ್ತು ಪ್ರಾರ್ಥನೆ

Share
2 Min Read
SHARE

newsics.com

ವಾಷಿಂಗ್ಟನ್: ಬರೋಬ್ಬರಿ 9 ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಲಿದ್ದಾರೆ.

ಈ‌ ಬಗ್ಗೆ ನಾಸಾ ಅಧಿಕೃತ ಪ್ರಕಟಣೆ ತಿಳಿಸಿದ್ದು, ಸುನಿತಾ ಸುರಕ್ಷಿತವಾಗಿ ಬರಲೆಂದು ವಿಶ್ವವೇ ಬೇಡಿಕೊಳ್ಳುತ್ತಿತ್ತು. ಇದೀಗ ಎಲ್ಲರ ಹಾರೈಕೆ, ಪ್ರಾರ್ಥನೆ ಫಲಿಸಿದೆ. ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಮರಳಲಿರುವ ಬಗ್ಗೆ ನಾಸಾ ಮಾಹಿತಿ ನೀಡಿದೆ.

ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗಿನ ಜಾವ 3.27ಕ್ಕೆ ಭೂಮಿಗೆ ಮರಳಲಿದ್ದಾರೆ ಎಂದು ತಿಳಿಸಿದೆ.

ಮೊದಲು ಎಂಟೇ ದಿನಗಳ ಕಾಲ ಅಂತರಿಕ್ಷದಲ್ಲಿರುವ ಪ್ಲಾನ್ ಇತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ 9 ತಿಂಗಳು ಅಂತರಿಕ್ಷದಲ್ಲೇ ಇರಬೇಕಾಯ್ತು. ಹೀಗಾಗಿ ಸುನಿತಾ ವಿಲಿಯಮ್ಸ್ ಸುರಕ್ಷತೆಗಾಗಿ ಇಡೀ ವಿಶ್ವ ಬೇಡಿಕೊಳ್ಳುತ್ತಿತ್ತು. ಭಾರತದಲ್ಲೂ ಸುನಿತಾ ವಿಲಿಯಮ್ಸ್ ಅವರ ಸೇಫ್‌ ಲ್ಯಾಡಿಂಗ್‌ಗಾಗಿ ಕೂಗು ಕೇಳಿ ಬಂದಿಥತು. ಇದಕ್ಕೆ ಈಗ ಪ್ರತಿಫಲ ಸಿಕ್ಕಿದೆ.

ಸುನೀತಾ ವಿಲಿಯಮ್ಸ್ ಭಾರತ ಮೂಲದವರು. ಹೀಗಾಗಿಯೇ ಭಾರತದಲ್ಲಿ ಅವರ ಸುರಕ್ಷತೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅದರಲ್ಲೂ ಅವರ ತಂದೆಯ ಗ್ರಾಮವಾದ ಗುಜರಾತ್‌ನ ಮೆಹ್ಸಾನಾದಲ್ಲಿರುವ ಜೂಲಾಸನ್‌ನಲ್ಲಿ ಅವರ ಆದಷ್ಟು ಬೇಗ ಸುರಕ್ಷಿತವಾಗಿ ವಾಪಸ್ ಬರಲೆಂದು ಪ್ರತಿನಿತ್ಯ ಪ್ರಾರ್ಥನೆಗಳು ಜರುಗುತ್ತಿದ್ದವು.

ಈಗ ಅವರ ಪ್ರಾರ್ಥನೆಗಳಿಗೆಲ್ಲಾ ಫಲ ಸಿಕ್ಕಿದ್ದು, ಸುನೀತಾ ವಿಲಿಯಮ್ಸ್ ಮರಳಿ ಬರುತ್ತಿರುವ ಸುದ್ದಿ ಇಡೀ ಗ್ರಾಮಕ್ಕೆ ಖುಷಿ ನೀಡಿದೆ. ಸುನೀತಾ ವಿಲಿಯಮ್ಸ್‌ ಬರುತ್ತಿದ್ದಾರೆ ಎಂದು ಸುದ್ದಿ ತಿಳಿದ ಮೇಲೂ ಅವರ ಸುರಕ್ಷಿತ ಮರಳುವಿಕೆಗೆ ಮತ್ತಷ್ಟು ಪ್ರಾರ್ಥನೆಗಳು ಸಾಗಿವೆ.

