newsics.com
ವಾಷಿಂಗ್ಟನ್/ನವದೆಹಲಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಸಂಜೆ ಭೂಮಿಗೆ ಮರಳುತ್ತಿದ್ದಾರೆ. ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27ರ ಹೊತ್ತಿಗೆ ಭೂಮಿಯನ್ನು ಸ್ಪರ್ಶಿಸಲಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ.
ನೌಕೆಯ ಬಾಗಿಲು ಮುಚ್ಚುವುದರಿಂದ ಅದು ಭೂಮಿಯನ್ನು ತಲುಪುವವರೆಗಿನ ಸಂಪೂರ್ಣ ಪ್ರಕ್ರಿಯೆಯ ನೇರ ಪ್ರಸಾರವನ್ನು ನಾಸಾ ಒದಗಿಸುತ್ತಿದೆ. ನೇರ ಪ್ರಸಾರವನ್ನು ಈ ಲಿಂಕ್ನಲ್ಲಿ ನೋಡಿ.
https://www.youtube.com/live/IDYt1l_7UvU?si=zhvFmf0kxi4V2RTo
ಈ ಪ್ರಕ್ರಿಯೆಗಳನ್ನು ನೀವು ನಾಸಾದ ಅಧಿಕೃತ ಅಂತರ್ಜಾಲ ತಾಣ www.nasa.gov/live ಮೂಲಕವೂ ವೀಕ್ಷಿಸಬಹುದು. ಮಂಗಳವಾರ ಬೆಳಗ್ಗೆ 8.15ಕ್ಕೆ ಗಗನಯಾತ್ರಿಗಳನ್ನು ಭೂಮಿಗೆ ಕರೆ ತರುವ ನೌಕೆಯ ಬಾಗಿಲುಗಳು ಮುಚ್ಚಿವೆ.
ಈ ಹಂತದ ನೇರಪ್ರಸಾರವನ್ನು ನಾಸಾ ಕೇವಲ ಧ್ವನಿ ಮಾಧ್ಯಮದ ಮೂಲಕ ಪ್ರಸಾರ ಮಾಡಿದೆ. ಬುಧವಾರ ನಸುಕಿನ 3.27ರ ಸಮಯಕ್ಕೆ ಭೂಮಿ ಮುಟ್ಟುವ ಕ್ಷಣ ಆರಂಭವಾಗಲಿದೆ.
ಬುಧವಾರ (ಮಾರ್ಚ್ 19) ಬೆಳಗಿನ ಜಾವ 5 ಗಂಟೆಗೆ ಇವರು ಸುನಿತಾ, ಬುಚ್ ನಿಗದಿತ ಸ್ಥಳದಲ್ಲಿ ಇಳಿಯಲಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಗಳನ್ನು ನಾಸಾದ ಕಮರ್ಷಿಯಲ್ ಕ್ರೂ ಬ್ಲಾಗ್ನಲ್ಲೂ www.nasa.gov/commercialcrew ನಲ್ಲೂ ಕೂಡ ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ.
ಸ್ಪೇಸ್ ಎಕ್ಸ್ ಕ್ರೂ ‘ಡ್ರ್ಯಾಗನ್’ ಈಗಾಗಲೇ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಸುನಿತಾ, ಬುಚ್ ಹಾಗೂ ಇತರ ಗಗನಯಾತ್ರಿಗಳನ್ನು ಹೊತ್ತು ನೌಕೆಯು ಫ್ಲಾರಿಡಾ ಕಡಲತೀರಕ್ಕೆ ಬಂದಿಳಿಯಲಿದೆ. ಸುದೀರ್ಘ 17 ಗಂಟೆಗಳ ಪ್ರಯಾಣದ ನಂತರ ಭೂಮಿಯನ್ನು ತಲುಪಲಿದ್ದಾರೆ ಈ ಗಗನಯಾತ್ರಿಗಳು.
ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್ 5ಕ್ಕೆ ಐಎಸ್ಎಸ್ಗೆ ತೆರಳಿದ್ದ ಸುನಿತಾ ಹಾಗೂ ಮಿಲ್ಮೋರ್ 8 ದಿನಗಳ ನಂತರ ಭೂಮಿಗೆ ಮರಳಬೇಕಿತ್ತು. ಆದರೆ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿದ ಹಿನ್ನೆಲೆ ಅವರು ಬಾಹ್ಯಾಕಾಶದಲ್ಲಿಯೇ ಉಳಿಯುವಂತಾಯಿತು.
ಇಂದು ಐಎಸ್ಎಸ್ನಿಂದ ಡ್ರ್ಯಾಗನ್ ಮೂಲಕ ಭೂಮಿಗೆ ತಲುಪಲಿರುವ ಇವರು ಮೊದಲು ಫ್ಲೋರಿಡಾದ ಕಡಲತೀರವನ್ನು ತಲುಪಲಿದ್ದಾರೆ. ಅದಕ್ಕಾಗಿ ಫ್ಲೋರಿಡಾ ಸಮುದ್ರ ತೀರದ ಹವಾಮಾನ ಪರಿಸ್ಥಿತಿಯನ್ನು ಕೂಡ ತಂತ್ರಜ್ಞರು ಪರಿಶೀಲಿಸಿದ್ದಾರೆ.
https://x.com/Commercial_Crew/status/1901422933366456607?t=7x-4QqI7e9MRRRddVt5iVQ&s=19