newsics.com
ಚಿತ್ರದುರ್ಗ: ರಿಸೆಪ್ಶನ್ನಲ್ಲಿ ಊಟದ ವೇಳೆ ಕುಡಿಯುವ ನೀರನ್ನು ಸರಿಯಾಗಿ ನೀಡಲಿಲ್ಲವೆಂಬ ಕಾರಣಕ್ಕೆ ಉಂಟಾದ ಜಗಳದಿಂದ ಮದುವೆಯೇ ರದ್ದಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ಈ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಜಗಳೂರಿನ ವರ ಮನೋಜ್ಕುಮಾರ್ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧು ಅನಿತಾ ಅವರ ರಿಸೆಪ್ಶನ್ ಶನಿವಾರ ಸಂಜೆ ಅದ್ಧೂರಿಯಾಗಿಯೇ ನಡೆಯಿತು.
ಆದರೆ ಊಟದ ವೇಳೆ ಉಂಟಾದ ಕುಡಿಯುವ ನೀರಿನ ಜಗಳ ಭಾನುವಾರ ಬೆಳಗ್ಗೆವರೆಗೂ ನಡೆಯಿತು. ಭಾನುವಾರ ಬೆಳಗ್ಗೆ 10:30ಕ್ಕೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಸಂಧಾನ ಸಾಧ್ಯವಾಗಲೇ ಇಲ್ಲ. ಜಗಳ ಮುಗಿಯಲೇ ಇಲ್ಲ. ಸಪ್ತಪದಿ ತುಳಿಯಬೇಕಿದ್ದ ವಧು-ವರರೂ ಜಗಳ ಮಾಡುವುದರಲ್ಲೇ ಮಗ್ನರಾಗಿದ್ದರಿಂದ ವಿವಾಹ ನಡೆಯಲೇ ಇಲ್ಲ.
ಮಾರ್ವಾಡಿ ಮನೆ ಹೋಳಿ ಊಟ ತಿಂದ ಹಾಸ್ಟೆಲ್ನ 30 ಮಕ್ಕಳು ಆಸ್ಪತ್ರೆಗೆ ದಾಖಲು, ಓರ್ವ ವಿದ್ಯಾರ್ಥಿ ಸಾವು
A.R. Rahman hospitalized ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Naga Chaitanya ರೇಸ್ ಟ್ರ್ಯಾಕ್ ಅಂದ್ರೆ ಶೋಭಿತಾಗೂ ಸಖತ್ ಇಷ್ಟ ಎಂದ ನಾಗ ಚೈತನ್ಯ