ಬೆಂಗಳೂರಲ್ಲಿ ಕುಡುಕರ ಹೊಡೆದಾಟ: ಮೂವರ ಸಾವು, ಓರ್ವನ ಬಂಧನ
newsics.com ಬೆಂಗಳೂರು: ಬಿಹಾರ ಮೂಲದ ಆರು ಜನ ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ಆ ಪೈಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಪೋರ್ ವಾಲ್ ಅವೆನ್ಯೂ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿ ಈ ಭೀಕರ ಮಾರಾಮಾರಿ ನಡೆದಿದೆ. ಅನ್ಸು(19), ರಾಧೆ ಶ್ಯಾಮ್(20) ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. … Continue reading ಬೆಂಗಳೂರಲ್ಲಿ ಕುಡುಕರ ಹೊಡೆದಾಟ: ಮೂವರ ಸಾವು, ಓರ್ವನ ಬಂಧನ
Copy and paste this URL into your WordPress site to embed
Copy and paste this code into your site to embed