ಸುನೀತಾ ವಿಲಿಯಮ್ಸ್ ಈ ಗ್ರಾಮಕ್ಕೆ ಎರಡು ಬಾರಿ ಭೇಟಿ ನೀಡಿದ್ದರಂತೆ. ಈಗ ಭೂಮಿಗೆ ಮರಳುತ್ತಿದ್ದಂತೆ ಮತ್ತೊಮ್ಮೆ ಭೇಟಿ ನೀಡಲು ಆಹ್ವಾನ ನೀಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಸುನೀತಾ ವಿಲಿಯಮ್ಸ್ ನಮ್ಮ ಗ್ರಾಮದ ಮಗಳು ಮತ್ತು ಅವರ ಸಾಧನೆ ತುಂಬಾ ದೊಡ್ಡದಾಗಿದೆ. ನಾವು ಅವರ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ. ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಅವರು ಹಿಂದಿರುಗಿದ ನಂತರ ನಮ್ಮ ಗ್ರಾಮಕ್ಕೆ ಬರಬೇಕೆಂದು ನಾವು ಆಶಿಸುತ್ತೇವೆ ಎಂದು ಜೂಲಾಸನ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶಾಲ್ ಪಟೇಲ್ ಹೇಳಿದ್ದಾರೆ.

ಅವರನ್ನು ನಮ್ಮ ಊರಿಗೆ ಸ್ವಾಗತಿಸಲು ಮತ್ತು ಅವರನ್ನು ಭೇಟಿ ಮಾಡಲು ನಾವು ಉತ್ಸುಕರಾಗಿದ್ದೇವೆ. ಬಾಹ್ಯಾಕಾಶದಲ್ಲಿ ಅವರ ಅನುಭವಗಳನ್ನು ಕೇಳಲು ನಮಗೆ ತುಂಬಾ ಕುತೂಹಲವಿದೆ ಎಂದಿದ್ದಾರೆ.

ಇತ್ತ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ಸುನೀತಾ ವಿಲಿಯಂ ಅವರ ಸುರಕ್ಷಿತ ಮರಳುವಿಕೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಜತೆಗೆ ಸುರಕ್ಷಿತವಾಗಿ ಭೂಮಿಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ಜೀವಂತ ಮಗಳ ಶ್ರಾದ್ಧ ಮಾಡಿ, ಪಿಂಡ ಇಟ್ಟ ಪೋಷಕರು

ಮನೆ ಬಿಟ್ಟು ಬಂದ ಅಪ್ರಾಪ್ತೆ ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ

Viral video ಕಾಮುಕ ಪ್ರೊಫೆಸರ್ ನಿಂದ ಶಾಕಿಂಗ್‌ ದಂಧೆ ; ವಿದ್ಯಾರ್ಥಿನಿಯರ ನಗ್ನ ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್

Appu ಪುಸ್ತಕದ ರೂಪದಲ್ಲಿ ಬರುತ್ತಿದೆ ಪುನೀತ್ ಜೀವನ ಚರಿತ್ರೆ.!

TAGGED:Sunita Williams arrives on Wednesday morning: Prayers were held daily in this village
Share This Article
Facebook Twitter Copy Link Print
Previous Article Amazon layoffs: ಬರೋಬ್ಬರಿ 14,000 ಮ್ಯಾನೇಜರ್ ಗಳ ವಜಾ ಮಾಡಲು ಮುಂದಾದ ಅಮೆಜಾನ್
Next Article ಸುನೀತಾ ವಿಲಿಯಮ್ಸ್ ಆಗಮನವನ್ನು ಇಲ್ಲಿ ವೀಕ್ಷಿಸಿ… ಇಲ್ಲಿದೆ ಲಿಂಕ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?