newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸಚಿವರ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ನಡೆದಿದೆ.
ಸಚಿವರಾದ ಶರಣಪ್ರಕಾಶ್ ಮತ್ತು ಬೋಸರಾಜು ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತವನ್ನೂ ತಲುಪಿತ್ತು ಎನ್ನಲಾಗಿದೆ.
ರಾಯಚೂರು ಜಿಲ್ಲೆಯ ಕೆಲವು ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸಚಿವ ಬೋಸರಾಜು ಅವರು ಆಕ್ಷೇಪ ವ್ಯಕ್ತಪಡಿಸಿದ್ದೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸುವ ಸಲುವಾಗಿ ಶರಣಪ್ರಕಾಶ್ ಪಾಟೀಲ್ ವರ್ಗಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬೋಸರಾಜು ಆರೋಪಿಸಿದ್ದಾರೆ. ನಾನು ರಾಯಚೂರು ಜಿಲ್ಲೆಯವನು, ವರ್ಗಾವಣೆ ವಿಚಾರದಲ್ಲಿ ಯಾಕೆ ಪತ್ರ ನೀಡುತ್ತೀರಾ?” ಎಂದು ಬೋಸರಾಜು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶರಣಪ್ರಕಾಶ್ ಪಾಟೀಲ್, ನಾನು ರಾಯಚೂರು ಉಸ್ತುವಾರಿ ಸಚಿವನಾಗಿದ್ದು, ಶಾಸಕರು ಕೇಳಿದ್ದಾರೆ ಅದಕ್ಕೆ ಪತ್ರ ನೀಡಿದ್ದೇನೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಲೆಟರ್ ಕೊಟ್ಟ ವಿಚಾರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟನೆ ಕೊಟ್ಟರೂ ಬೋಸರಾಜು ತಣ್ಣಗಾಗಲಿಲ್ಲ. ಬದಲಿಗೆ ಮತ್ತಷ್ಟು ಗರಂ ಆದರು. ಆಗ ಇಬ್ಬರೂ ಏರುದನಿಯಲ್ಲಿ ಮಾತನಾಡುತ್ತಾ ಕೈ ಕೈ ಮಿಲಾಯಿಸುವ ಹಂತ ತಲುಪಿದರು ಎನ್ನಲಾಗಿದೆ.
ಸೋಮವಾರ ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಜೆಟ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದರು. ಬಜೆಟ್ ಬಗ್ಗೆ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡುವಂತೆಯೂ ಸಿದ್ದರಾಮಯ್ಯ ಶಾಸಕರುಗಳಿಗೆ ಖಡಕ್ ಸೂಚನೆ ನೀಡಿದರು ಎಂದು ವರದಿಯಾಗಿದೆ.
anorexia nervosa ಸೋಷಿಯಲ್ ಮೀಡಿಯಾ ಡಯೆಟ್: ಅನೋರೆಕ್ಸಿಯಾ ನರ್ವೋಸಾಗೆ ಪಿಯು ವಿದ್ಯಾರ್ಥಿನಿ ಬಲಿ